ETV Bharat / sports

'ನಾನೋರ್ವ ಪಾಕಿಸ್ತಾನಿಯಾಗಿ ಹೇಳುತ್ತಿದ್ದೇನೆ, ವಿರಾಟ್​ ಸಾರ್ವಕಾಲಿಕ ಶ್ರೇಷ್ಠ ಆಟಗಾರ': ಶೋಯೆಬ್​ ಅಖ್ತರ್​

ಬ್ಯಾಟಿಂಗ್​​ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಪರವಾಗಿ ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್​ ಅಖ್ತರ್​ ಬ್ಯಾಟ್​ ಬೀಸಿದ್ದಾರೆ. ಆತನೋರ್ವ ಸಾರ್ವಕಾಲಿಕ ಶ್ರೇಷ್ಠ ಆಟಗಾರನೆಂದು ಹೊಗಳಿದ್ದಾರೆ.

Virat kohli Greatest player of all time says Shoaib akhtar

author img

By

Published : Jun 1, 2022, 2:01 PM IST

ಹೈದರಾಬಾದ್​: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಕಳೆದ ಎರಡು ವರ್ಷದಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲೂ ಅದು ಮುಂದುವರೆದಿತ್ತು. ಅವರ ಬ್ಯಾಟಿಂಗ್​ ವೈಖರಿಗೆ ಸುನಿಲ್​ ಗವಾಸ್ಕರ್​ ಸೇರಿದಂತೆ ಅನೇಕ ದಿಗ್ಗಜರು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ, ಪಾಕಿಸ್ತಾನದ ವೇಗದ ಬೌಲರ್ ಅಖ್ತರ್ ಮಾತ್ರ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಅವರ ಬೆನ್ನಿಗೆ ನಿಂತಿದ್ದಾರೆ.

ಶೋಯೆಬ್​ ಅಖ್ತರ್ ಹೇಳಿದ್ದೇನು?: ವಿರಾಟ್​ ಕೊಹ್ಲಿ ಬಗ್ಗೆ ಒಳ್ಳೆಯದನ್ನ ಹೇಳುವುದಾದರೆ, ಮೊದಲಿಗೆ ಅವರಿಗೆ ಗೌರವ ನೀಡಿ. ಅವರಿಗೆ ನೀವೂ ಯಾವ ಕಾರಣಕ್ಕಾಗಿ ಗೌರವ ನೀಡುತ್ತಿಲ್ಲ. ಓರ್ವ ಪಾಕಿಸ್ತಾನಿಯಾಗಿ ನಾನು ಹೇಳುತ್ತಿದ್ದೇನೆ ಆತನೋರ್ವ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಖಂಡಿತವಾಗಿ ಅವರು 110 ಶತಕ ಪೂರೈಕೆ ಮಾಡಲಿದ್ದಾರೆ ಇದು ನನ್ನ ಬೆಟ್​ ಎಂದಿದ್ದಾರೆ.

ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ನೇರವಾಗಿ ಸಂದೇಶ ರವಾನೆ ಮಾಡಿರುವ ವಿರಾಟ್​ ಕೊಹ್ಲಿ, ನೀವು ಭಯಪಡುವ ಅವಶ್ಯಕತೆ ಇಲ್ಲ. ಏಕೆಂದರೆ ನೀವು 45 ವರ್ಷದವರೆಗೆ ಆಡಬೇಕಿದೆ. ಸದ್ಯದ ಪರಿಸ್ಥಿತಿಯ ನಿಮ್ಮನ್ನು 110 ಶತಕ ಸಿಡಿಸಲು ಸಿದ್ಧಗೊಳಿಸುತ್ತಿದೆ. ಜನರು ನಿಮ್ಮ ಬಗ್ಗೆ ಮಾತನಾಡುತ್ತಾರೆ. ಕಮೆಂಟ್ ಮಾಡ್ತಾರೆ, ಅದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನನ್ನ ಮಾತು ಗಮನದಲ್ಲಿಟ್ಟುಕೊಂಡು, ಅದರತ್ತ ಹೆಜ್ಜೆ ಹಾಕಿ ಎಂದಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಹದಗೆಟ್ಟ ಆರ್ಥಿಕ ಸ್ಥಿತಿ.. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ​​ ಆಯೋಜನೆ ಬಗ್ಗೆ ಹೇಳಿದ್ದೇನು!?

ವಿರಾಟ್​ ಕೊಹ್ಲಿ 2019ರಿಂದಲೂ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಈಗಷ್ಟೇ ಮುಕ್ತಾಯಗೊಂಡಿರುವ ಐಪಿಎಲ್​ನಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ರನ್​ ಮಷಿನ್ ಖ್ಯಾತಿಯ ವಿರಾಟ್​, 16 ಪಂದ್ಯಗಳಿಂದ 341ರನ್​​ಗಳಿಸಿದ್ದು, ಇದರಲ್ಲಿ ಕೇವಲ ಎರಡು ಅರ್ಧಶತಕ ಸೇರಿಕೊಂಡಿವೆ. ವಿಶೇಷವೆಂದರೆ ವಿರಾಟ್​ ಕೊಹ್ಲಿ ಕ್ವಾಲಿಫೈಯರ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದು, ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಾರದ ಕಾರಣ ಅವರಿಗೆ ಕೆಲ ವಾರಗಳ ಕಾಲ ವಿಶ್ರಾಂತಿ ನೀಡುವಂತೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜೂನ್ 9ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ವಿಶ್ರಾಂತಿ ನೀಡಿದ್ದಾರೆ. ಇದಾದ ಬಳಿಕ ಇಂಗ್ಲೆಂಡ್​ ವಿರುದ್ಧ ಟೆಸ್ಟ್​​ ಸರಣಿ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.