ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಿನ್ನೆ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಥ್ರಿಲ್ಲಿಂಗ್ ಜಯ ಸಾಧಿಸಿದ್ದು, ಇದಕ್ಕೆ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫುಲ್ ಖುಷ್ ಆಗಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಮ್ಯಾಕ್ಸ್ವೆಲ್ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 149ರನ್ಗಳಿಕೆ ಮಾಡಿದ್ದು, ಇದರ ಬೆನ್ನತ್ತಿದ್ದ ಹೈದರಾಬಾದ್ ತಂಡ 20 ಓವರ್ಗಳಲ್ಲಿ 9ವಿಕೆಟ್ನಷ್ಟಕ್ಕೆ 143ರನ್ಗಳಿಕೆ ಮಾಡಿತು.
-
Game Day:Bowlers set up remarkable win for RCB
— Royal Challengers Bangalore (@RCBTweets) April 15, 2021 " class="align-text-top noRightClick twitterSection" data="
Maxwell‘s brilliant knock gave us a defendable total, & Shahbaz’s heroics along with Harshal’s death bowling skills helped us close out Sunrisers Hyderabad & make it 2 wins in 2 this #IPL2021.#PlayBold #WeAreChallengers #SRHvRCB pic.twitter.com/q9TcTjdVlg
">Game Day:Bowlers set up remarkable win for RCB
— Royal Challengers Bangalore (@RCBTweets) April 15, 2021
Maxwell‘s brilliant knock gave us a defendable total, & Shahbaz’s heroics along with Harshal’s death bowling skills helped us close out Sunrisers Hyderabad & make it 2 wins in 2 this #IPL2021.#PlayBold #WeAreChallengers #SRHvRCB pic.twitter.com/q9TcTjdVlgGame Day:Bowlers set up remarkable win for RCB
— Royal Challengers Bangalore (@RCBTweets) April 15, 2021
Maxwell‘s brilliant knock gave us a defendable total, & Shahbaz’s heroics along with Harshal’s death bowling skills helped us close out Sunrisers Hyderabad & make it 2 wins in 2 this #IPL2021.#PlayBold #WeAreChallengers #SRHvRCB pic.twitter.com/q9TcTjdVlg
ಒಂದು ಹಂತದಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 83ರನ್ಗಳಿಕೆ ಮಾಡಿದ್ದ ಹೈದರಾಬಾದ್ ಸುಲಭ ಗೆಲುವು ದಾಖಲು ಮಾಡಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಶಹ್ಬಾಜ್ ಅಹ್ಮದ್ ಎಸೆದ 17 ಓವರ್ನಲ್ಲಿ ಪಂದ್ಯದ ಗತಿ ಬದಲಾಯಿತು. ಹೀಗಾಗಿ ಆರ್ಸಿಬಿ ಥ್ರಿಲ್ಲಿಂಗ್ ಗೆಲುವು ದಾಖಲು ಮಾಡಿದ್ದು, ಇದಕ್ಕೆ ತಂಡದ ಕ್ಯಾಪ್ಟನ್ ಕೊಹ್ಲಿ ಎಲ್ಲ ಪ್ಲೇಯರ್ಸ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ತಂಡದ ಪ್ಲೇಯರ್ಸ್ಗೆ ಕೊಹ್ಲಿ ಅಭಿನಂದನೆ ಸಲ್ಲಿಕೆ ಮಾಡಿರುವ ವಿಡಿಯೋ ತುಣಕವೊಂದನ್ನ ಇದೀಗ ಆರ್ಸಿಬಿ ಟ್ವೀಟರ್ನಲ್ಲಿ ಶೇರ್ ಮಾಡಿದ್ದು, ಇದೊಂದು ಅದ್ಭುತ ಗೆಲುವು ಎಂದು ಅವರು ಹೇಳಿದ್ದಾರೆ.
ಆಕ್ರೋಶ ಹೊರಹಾಕಿದ್ದ ಕೊಹ್ಲಿ
ಬ್ಯಾಟಿಂಗ್ ಮಾಡ್ತಿದ್ದ ವಿರಾಟ್ 33ರನ್ಗಳಿಕೆ ಮಾಡಿದ್ದ ವೇಳೆ ವಿಕೆಟ್ ಒಪ್ಪಿಸಿದ್ದರು. ಪೆವಿಲಿಯನ್ ತೆರಳುತ್ತಿದ್ದಾಗ ಡಗ್ಔಟ್ನಲ್ಲಿದ್ದ ಕುರ್ಚಿಗೆ ಬ್ಯಾಟ್ನಿಂದ ಹೊಡೆದು ಹೋಗಿದ್ದರು. ಇದು ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.2 ಆಗಿದ್ದು, ಈ ಅಪರಾಧವನ್ನು ಅವರು ಒಪ್ಪಿಕೊಂಡಿದ್ದಾರೆ ಕೂಡಾ.