ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಬುಧವಾರ ಮಾರ್ಚ್ 22 ರಂದು ನಡೆಯಲಿದೆ. ವಿಸಾಪಟ್ಟಣಂನಲ್ಲಿ ಭಾರತದ ಹೀನಾಯ ಸೋಲಿನ ನಂತರ ಸರಣಿ 1-1ರಲ್ಲಿ ಸಮಬಲವಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯ ಸರಣಿ ನಿರ್ಣಾಯಕವಾಗಲಿದೆ.
ಫೈನಲ್ನಲ್ಲಿ ಭರ್ಜರಿ ಫೈಟ್ ನಿರೀಕ್ಷೆ ಇದೆ. ಎರಡೂ ತಂಡಕ್ಕೆ ಸರಣಿ ಮುಖ್ಯವಾಗಿದೆ. ಹೀಗಾಗಿ ಟಾಸ್ ಮತ್ತು ಪಿಚ್ ಪಂದ್ಯದ ಫಲಿತಾಂಶಕ್ಕೆ ಹೆಚ್ಚು ಪರಿಣಾಕಾರಿಯಾಗಿರಲಿದೆ. ಕೊನೆಯ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿರುವ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಹೆಚ್ಚು ರನ್ನ ನಿರೀಕ್ಷೆ ಇದೆ. ಇದಕ್ಕೆ ಕಾರಣ ವಿರಾಟ್ ಆಸ್ಟ್ರೇಲಿಯಾ ಮೇಲೆ ಹಾಗೂ ಚೆಪಾಕ್ನಲ್ಲಿ ಹೊಂದಿರುವ ದಾಖಲೆಗಳು.
ಗೆಲುವು ವಿರಾಟ್ ಕೊಹ್ಲಿ ಮೇಲೆ ಅವಲಂಬಿತ: ಮೂರನೇ ಟೆಸ್ಟ್ ಡ್ರಾ ಆಗುವಲ್ಲಿ ವಿರಾಟ್ ಬ್ಯಾಟಿಂಗ್ ಪ್ರಮುಖವಾಗಿತ್ತು. ಎರಡನೇ ಪಂದ್ಯದಲ್ಲೂ ವಿರಾಟ್ 31 ರನ್ನೇ ಅತಿ ಹೆಚ್ಚಿನ ಮೊತ್ತವಾಗಿತ್ತು. ವಿರಾಟ್ ಫಾರ್ಮ್ನಲ್ಲಿದ್ದು, ದೊಡ್ಡ ಮೊತ್ತ ಅವರ ಬ್ಯಾಟ್ನಿಂದ ಬರಬೇಕಿದೆ. ಚೆನ್ನೈನ ಚೆಪಾಕ್ ಅವರ ನೆಚ್ಚಿನ ಕ್ರಿಡಾಂಗಣಗಳಲ್ಲಿ ಒಂದು ಹೀಗಾಗಿ ಇಲ್ಲಿ ಅವರ ಬ್ಯಾಟ್ ಘರ್ಜಿಸುವ ಸಾಧ್ಯತೆ ಹೆಚ್ಚಿದೆ.
ಚೆನ್ನೈನಲ್ಲಿ ನಡೆದ 7 ಏಕದಿನ ಪಂದ್ಯಗಳಲ್ಲಿ ವಿರಾಟ್ 283 ರನ್ ಗಳಿಸಿದ್ದಾರೆ. ಇದರಲ್ಲಿ ಅದ್ಭುತ ಶತಕವೂ ಸೇರಿದೆ. ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ. ಈ ಏಕದಿನ ಪಂದ್ಯದಲ್ಲಿ ವಿರಾಟ್‌ನಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ದೊಡ್ಡ ಸ್ಕೋರ್ ನಿರೀಕ್ಷಿಸುತ್ತಿದ್ದಾರೆ. ಇಲ್ಲಿಯವರೆಗಿನ ಅಂಕಿ ಅಂಶಗಳ ಪ್ರಕಾರ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಬ್ಯಾಟ್ ಬೀಸಿದರೆ ಆಸ್ಟ್ರೇಲಿಯಾ ಸೋಲು ಖಚಿತ ಎನ್ನಲಾಗುತ್ತಿದೆ.
ಕೊನೆಯ ಪಂದ್ಯದಲ್ಲಿ ಭಾರತ ಗೆದ್ದಿತ್ತು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಏಕದಿನ ಪಂದ್ಯ 2017 ರಲ್ಲಿ ಚೆನ್ನೈನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ 26 ರನ್‌ಗಳಿಂದ ಜಯ ಸಾಧಿಸಿತ್ತು. ಭಾರತ ನೀಡಿದ 282 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 9 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತ್ತು.
ಈ ಪಂದ್ಯದಲ್ಲಿ 83 ರನ್ ಗಳಿಸುವುದರೊಂದಿಗೆ 2 ವಿಕೆಟ್ ಪಡೆದ ಭಾರತದ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೈದಾನದಲ್ಲಿ ಭಾರತದ ಗರಿಷ್ಠ ಸ್ಕೋರ್ 299 ರನ್. ಭಾರತ ವಿರುದ್ಧ ಆಡಿದ ಕೊನೆಯ 10 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ 5 ಬಾರಿ ಗೆದ್ದಿದ್ದರೆ, ಟೀಂ ಇಂಡಿಯಾ 5 ಬಾರಿ ಗೆದ್ದಿದೆ.
ತಂಡದಲ್ಲಿ ಬದಲಾವಣೆ ಸಾದ್ಯತೆ: ಎರಡು ಪಂದ್ಯದಲ್ಲಿ ಹೊಡಿಬಡಿ ದಾಂಡಿಗ ಸೂರ್ಯ ಕುಮಾರ್ ಯಾದವ್ ಶೂನ್ಯ ಸುತ್ತಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಇಶನ್ ಕಿಶನ್ ಆಡುವ ಅವಕಾಶ ಇದೆ. ಕ್ರಿಕೆಟ್ ಅಭಿಮಾನಿಗಳು ಸಂಜು ಸ್ಯಾಮ್ಸನ್ಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಬೆನ್ನು ನೋವಿನ ಕಾರಣ ಅಯ್ಯರ್ ಹೊರಗುಳಿದಿರುವುದರಿಂದ ಮಧ್ಯಮ ಕ್ರಮಾಂಕದಲ್ಲಿ ಬದಲಿ ಆಟಗಾರನ್ನು ಬಿಸಿಸಿಐ ಘೋಷಿಸಿಲ್ಲ. ಸ್ಯಾಮ್ಸನ್ಗೆ ಈ ಅವಕಾಶ ಕೊಡಬಹುದಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಐಪಿಎಲ್ ಮಾದರಿಯ ಲೀಗ್: ಭಾರತೀಯ ಪ್ರಾಂಚೈಸಿಗಳದ್ದೇ ಕಾರುಬಾರು