ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಖಂಡಿತ ಉತ್ತಮವಾಗಿ ಆಡಿಲ್ಲ. ಅವರ ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ ಬಹುದೊಡ್ಡ ದೋಷ ಕಂಡುಬಂದಿದೆ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ ಬ್ಯಾಟಿಂಗ್ನಲ್ಲಿ ನಿರಾಸೆ ಮೂಡಿಸಿದ್ದಾರೆ. ಕೇವಲ 20 ರನ್ಗಳಿಸಿ ಸ್ಟಂಪ್ನಿಂದ ಹೊರ ಹೋಗುತ್ತಿದ್ದ ಚೆಂಡನ್ನು ಕೆಣಕಿ ಸ್ಯಾಮ್ ಕರನ್ ಓವರ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟಾದರು. ಈ ರೀತಿ ಔಟಾಗಿರುವುದನ್ನು ಗವಾಸ್ಕರ್ ತಾಂತ್ರಿಕ ದೋಷ ಎಂದು ಪರಿಗಣಿಸಿದ್ದಾರೆ.
ಔಟ್ ಸೈಡ್ ಸ್ಟಂಪ್ ಹೋಗುವ ಚೆಂಡನ್ನು ಆಡುವ ವಿಧಾನ ಅವರಿಗೆ ಯಶಸ್ಸು ತಂದಿದೆ. ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಅದೇ ವಿಧಾನಗಳಿಂದ 8000 ರನ್ ಗಳಿಸಿದ್ದಾರೆ. ಆದರೆ ಈ ಇನ್ನಿಂಗ್ಸ್ನಲ್ಲಿ ಅವರು ಸ್ಟಂಪ್ನಿಂದ ಹೊರ ಹೋಗುವ ಚೆಂಡುಗಳನ್ನು ಸ್ವಲ್ಪ ಬೇಗ ಆಡಿದರು. ಈ ಸಂದರ್ಭದಲ್ಲಿ ಅವರ ಕಾಲು ಎಲ್ಲೋ ಇತ್ತು, ಅವರ ಬ್ಯಾಟ್ ಮತ್ತೆಲ್ಲೋ ಇತ್ತು. ಇದರರ್ಥ ಅವರು ಸರಿಯಾಗಿ ಆಡಲಿಲ್ಲ ಎಂದು ಗವಾಸ್ಕರ್ ಕೊಹ್ಲಿ ವಿಕೆಟ್ ಒಪ್ಪಿಸಿದ ರೀತಿಯನ್ನು ವಿವರಿಸಿದ್ದಾರೆ.
ಕೊಹ್ಲಿಯ ಬಗ್ಗೆ ಮಾತು ಮುಂದುವರಿಸಿ ಗವಾಸ್ಕರ್ " ನೀವು ಎದುರಾಳಿಯ ವಿಧಾನಕ್ಕೆ ತಕ್ಕಂತೆ ದಾಳಿ ಮಾಡಲು ಪ್ರಯತ್ನಿಸಿದಾಗ ಮತ್ತು ಅದೇ ನಿಮ್ಮ ಉದ್ದೇಶವಾಗಿದ್ದರೆ ಅದು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ನಾವು ಅದನ್ನು ಈ ಪಂದ್ಯದಲ್ಲಿ ನೋಡಿದ್ದೇವೆ. ಪ್ರತಿಯೊಬ್ಬ ಬ್ಯಾಟ್ಸ್‌ಮನ್ ತನ್ನದೇ ಆದ ದಾಳಿಯನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಇದು ಟೆಸ್ಟ್ ಪಂದ್ಯವಾಗಿರುವುದರಿಂದ ತಮ್ಮದೇ ಆದ ವಿಧಾನ ಮುಖ್ಯ ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.
ಇದನ್ನು ಓದಿ:ಮಂದ ಬೆಳಕಿನಲ್ಲೂ ಬ್ಯಾಟಿಂಗ್: ಸಹಆಟಗಾರರ ಮೇಲೆ ಕೊಹ್ಲಿ ರೋಹಿತ್ ಅಸಮಾಧಾನ