ETV Bharat / sports

ಎಲ್ಲ ಮಾದರಿ ಕ್ರಿಕೆಟ್​ನಿಂದಲೂ ವಿರಾಟ್​ ನಾಯಕತ್ವ ತ್ಯಜಿಸಲಿ: ಶಾಹಿದ್​​ ಆಫ್ರಿದಿ - ಟಿ-20 ಕ್ರಿಕೆಟ್ ವಿರಾಟ್​

ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ಗೂ(ODI and Test Cricket) ವಿರಾಟ್​ ಕೊಹ್ಲಿ ನಾಯಕತ್ವ ತೊರೆಯಬೇಕು ಎಂದಿರು ಶಾಹಿದ್ ಆಫ್ರಿದಿ, ಬ್ಯಾಟಿಂಗ್​ನಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರಲು ಈ ನಿರ್ಧಾರ ಅವಶ್ಯಕವಾಗಿದೆ ಎಂದಿದ್ದಾರೆ..

virat kohli
virat kohli
author img

By

Published : Nov 13, 2021, 5:44 PM IST

ಕರಾಚಿ(ಪಾಕಿಸ್ತಾನ) : ಈಗಾಗಲೇ ಟಿ-20 ಕ್ರಿಕೆಟ್(T-20 Cricket) ನಾಯಕತ್ವ ತೊರೆದಿರುವ ವಿರಾಟ್​​ ಕೊಹ್ಲಿ(Virat kohli) ಮುಂಬರುವ ದಿನಗಳಲ್ಲಿ ಏಕದಿನ(ODI) ಕ್ರಿಕೆಟ್​ ನಾಯಕತ್ವಕ್ಕೂ ವಿದಾಯ ಘೋಷಣೆ ಮಾಡಲಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಆಲ್​ರೌಂಡರ್ ಶಾಹಿದ್ ಆಫ್ರಿದಿ(shahid afridi) ಮಾತನಾಡಿದ್ದಾರೆ.

ಓರ್ವ ಬ್ಯಾಟರ್ ಆಗಿ ವಿರಾಟ್​ ಕೊಹ್ಲಿ ಮತ್ತಷ್ಟು ಸಾಧನೆ ಮಾಡಲು ಎಲ್ಲ ಮಾದರಿ ಕ್ರಿಕೆಟ್​ ನಾಯಕತ್ವ ತ್ಯಜಿಸಬೇಕು ಎಂದಿದ್ದಾರೆ. ಭಾರತೀಯ ಕ್ರಿಕೆಟ್(Indian cricket)​ಗೆ ವಿರಾಟ್​​ ಓರ್ವ ಅದ್ಭುತ ಶಕ್ತಿಯಾಗಿದ್ದಾರೆ.

ಮೂರು ಮಾದರಿ ಕ್ರಿಕೆಟ್​ನಿಂದ ನಾಯಕತ್ವ ತ್ಯಜಿಸಿದರೆ ಖಂಡಿತವಾಗಿ ಬ್ಯಾಟಿಂಗ್​​ನಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರಲಿದ್ದಾರೆಂದು ಮಾಜಿ ಆಲ್​ರೌಂಡರ್​​ ಅಭಿಪ್ರಾಯಪಟ್ಟಿದ್ದಾರೆ.

ಟಿವಿ ಚಾನೆಲ್​ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಆಫ್ರಿದಿ, ವಿರಾಟ್​ ಕೊಹ್ಲಿ ಓರ್ವ ಅಗ್ರ ಬ್ಯಾಟರ್ ಆಗಿದ್ದು, ನಾಯಕತ್ವದಿಂದ ಕೆಳಗಿಳಿದು, ಯಾವುದೇ ರೀತಿಯ ಒತ್ತಡವಿಲ್ಲದೇ ಮುಕ್ತವಾಗಿ ಕ್ರಿಕೆಟ್​ ಆಡಬೇಕು ಎಂದಿದ್ದಾರೆ.

ರೋಹಿತ್​, ಬಿಸಿಸಿಐ ಪರ ಆಫ್ರಿದಿ ಬ್ಯಾಟ್​

ಟಿ-20 ಕ್ರಿಕೆಟ್​ ನಾಯಕತ್ವಕ್ಕೆ ವಿರಾಟ್​​ ವಿದಾಯ ಘೋಷಣೆ ಮಾಡ್ತಿದ್ದಂತೆ ರೋಹಿತ್ ಶರ್ಮಾ ನೂತನ ನಾಯಕನಾಗಿ ಆಯ್ಕೆಯಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಆಫ್ರಿದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ-20 ನಾಯಕನನ್ನಾಗಿ ರೋಹಿತ್ ಶರ್ಮಾ ಅವರನ್ನ ನೇಮಕ ಮಾಡಿರುವ ಬಿಸಿಸಿಐ(BCCI) ನಿರ್ಧಾರ ಅತ್ಯುತ್ತಮವಾಗಿದೆ.

ಈ ಹಿಂದೆ ನಾನು ರೋಹಿತ್ ಶರ್ಮಾ ಜೊತೆ ಒಂದು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವರು ಆಕ್ರಮಣಶೀಲ ಹಾಗೂ ತಾಳ್ಮೆಯ ಗುಣ ಹೊಂದಿರುವ ಆಟಗಾರನಾಗಿದ್ದು, ಟೀಂ ಇಂಡಿಯಾಗೆ ಇದರ ಲಾಭ ಸಿಗಲಿದೆ ಎಂದಿದ್ದಾರೆ.

ಇಂಡಿಯನ್​ ಪ್ರೀಮಿಯರ್(Indian premier league) ಲೀಗ್​ನಲ್ಲಿ ಡೆಕ್ಕನ್​ ಚಾರ್ಜರ್ಸ್​​ ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ಶಾಹಿದ್​ ಆಫ್ರಿದಿ ಒಂದೇ ತಂಡದಲ್ಲಿ ಆಟವಾಡಿದ್ದರು.

ಇದನ್ನೂ ಓದಿರಿ: ಬ್ಯಾಟಿಂಗ್ ಕಡೆಗೆ ಗಮನ ಹರಿಸಲು ಕೊಹ್ಲಿ ODI ನಾಯಕತ್ವವನ್ನು ತ್ಯಜಿಸಬಹುದು: ರವಿಶಾಸ್ತ್ರಿ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಮಾತನಾಡಿದ್ದ ಟೀಂ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ,(Former India head coach Ravi Shastri) ಮುಂದಿನ ದಿನಗಳಲ್ಲಿ ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​ ನಾಯಕತ್ವ ಸಹ ತ್ಯಜಿಸಬಹುದು ಎಂಬ ಸುಳಿವು ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.