ETV Bharat / sports

IPL 2023: ಐಪಿಎಲ್​ನಲ್ಲಿ ಯಾರೂ ಮುರಿಯಲಾಗದ "ವಿರಾಟ್"​ ದಾಖಲೆ ಇದು..

ಫಾರ್ಮ್​ಗೆ ಮರಳಿರುವ ವಿರಾಟ್​ ಕೊಹ್ಲಿ ಬ್ಯಾಟ್​ನಿಂದ ಈ ಬಾರಿಯ ಐಪಿಎಲ್​ನಲ್ಲಿ ಬಹಳಷ್ಟು ರನ್​ ಬರುವ ನಿರೀಕ್ಷೆ ಇದ್ದು, ಅವರ ದಾಖಲೆಯನ್ನು ಅವರೇ ಬ್ರೇಕ್​ ಮಾಡುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

virat kohli ipl records more expectation in 16th season
ವಿರಾಟ್​ ಕೊಹ್ಲಿ
author img

By

Published : Mar 27, 2023, 6:29 PM IST

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2023 ಮುಂದಿನ ವಾರದಿಂದ ಪ್ರಾರಂಭವಾಗಲಿದೆ. ಈ ವೇಳೆ ಕ್ರಿಕೆಟ್ ಪ್ರೇಮಿಗಳು ಬೌಂಡರಿ ಮತ್ತು ಸಿಕ್ಸರ್‌ಗಳು ಮೈದಾನ ತುಂಬಾ ಮನರಂಜನೆ ನೀಡಲಿದೆ. ಈ ಬಾರಿ ಟಾಟಾ ಐಪಿಎಲ್ ಪ್ರಾಯೋಜಕತ್ವ ವಹಿಸಿಕೊಂಡಿದೆ. ಐಪಿಎಲ್ 16ನೇ ಆವೃತ್ತಿಯಲ್ಲಿ 10 ತಂಡಗಳ ನಡುವೆ ಒಟ್ಟು 74 ಪಂದ್ಯಗಳು ನಡೆಯಲಿವೆ. ಈ ಐಪಿಎಲ್ ಸೀಸನ್​ನಲ್ಲಿ ಮತ್ತೊಮ್ಮೆ ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಆಟಗಾರರ ನಡುವೆ ಹೋರಾಟ ನಡೆಯಲಿದ್ದು, ಇದಕ್ಕಾಗಿ 2016ರಿಂದ ಹಲವು ದೇಶಿ ಹಾಗೂ ವಿದೇಶಿ ಆಟಗಾರರು ಪ್ರಯತ್ನಿಸುತ್ತಿದ್ದರೂ ಅದರ ಸನಿಹಕ್ಕೆ ಬರಲು ಸಾಧ್ಯವಾಗಿಲ್ಲ.

ಈ ಬಾರಿ ಐಪಿಎಲ್​​ನಲ್ಲಿ ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿಯುವ ಸವಾಲು ಆಟಗಾರರಿಗೆ ಎದುರಾಗಲಿದ್ದು, ಇದಕ್ಕಾಗಿ ಹಲವು ಅನುಭವಿ ಆಟಗಾರರು ಪಟ್ಟು ಹಿಡಿದಿದ್ದರೂ ಇಲ್ಲಿಯವರೆಗೂ ಆ ದಾಖಲೆ ಮುರಿದಿಲ್ಲ. ಕಳೆದ ಬಾರಿ ಜೋಸ್ ಬಟ್ಲರ್ ಈ ದಾಖಲೆಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದರು. ಇದಕ್ಕೂ ಮುನ್ನ ಹಲವು ಆಟಗಾರರು ಇದನ್ನು ಮುರಿಯಲು ವಿಫಲರಾಗಿದ್ದರು.

virat kohli ipl records more expectation in 16th season
ವಿರಾಟ್​ ಕೊಹ್ಲಿ ರನ್​ ದಾಖಲೆ

2016ರ ದಾಖಲೆ: ಐಪಿಎಲ್ 2016ರ ಋತುವಿನಲ್ಲಿ ವಿರಾಟ್ ಕೊಹ್ಲಿ 973 ರನ್ ಗಳಿಸಿ, ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದ್ದಾರೆ. 2016 ರಿಂದ ಈ ದಾಖಲೆಯನ್ನು ಯಾವುದೇ ಆಟಗಾರ ಮುರಿದಿಲ್ಲ. 2018ರಲ್ಲಿ ಕೇನ್ ವಿಲಿಯಮ್ಸನ್, 2016ರಲ್ಲಿ ಡೇವಿಡ್ ವಾರ್ನರ್ ಹಾಗೂ 2022ರಲ್ಲಿ ಜೋಸ್ ಬಟ್ಲರ್ ಇದಕ್ಕಾಗಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದರೂ ಈ ಎಲ್ಲ ಆಟಗಾರರಿಗೂ ಕೊಹ್ಲಿ ದಾಖಲೆಯ ಸನಿಹಕ್ಕೆ ಬರಲು ಸಾಧ್ಯವಾಗಲಿಲ್ಲ.

2018 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವಾಗ ಕೇನ್ ವಿಲಿಯಮ್ಸನ್ 735 ರನ್ ಗಳಿಸಿದ್ದರು. 2018ರಲ್ಲಿ ಇದು ಐಪಿಎಲ್​ನ ಗರಿಷ್ಠ ರನ್​ ಗಳಿಕೆಯಾಗಿತ್ತು. ಇಷ್ಟೇ ಅಲ್ಲ ಡೇವಿಡ್ ವಾರ್ನರ್ ಕೂಡ 2016ರ ಸೀಸನ್ ನಲ್ಲಿ 848 ರನ್ ಗಳಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಯತ್ನಿಸಿದ್ದು, ಅದರಲ್ಲಿ ವಿಫಲರಾಗುತ್ತಿದ್ದರು. 2022ರಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ 863 ರನ್ ಗಳಿಸಿದರು.

ಇದುವರೆಗೆ ಯಾರು ಮುರಿದಿಲ್ಲ ವಿರಾಟ್​ ರನ್​ ದಾಖಲೆ

ಒಂದೇ ಆವೃತ್ತಿಯಲ್ಲಿ ನಾಲ್ಕು ಶತಕ: ಈ ಬಾರಿಯ ಐಪಿಎಲ್​ನಲ್ಲಿ ವಿರಾಟ್​ ಮೇಲೆ ಭರವಸೆ ಇದೆ. ಇತ್ತೀಚೆಗಷ್ಟೇ ಮೂರು ವಿಭಾಗದ ಕ್ರಿಕೆಟ್​ನಲ್ಲಿ ಲಯಕ್ಕೆ ಮರಳಿರುವ ಅವರು ಐಪಿಎಲ್​​ನಲ್ಲಿ ಘರ್ಜಿಸಿ ಅವರ ದಾಖಲೆಯನ್ನು ಅವರೇ ಮುರಿಯುತ್ತಾರ ಕಾದು ನೋಡಬೇಕಿದೆ. 2016ರ ಐಪಿಎಲ್​ನಲ್ಲಿ 4 ಶತಕಗಳನ್ನು ದಾಖಲಿಸಿದ್ದರು. ಒಂದೇ ಸೀಸನ್​ನಲ್ಲಿ ಅಷ್ಟು ಶತಕ ಮಾಡಿದ್ದು ಸಹ ರೆಕಾರ್ಡ್​ ಆಗಿದೆ. ಅದನ್ನೂ ಯಾರು ಇದುವರೆಗೆ ಮುರಿದಿಲ್ಲ. ದಾಖಲೆಯ ವೀರ "ಚೀಕು" ಈ ಬಾರಿ ಮತ್ತೆ ತಮ್ಮ ಅದ್ಭುತ ದಾಖಲೆ ಬರೆಯಲಿದ್ದಾರ ಎಂದು ಅಭಿಮಾನಿಗಳಯ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: IPL 2023: ಧೋನಿಯೇ ಮಾಡಿರುವ ನಿವೃತ್ತಿ ಪ್ಲಾನ್ ಇದು, ಚೆಪಾಕ್ ಸ್ಟೇಡಿಯಂನಲ್ಲಿ ತಯಾರಿ ಹೇಗಿದೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.