ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮುಂಬೈನ ವಾಖೆಂಡೆ ಮೈದಾನದಲ್ಲಿ ಆರಂಭಗೊಂಡಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ನಡೆಸುತ್ತಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅನಗತ್ಯ ರೆಕಾರ್ಡ್ ನಿರ್ಮಾಣ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ಎಸೆದ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದು, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ವಿರಾಟ್ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಲ ಡಕೌಟ್ ಆಗಿರುವ ಭಾರತದ ಮೊದಲ ಕ್ಯಾಪ್ಟನ್ ಎಂಬ ಅಪಖ್ಯಾತಿಗೆ ಪಾತ್ರರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 2021ರಲ್ಲೇ ವಿರಾಟ್ ಕೊಹ್ಲಿ ನಾಲ್ಕು ಸಲ ಶೂನ್ಯಕ್ಕೆ ಔಟಾಗಿದ್ದು, ಒಟ್ಟಾರೆ 10 ಸಲ ಡಕೌಟ್ ಆಗಿರುವ ಅಪಖ್ಯಾತಿಗೆ ಪಾತ್ರರಾಗಿದ್ದಾರೆ. 1983ರಲ್ಲಿ ಕಪಿಲ್ ದೇವ್ 4 ಸಲ, 2011ರಲ್ಲಿ ಎಂಎಸ್ ಧೋನಿ 4 ಸಲ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು, 1976ರಲ್ಲಿ ಬಿಷನ್ ಬೇಡಿ 4 ಸಲ ಡಕೌಟ್ ಆಗಿದ್ದರು.
ತವರಿನ ಟೆಸ್ಟ್ ಪಂದ್ಯಗಳಲ್ಲೇ ಕೊಹ್ಲಿ ಆರು ಸಲ ಡಕೌಟ್ ಆಗಿದ್ದು, ಮನ್ಸೂರ್ ಅಲಿ ಖಾನ್ ಪಟೌಡಿ 5 ಸಲ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಉಳಿದಂತೆ ಧೋನಿ ಹಾಗೂ ಕಪಿಲ್ ದೇವ್ 3 ಸಲ ವಿಕೆಟ್ ಒಪ್ಪಿಸಿದ್ದಾರೆ.
-
Clearly see there was deviation. Ball hit bat first. Virat Kohli immediately take review. Third umpire doing such mistake. Nothing is going good for Virat Kohli. #IndvsNZtest #ViratKohli pic.twitter.com/P3Ugpa3rY3
— Arjit Gupta (@guptarjit) December 3, 2021 " class="align-text-top noRightClick twitterSection" data="
">Clearly see there was deviation. Ball hit bat first. Virat Kohli immediately take review. Third umpire doing such mistake. Nothing is going good for Virat Kohli. #IndvsNZtest #ViratKohli pic.twitter.com/P3Ugpa3rY3
— Arjit Gupta (@guptarjit) December 3, 2021Clearly see there was deviation. Ball hit bat first. Virat Kohli immediately take review. Third umpire doing such mistake. Nothing is going good for Virat Kohli. #IndvsNZtest #ViratKohli pic.twitter.com/P3Ugpa3rY3
— Arjit Gupta (@guptarjit) December 3, 2021
ಟಿ-20 ವಿಶ್ವಕಪ್ ಮುಕ್ತಾಯಗೊಳ್ಳುತ್ತಿದ್ದಂತೆ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಹಾಗೂ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಆದರೆ, ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಂಡಿದ್ದಾರೆ.
ವಿವಾದಕ್ಕೆ ಕಾರಣವಾದ ವಿರಾಟ್ ಎಲ್ಬಿ
ನ್ಯೂಜಿಲ್ಯಾಂಡ್ ವಿರುದ್ಧದ ಇಂದಿನ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಎಲ್ಬಿ ಬಲೆಗೆ ಬಿದ್ದಿರುವುದು ಅನೇಕ ವಿವಾದಕ್ಕೆ ಕಾರಣವಾಗಿದೆ. ಆಜಾಜ್ ಪಟೇಲ್ ಎಸೆದ ಓವರ್ನಲ್ಲಿ ವಿರಾಟ್ ಎಲ್ಬಿ ಬಲೆಗೆ ಬಿದ್ದರು. ಆದರೆ, ಬಾಲ್ ಮೊದಲು ಬ್ಯಾಟ್ಗೆ ಬಡೆದಿರುವುದು ಖಚಿತಗೊಂಡಿತ್ತು. ಇದರ ಹೊರತಾಗಿ ಕೂಡ ಥರ್ಟ್ ಅಂಪೈರ್ ಎಲ್ಬಿ ಎಂದು ಘೋಷಣೆ ಮಾಡಿದರು. ಈ ವಿಷಯವನ್ನಿಟ್ಟುಕೊಂಡು ಅನೇಕ ಮಾಜಿ ಕ್ರಿಕೆಟರ್ಸ್ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.