ರನ್ ಬರ ಎದುರಿಸುತ್ತಿರುವ ರನ್ಮಷಿನ್ ವಿರಾಟ್ ಕೊಹ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಲಯ ಕಂಡುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ನಿನ್ನೆ ನಡೆದ ಹಾಂಗ್ಕಾಂಗ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದರು. ಇದು ವಿರಾಟ್ರ 31ನೇ ಫಿಫ್ಟಿಯಾಗಿದೆ. ಈ ಮೂಲಕ ವಿರಾಟ್, ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರೊಂದಿಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿಹೆಚ್ಚು ಫಿಫ್ಟಿ ಬಾರಿಸಿದವರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದರು.
101 ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ ವಿರಾಟ್ ಕೊಹ್ಲಿ, 94 ಇನ್ನಿಂಗ್ಸ್ಗಳಲ್ಲಿ 31 ಅರ್ಧಶತಕಗಳನ್ನು ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ 94* ಅವರ ಗರಿಷ್ಠ ಸ್ಕೋರ್ ಆಗಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ 134 ಪಂದ್ಯಗಳಿಂದ 4 ಶತಕಗಳೊಂದಿಗೆ 31 ಅರ್ಧ ಶತಕಗಳನ್ನು ಚಚ್ಚಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ 26 ಅರ್ಧಶತಕ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (22), ನ್ಯೂಜಿಲ್ಯಾಂಡ್ನ ಮಾರ್ಟಿನ್ ಗಪ್ಟಿಲ್ (20) ಮತ್ತು ಪಾಲ್ ಸ್ಟಿರ್ಲಿಂಗ್(20) ಚುಟುಕು ಕ್ರಿಕೆಟ್ನಲ್ಲಿ ಅರ್ಧಶತಕ ಮತ್ತು ಅದಕ್ಕಿಂತಲೂ ಹೆಚ್ಚು ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ವಿರಾಟ್ ಚುಟುಕು ಕ್ರಿಕೆಟ್ನಲ್ಲಿ 100 ನೇ ಪಂದ್ಯವಾಡುವ ಮೂಲಕ ಏಕದಿನ, ಟೆಸ್ಟ್ ಸೇರಿ ಮೂರೂ ಮಾದರಿಯಲ್ಲಿ 100 ಪಂದ್ಯವಾಡಿದ ಭಾರತದ ಮೊದಲ ಕ್ರಿಕೆಟಿಗರಾಗಿದ್ದಾರೆ.
ಓದಿ: ಎಬಿಡಿ ರೀತಿ ಬ್ಯಾಟ್ ಬೀಸಿದ ಸೂರ್ಯ! 1 ಓವರ್ 4 ಸಿಕ್ಸರ್: ಸಹ ಆಟಗಾರನಿಗೆ ಶಿರಬಾಗಿದ ಕೊಹ್ಲಿ