ನವದೆಹಲಿ : ಭಾರತ ತಂಡದ ಸದಸ್ಯರೊಂದಿಗೆ ಕೊಹ್ಲಿ ಮಾತನಾಡುವುದು ಮತ್ತು ವರ್ತಿಸುವುದನ್ನು ನೋಡುತ್ತಿದ್ದರೆ ಆತ ನಮ್ಮ ಬಾಲ್ಯದ ಗೆಳೆಯ ಎಂಬಂತೆ ಭಾಷವಾಗುತ್ತದೆ ಎಂದು ಟೀಂ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ.
50 ಪಂದ್ಯಗಳಿಂದ 180 ವಿಕೆಟ್ ಪಡೆದಿರುವ ಮೊಹಮ್ಮದ್ ಶಮಿ ಇಂಗ್ಲೆಂಡ್ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದ ಜೊತೆಯಲ್ಲಿ ಇಂಗ್ಲೆಂಡ್ಗೆ ತೆರಳಲು ಸಜ್ಜಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕೊಹ್ಲಿಯ ನಾಯಕತ್ವದ ಬೌಲಿಂಗ್ ಘಟಕದ ಯಶಸ್ಸಿನಲ್ಲಿ ಪ್ರಮುಖ ಭಾಗವಾಗಿರುವ ಶಮಿ ಕೊಹ್ಲಿ ಬೌಲರ್ಗಳ ನಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಯಾವಾಗಲೂ ವೇಗದ ಬೌಲರ್ಗಳಿಗೆ ಬೆಂಬಲ ನೀಡುತ್ತಾರೆ. ನಮಗೆ ಮೈದಾನದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ಒಮ್ಮೊಮ್ಮೆ ನಮ್ಮ ಯೋಜನೆಗಳು ವಿಫಲವಾದಾಗ ಮಾತ್ರ ಅವರು ನಮ್ಮನ್ನು ಬಿಟ್ಟು ಮುಂದುವರಿಯುತ್ತಾರೆ,
ಇಲ್ಲವಾದರೆ ಅವರು ಬೌಲಿಂಗ್ ಘಟಕಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ ಮತ್ತು ಸದಾ ಬೆಂಬಲ ನೀಡುತ್ತಾರೆ ಎಂದು ಕ್ರಿಕ್ಬಜ್ಗೆ ಶಮಿ ಹೇಳಿದ್ದಾರೆ.
ನಮ್ಮ ವೇಗವ ಬೌಲಿಂಗ್ ಘಟಕದ ಮಟ್ಟಿಗೆ ಅಥವಾ ವೈಯಕ್ತಿಕವಾಗಿ ಕೊಹ್ಲಿ ಯಾವುದೇ ರೀತಿಯ ಅನಗತ್ಯವನ್ನು ಒತ್ತಡವನ್ನು ಬೌಲರ್ಗಳ ಮೇಲೆ ಏರಿರುವುದನ್ನು ಕಂಡಿಲ್ಲ. ಯಾವುದೇ ಬೌಲರ್ಗೆ ನಾಯಕನಿಗೆ ಹತ್ತಿರವಾಗುವ ಮೊದಲು ಮನಸ್ಸಿನಲ್ಲಿ ಒಂದು ಅನುಮಾನವಿರುತ್ತದೆ.
ಆದರೆ. ವಿರಾಟ್ ಜೊತೆಗೆ ಇದ್ದಾಗ ಆಗನ್ನಿಸುವುದಿಲ್ಲ. ಅವರು ತಮ್ಮ ಬಗ್ಗೆ ಎಂದೂ ಪ್ರಸಾರ ಮಾಡಲೋಗುವುದಿಲ್ಲ, ಸದಾ ನಮ್ಮೊಂದಿಗೆ ತಮಾಷೆಯಿಂದಿರುತ್ತಾರೆ, ಅವರು ನಮ್ಮ ಬಾಲ್ಯದ ಸ್ನೇಹಿತನಂತೆ ವರ್ತಿಸುತ್ತಾರೆ, ಮೈದಾನದಲ್ಲೂ ತುಂಬಾ ತಮಾಷೆಯಾಗಿರುತ್ತಾರೆ ಎಂದು ಶಮಿ ನಾಯಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲವೊಮ್ಮೆ ನಾವು ಆಕ್ರಮಣಕಾರಿಯಂತೆ ಕಾಣುತ್ತೇವೆ, ಒಬ್ಬರಿಗೊಬ್ಬರು ಕೆಲವು ವಿಷಯಗಳನ್ನು ಹೇಳುತ್ತೇವೆ. ಆದರೆ ಅದನ್ನು ಎಂದಿಗೂ ನಾವು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ.
ಎಲ್ಲರೂ ದೇಶಕ್ಕಾಗಿ ಶ್ರಮಿಸುತ್ತಿರುತ್ತಾರೆ ಮತ್ತು ಅದು ತುಂಬಾ ಒಳ್ಳೆಯದು. ಅವರು ಸದಾ ನಮ್ಮ ಯೋಜನೆಗಳ ಬಗ್ಗೆ ಕೇಳುತ್ತಾರೆ, ಇದು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ಪ್ರಬುದ್ಧರನ್ನಾಗಿ ಮಾಡಿದೆ ಎಂದು ಶಮಿ ಹೇಳಿದ್ದಾರೆ.
ಇದನ್ನು ಓದಿ:ಬುಮ್ರಾ 400 ಟೆಸ್ಟ್ ವಿಕೆಟ್ ಪಡೆಯಬಲ್ಲರು; ಕರ್ಟ್ಲೀ ಆ್ಯಂಬ್ರೋಸ್