ETV Bharat / sports

ಸಿಡ್ನಿಯಲ್ಲಿ ವಿರಾಟ್​ ಕೊಹ್ಲಿ ಸಿಕ್ಸರ್ ಪಟಾಕಿ; ತನ್ನದೇ ಶಾಟ್‌ಗೆ ರನ್‌ ಮಷಿನ್‌ ಅಚ್ಚರಿ

ಚೇಸ್​ ಮಾಸ್ಟರ್​ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಅಜೇಯ ಓಟ ಮುಂದುವರಿಸಿದ್ದಾರೆ. 2 ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದರೂ ಇದುವರೆಗೂ ಔಟ್​ ಆಗಿಲ್ಲ. ಡಚ್​ ವೇಗಿಗೆ ದಂಗು ಬಡಿಯುವಂತೆ ಸಿಕ್ಸರ್​ ಸಿಡಿಸಿದ್ದು, ಅದು "ಶಾಟ್​​​ ಆಫ್​ ದಿ ಮ್ಯಾಚ್​" ಆಯಿತು.

virat-kohli-shot-of-the-match
ಸಿಡ್ನಿಯಲ್ಲಿ ವಿರಾಟ್​ ಕೊಹ್ಲಿ ಸಿಕ್ಸರ್ ಪಟಾಕಿ
author img

By

Published : Oct 27, 2022, 7:21 PM IST

ಸಿಡ್ನಿ(ಆಸ್ಟ್ರೇಲಿಯಾ): ಟಿ20 ವಿಶ್ವಕಪ್​ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶರವೇಗದ ಬೌಲರ್​ ಹ್ಯಾರೀಸ್​ ರೌಫ್​ಗೆ ಬ್ಯಾಕ್​ ಟು ಬ್ಯಾಕ್​ ಸಿಕ್ಸರ್​ ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದ್ದ ವಿರಾಟ್​ ಕೊಹ್ಲಿ, ನೆದರ್​ಲ್ಯಾಂಡ್​ ಪಂದ್ಯದಲ್ಲೂ ಓವರ್​ ಕವರ್​ ಮೇಲೆ ಬಾಲ್​ ತೇಲಿಸಿ ಹೊಡೆದ ಸಿಕ್ಸರ್ ಅಭಿಮಾನಿಗಳನ್ನು ಚಕಿತಗೊಳಿಸಿತು.

ಕ್ರಿಕೆಟ್​ ಶಿಶು ಡಚ್ಚರ ವಿರುದ್ಧ ಬ್ಯಾಟಿಂಗ್ ಪರಾಕ್ರಮ ಮೆರೆದ ಚೇಸ್​​ ಮಾಸ್ಟರ್​ 44 ಎಸೆತಗಳಲ್ಲಿ 62 ರನ್​ ಚಚ್ಚಿದರು. ವಿಶ್ವಕಪ್​ನಲ್ಲಿ ಸತತ 2 ನೇ ಅರ್ಧಶತಕ ಬಾರಿಸಿದ ಕೊಹ್ಲಿ ಇನಿಂಗ್ಸ್​ನಲ್ಲಿ 2 ಸಿಕ್ಸರ್​ಗಳಿದ್ದವು.

ಕೊಹ್ಲಿ ಸ್ಟನ್ನಿಂಗ್​​ ಸಿಕ್ಸರ್​: ನೆದರ್​ಲ್ಯಾಂಡ್​ನ ಫ್ರೆಡ್ ಕ್ಲಾಸೆನ್ ಎಸೆದ 17ನೇ ಓವರ್‌ನಲ್ಲಿ ಕೊಹ್ಲಿ ಓವರ್​ ಕವರ್​ನಲ್ಲಿ ಖಾಲಿ ಜಾಗಕ್ಕೆ ಗುರಿಯಾಗಿ ಬೌಲ್​ ಅನ್ನು ಬಲವಾಗಿ ಹೊಡೆದರು. ಅದು ನೇರವಾಗಿ ಬೌಂಡರಿ ಗೆರೆಯಾಚೆ ಹೋಗಿ ಬಿದ್ದಿತು. ಈ ಹೊಡೆತ ಕೊಹ್ಲಿಗೇ ಅಚ್ಚರಿ ತಂದಿದೆ. ಚೆಂಡು ನೋಡನೋಡುವಷ್ಟರಲ್ಲಿ ರಾಕೆಟ್​ನಂತೆ ಗೆರೆ ದಾಟಿ ಬಿದ್ದಿತ್ತು.

ಕೊಹ್ಲಿಯ ಈ ಅದ್ಭುತ ಸಿಕ್ಸರ್​ಗೆ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕರತಾಡನದ ಸದ್ದು ಮೇಳೈಸಿದರು. ಇಂತಹ ಹೊಡೆತಗಳನ್ನು ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವಾಗ ಬಾರಿಸಿದ್ದ ನೆನಪು ಮರುಕಳಿಸಿತು.

ನಿಧಾನಗತಿಯಲ್ಲಿ ಬೌಲ್​ ಮಾಡುತ್ತಿದ್ದ ಡಚ್ಚರ ಬೌಲಿಂಗ್​ ಎದುರಿಸುವುದು ಭಾರತೀಯರಿಗೆ ಕಿರಿಕಿರಿ ಉಂಟು ಮಾಡಿತು. ಅರ್ಧಶತಕ ಸಿಡಿಸಿದ ಚೇಸ್​ ಮಾಸ್ಟರ್​ ಮೊದಲ ಬೌಂಡರಿ ಬಾರಿಸಲು 31 ಎಸೆತ ತೆಗೆದುಕೊಂಡರು. ಅದಾಗಲೇ ತಂಡ 10 ಓವರ್​ ದಾಟಿತ್ತು. ಬಳಿಕ ಬ್ಯಾಟ್​ಗೆ ಪಾಠ ಹೇಳಿದ ಕೊಹ್ಲಿ ಮುಂದಿನ 13 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್​ ಚಚ್ಚಿದರು. ಸೂರ್ಯಕುಮಾರ್​ ಯಾದವ್​ ಜೊತೆ ಸೇರಿ 48 ಎಸೆತಗಳಲ್ಲಿ 95 ರನ್​ಗಳ ಬಿರುಸಿನ ಜೊತೆಯಾಟವಾಡಿದರು.

ಏಷ್ಯಾಕಪ್ ನಂತರ ಕೊಹ್ಲಿ ಮತ್ತು ಸೂರ್ಯಕುಮಾರ್​ ಯಾದವ್​ ಕಟ್ಟಿದ ಮೂರನೇ ದೊಡ್ಡ ಜೊತೆಯಾಟ ಇದಾಗಿದೆ. ಈ ಹಿಂದೆ ಹಾಂಗ್​ಕಾಂಗ್ ವಿರುದ್ಧ 42 ಎಸೆತಗಳಲ್ಲಿ 98 ರನ್, ಆಸ್ಟ್ರೇಲಿಯಾ ವಿರುದ್ಧ 62 ಎಸೆತಗಳಲ್ಲಿ 104 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 42 ಎಸೆತಗಳಲ್ಲಿ 102 ರನ್ ಸಹಭಾಗಿತ್ವದ ಆಟವಾಡಿದ್ದರು.

ಇದನ್ನೂ ಓದಿ: ಒಂದು ಪಂದ್ಯ ಸಾಧನೆ ಹಲವು..: ನೆದರ್ಲ್ಯಾಂಡ್‌ ವಿರುದ್ಧ ಟೀಂ ಇಂಡಿಯಾ ದಾಖಲೆ ವಿಕ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.