ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಹಿರಿಯ ವೇಗಿ ಇಶಾಂತ್ ಶರ್ಮಾ ಸೋಮವಾರ ತಮ್ಮ ಕೋವಿಡ್ 19 ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.
ಮುಂಬೈನಲ್ಲಿ ವಾಸಿಸುವ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತಿರುವ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ದಯವಿಟ್ಟು ಆದಷ್ಟು ಬೇಗ ನೀವು ಕೂಡ ಲಸಿಕೆ ಪಡೆದುಕೊಳ್ಳಿ ಮತ್ತು ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದಾರೆ.
ಇನ್ನು ವೇಗಿ ಇಶಾಂತ್ ಶರ್ಮಾ ಕೂಡ ತಮ್ಮ ಪತ್ನಿ ಮಾಜಿ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಫಾತಿಮಾ ಅವರ ಜೊತೆಗೆ ಕೋವಿಡ್ ಸೆಂಟರ್ ಬಳಿ ತೆಗೆದಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
-
#VaccinationDone✅
— Ishant Sharma (@ImIshant) May 10, 2021 " class="align-text-top noRightClick twitterSection" data="
Thankful for this and grateful for all the essential workers. Happy to see the smooth running of the facility & management.
Let’s all get vaccinated at the earliest. #GetVaccinated #CovidVaccine pic.twitter.com/3wRHeBwvTP
">#VaccinationDone✅
— Ishant Sharma (@ImIshant) May 10, 2021
Thankful for this and grateful for all the essential workers. Happy to see the smooth running of the facility & management.
Let’s all get vaccinated at the earliest. #GetVaccinated #CovidVaccine pic.twitter.com/3wRHeBwvTP#VaccinationDone✅
— Ishant Sharma (@ImIshant) May 10, 2021
Thankful for this and grateful for all the essential workers. Happy to see the smooth running of the facility & management.
Let’s all get vaccinated at the earliest. #GetVaccinated #CovidVaccine pic.twitter.com/3wRHeBwvTP
" ಲಸಿಕೆ ಪಡೆದಾಯ್ತು, ಇದಕ್ಕಾಗಿ ಧನ್ಯವಾದಗಳು. ಎಲ್ಲಾ ಕಾರ್ಮಿಕರಿಗೆ ನಾವು ಕೃತಜ್ಞರಾಗಿರಬೇಕು. ಸೌಲಭ್ಯ ಮತ್ತು ನಿರ್ವಹಣೆಯ ಸುಗಮ ಚಾಲನೆಯನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ. ಎಲ್ಲರೂ ಬೇಗನೆ ಲಸಿಕೆ ಪಡೆಯೋಣ, " ಎಂದು ಇಶಾಂತ್ ಶರ್ಮಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಪೇಸರ್ ಉಮೇಶ್ ಯಾದವ್ ಮತ್ತು ಹಿರಿಯ ಬ್ಯಾಟ್ಸ್ಮನ್ ಶಿಖರ್ ಧವನ್ ಈಗಾಗಲೇ ಲಸಿಕೆ ಪಡೆದಿದ್ದಾರೆ.
ಇದನ್ನು ಓದಿ: ಸಂಬಂಧಿಕರನ್ನು ಭೇಟಿ ಮಾಡಲು ಯುಎಸ್ಗೆ ತೆರಳಿದ್ದೆ, ಅಮೆರಿಕ ಲೀಗ್ನನಲ್ಲಿ ಭಾಗಿಯಾಗಿಲ್ಲ: ಚಾಂದ್ ಸ್ಪಷ್ಟನೆ