ETV Bharat / sports

ಐಸಿಸಿ ಟೆಸ್ಟ್​ ರ್‍ಯಾಂಕಿಂಗ್: ಕೊಹ್ಲಿ 5ರಲ್ಲಿ ತಟಸ್ಥ, ದಾಖಲೆಯ ಶ್ರೇಯಾಂಕ ಪಡೆದ ರಿಷಭ್ ಪಂತ್ - Rishabh pant

ವಿರಾಟ್​ ಕೊಹ್ಲಿ 5ನೇ ಸ್ಥಾನದಲ್ಲಿ ತಟಸ್ಥರಾಗಿದ್ದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಶತಕ ಸೇರಿದಂತೆ 270 ರನ್ ​ಗಳಿಸಿದ್ದ 23ರ ಹರೆಯದ ಪಂತ್ ಜಂಟಿ 9ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಟಾಪ್ 10 ಗೆ ಎಂಟ್ರಿಕೊಟ್ಟ ಮೊದಲ ವಿಕೆಟ್​ ಕೀಪರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ICC Test rankings
ಕೊಹ್ಲಿ ಪಂತ್
author img

By

Published : May 5, 2021, 7:02 PM IST

ದುಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ ತಮ್ಮ ಐದನೇ ಶ್ರೇಯಾಂಕ ಉಳಿಸಿಕೊಂಡಿದ್ದರೆ, ಪಂತ್ 6ನೇ ಸ್ಥಾನಕ್ಕೇರುವ ಮೂಲಕ ಟಾಪ್ 10 ಪ್ರವೇಶಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ವಿರಾಟ್​ ಕೊಹ್ಲಿ 5ನೇ ಸ್ಥಾನದಲ್ಲಿ ತಟಸ್ಥರಾಗಿದ್ದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಶತಕ ಸೇರಿದಂತೆ 270 ರನ್​ ಗಳಿಸಿದ್ದ 23ರ ಹರೆಯದ ಪಂತ್ ಜಂಟಿ 9ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಟಾಪ್ 10ಗೆ ಎಂಟ್ರಿಕೊಟ್ಟ ಮೊದಲ ವಿಕೆಟ್​ ಕೀಪರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಆರಂಭಿಕ ಬ್ಯಾಟ್ಸ್​ಮನ್ ರೋಹಿತ್ ಶರ್ಮಾ 8ನೇ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಒಂದು ದ್ವಿಶತಕ ಮತ್ತು ಒಂದು ಶತಕ ಸಹಿತ 3 ಇನ್ನಿಂಗ್ಸ್​ಗಳಲ್ಲಿ 428 ರನ್​ ಗಳಿಸಿದ್ದ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ 11 ಸ್ಥಾನ ಮೇಲೇರಿ 11ನೇ ಶ್ರೇಯಾಂಕ ಪಡೆದಿದ್ದಾರೆ. ಪೂಜಾರ 14, ರಹಾನೆ 15ನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್ ವಿಲಿಯಮ್ಸನ್(919)​ ಅಗ್ರ ಸ್ಥಾನದಲ್ಲಿದ್ದರೆ, ಸ್ಟೀವ್ ಸ್ಮಿತ್(891), ಲಾನುಶೇನ್(878) ಮತ್ತು ಜೋ ರೂಟ್​(831) ಕೊಹ್ಲಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ.

ಇದನ್ನು ಓದಿ: ಜನ ಸೋಂಕಿನಿಂದ ಸಾಯುತ್ತಿರುವಾಗ ಐಪಿಎಲ್​ ನೋಡುವುದು ಅಸಹ್ಯ; ನಾಸಿರ್ ಹುಸೇನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.