ETV Bharat / sports

ಹೊಸ ದಾಖಲೆ ಬರೆದ ಕಿಂಗ್​ ಕೊಹ್ಲಿ.. ಈ ಸಾಧನೆ ಮಾಡಿದ ಮೊದಲ ಭಾರತೀಯ! - ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣ ಇನ್​​​ಸ್ಟಾಗ್ರಾಮ್​​ನಲ್ಲಿ ಸದಾ ಸಕ್ರಿಯವಾಗಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ, ಹೊಸದೊಂದು ರೆಕಾರ್ಡ್​ ನಿರ್ಮಿಸಿದ್ದಾರೆ.

Virat Kohli Instagram followers
Virat Kohli Instagram followers
author img

By

Published : Jun 8, 2022, 11:12 AM IST

ನವದೆಹಲಿ: ಕ್ರಿಕೆಟ್ ಮೈದಾನದಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಾಣ ಮಾಡಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಇದೀಗ ಮೈದಾನಕ್ಕಿಳಿಯದೇ ಹೊಸದೊಂದು ಸಾಧನೆ ಮಾಡಿದ್ದಾರೆ. ಇಂತಹ ರೆಕಾರ್ಡ್​ ಬರೆದಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಸಾಮಾಜಿಕ ಜಾಲತಾಣ ಇನ್​​​ಸ್ಟಾಗ್ರಾಮ್​​ನಲ್ಲಿ ವಿರಾಟ್​ ಕೊಹ್ಲಿ ಬರೋಬ್ಬರಿ 20 ಕೋಟಿ ಫಾಲೋವರ್ಸ್​(200 ಮಿಲಿಯನ್​​) ಹೊಂದಿದ್ದಾರೆ. ಇಷ್ಟೊಂದು ಫಾಲೋವರ್ಸ್​ ಹೊಂದಿರುವ ವಿಶ್ವದ ಏಕೈಕ ಕ್ರಿಕೆಟಿಗ ಹಾಗೂ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ವಿಶ್ವದ ಮೂರನೇ ಆಟಗಾರ ಎಂಬ ಸಾಧನೆ ಸಹ ನಿರ್ಮಿಸಿದ್ದಾರೆ. ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವರ ಪೈಕಿ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರ ಸ್ಥಾನದಲ್ಲಿದ್ದು, ಇವರು 451 ಮಿಲಿಯನ್ ಫಾಲೋವರ್ಸ್​ ಹೊಂದಿದ್ದಾರೆ. ತದನಂತರ ಅರ್ಜೆಂಟೀನಾದ ಲಿಯೊನಲ್​ ಮೆಸ್ಸಿ 334 ಫಾಲೋವರ್ಸ್​ ಹೊಂದಿದ್ದಾರೆ. ನಂತರದ ಸ್ಥಾನದಲ್ಲಿ ವಿರಾಟ್​ ಕೊಹ್ಲಿ ಇದ್ದಾರೆ.

ಇದನ್ನೂ ಓದಿ: ಫಿಂಚ್​ ​- ವಾರ್ನರ್​​ 134 ರನ್​​ಗಳ ಜೊತೆಯಾಟ... ಲಂಕಾ ವಿರುದ್ಧ ಮೊದಲ ಟಿ-20 ಗೆದ್ದ ಆಸ್ಟ್ರೇಲಿಯಾ

ಲಭ್ಯವಾಗಿರುವ ಮಾಹಿತಿ ಪ್ರಕಾರ ವಿರಾಟ್​ ಕೊಹ್ಲಿ ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ಹಾಕಿಕೊಳ್ಳುವ ಒಂದು ಪ್ರಮೋಷನಲ್ ಪೋಸ್ಟ್​ಗೋಸ್ಕರ ಬರೋಬ್ಬರಿ 5.05 ಕೋಟಿ ರೂಪಾಯಿ ಹಣ ಪಡೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ. ಉಳಿದಂತೆ ಕ್ರಿಸ್ಟಿಯಾನೋ ರೊನಾಲ್ಡ್​ ಅಗ್ರಸ್ಥಾನದಲ್ಲಿದ್ದು, ಒಂದು ಪೋಸ್ಟ್​​ಗೆ 11.9 ಕೋಟಿ ರೂ. ಗಳಿಕೆ ಮಾಡುತ್ತಾರೆ.

200 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ವಿರಾಟ್​ ಕೊಹ್ಲಿ 245 ಮಂದಿಯನ್ನ ಫಾಲೋ ಮಾಡ್ತಿದ್ದು, ಇಲ್ಲಿಯವರೆಗೆ 1373 ಪೋಸ್ಟ್ ಹಾಕಿಕೊಂಡಿದ್ದಾರೆ. 2021ರ ಟಿ-20 ವಿಶ್ವಕಪ್​ ಮುಕ್ತಾಯದ ಬಳಿಕ ವಿರಾಟ್​ ಕೊಹ್ಲಿ ತಮ್ಮ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ತಂಡದ ಸದಸ್ಯರಾಗಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂರು ಮಾದರಿ ಕ್ರಿಕೆಟ್​ಗೆ ರೋಹಿತ್ ಶರ್ಮಾ ನಾಯಕನಾಗಿ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.