ಲಂಡನ್: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬರೋಬ್ಬರಿ ಎರಡೂವರೆ ವರ್ಷಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸ್ತಿದ್ದಾರೆ. ಅವರ ಬ್ಯಾಟ್ನಿಂದ ಒಂದೇ ಒಂದು ಶತಕ ಸಹ ಸಿಡಿದಿಲ್ಲ. ಹೀಗಾಗಿ, ಅನೇಕ ಕ್ರಿಕೆಟ್ ದಿಗ್ಗಜರು ಕೊಹ್ಲಿ ಕುರಿತಾಗಿ ಟೀಕೆ ವ್ಯಕ್ತಪಡ್ತಿದ್ದಾರೆ. ಈ ಬೆನ್ನಲ್ಲೇ ಸ್ಫೂರ್ತಿದಾಯಕ ಸಂದೇಶವಿರುವ ಲೈನ್ಗಳಿರುವ ಚಿತ್ರದ ಮುಂದೆ ನಿಂತು ತೆಗೆಸಿಕೊಂಡಿರುವ ಫೋಟೋವನ್ನು ಟ್ವೀಟರ್ನಲ್ಲಿ ಶೇರ್ ಮಾಡಿದ್ದಾರೆ.
ಭಾರತ-ಇಂಗ್ಲೆಂಡ್ ನಡುವೆ ನಾಳೆ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ವಿರಾಟ್ ಕೊಹ್ಲಿಗೆ ಕೊನೆಯ ಅವಕಾಶವಾಗಲಿದೆ. ಇದರ ಮಧ್ಯೆ ಸ್ಫೂರ್ತಿದಾಯಕ ಲೈನ್ಗಳಿರುವ ಸಂದೇಶದೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ಕಮ್ಬ್ಯಾಕ್ ಮಾಡುವ ಮುನ್ಸೂಚನೆ ನೀಡಿದ್ದಾರೆ.
'ವಾಟ್ ಇಫ್ ಐ ಫಾಲ್!? ಓಹೋ ಬಟ್ ಮೈ ಡಾರ್ಲಿಂಗ್, ವಾಟ್ ಇಫ್ ಯು ಫ್ಲೈ ?' ಎಂಬ ಲೈನ್ಗಳಿರುವ ಹಾಗೂ ಎರಡು ರೆಕ್ಕೆಗಳಿರುವ ಕಲಾತ್ಮಕ ಫೋಟೋ ಮುಂದೆ ಕುಳಿತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಟೀಕಾಕಾರಿಗೆ ಕಮ್ಬ್ಯಾಕ್ ಮಾಡುವ ಕಠಿಣ ಸಂದೇಶ ರವಾನಿಸಿದ್ದಾರೆ.
-
Perspective pic.twitter.com/yrNZ9NVePf
— Virat Kohli (@imVkohli) July 16, 2022 " class="align-text-top noRightClick twitterSection" data="
">Perspective pic.twitter.com/yrNZ9NVePf
— Virat Kohli (@imVkohli) July 16, 2022Perspective pic.twitter.com/yrNZ9NVePf
— Virat Kohli (@imVkohli) July 16, 2022
ಕೊಹ್ಲಿ ಪೋಸ್ಟ್ಗೆ ಕೆವಿನ್ ಪೀಟರ್ಸನ್ ಪ್ರತಿಕ್ರಿಯೆ ನೀಡಿದ್ದು, ನೀವು, ದೊಡ್ಡ ಕ್ರಿಕೆಟರ್, ಕ್ರಿಕೆಟ್ನಲ್ಲಿ ನೀವು ಏನು ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಅತ್ಯುತ್ತಮ ಕ್ರಿಕೆಟ್ ಆಡಿರುವ ಕೆಲವೇ ವ್ಯಕ್ತಿಗಳಲ್ಲಿ ನೀವೂ ಒಬ್ಬರು ಎಂದಿದ್ದಾರೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಾಳೆ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದಾಗಿದೆ.
ಇದನ್ನೂ ಓದಿರಿ: ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ.. ಯಾರಿಗೆಲ್ಲಾ ಸ್ಥಾನ?
2019ರಲ್ಲಿ ವಿರಾಟ್ ಕೊಹ್ಲಿ ಕೊನೆಯದಾಗಿ ಶತಕ ಬಾರಿಸಿದ್ದಾರೆ. ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್, ಐಪಿಎಲ್ನಲ್ಲಿ ಅವರ ಬ್ಯಾಟ್ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ. ಹೀಗಾಗಿ, ಅವರ ವಿರುದ್ಧ ಅನೇಕರು ಟೀಕೆ ವ್ಯಕ್ತಪಡಿಸಿದ್ದು, ಇನ್ನೂ ಕೆಲವರು ರನ್ ಮಷಿನ್ ಬೆಂಬಲಕ್ಕೆ ನಿಂತಿದ್ದಾರೆ.