ETV Bharat / sports

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ: ವಿರಾಟ್​ ಕೊಹ್ಲಿಯಿಂದ ಹಲವು ದಾಖಲೆಗಳ ನಿರೀಕ್ಷೆ - ETV Bharath Kannada news

Virat Kohli records: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಿದ್ದಾರೆ. ಈ ಸರಣಿಯಲ್ಲಿ ಅವರು ಎರಡು ದೊಡ್ಡ ದಾಖಲೆ ಬರೆಯುವ ನಿರೀಕ್ಷೆ ಇದೆ.

virat kohli
virat kohli
author img

By ETV Bharat Karnataka Team

Published : Dec 25, 2023, 6:25 PM IST

ಹೈದರಾಬಾದ್​​: ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್ ಕ್ರಿಕೆಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ವಿಶ್ವಕಪ್​ ಫೈನಲ್​ ನಂತರ ಮತ್ತೆ ಮೈದಾನಕ್ಕೆ ಮರಳಲಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ 30ರವರೆಗೆ ಸೆಂಚೂರಿಯನ್‌, ಎರಡನೇ ಪಂದ್ಯ ಜನವರಿ 3ರಿಂದ 7 ರವರೆಗೆ ಕೇಪ್ ಟೌನ್‌ನಲ್ಲಿ ನಡೆಯಲಿದೆ.

ಸಂಗಕ್ಕಾರ vs ಕೊಹ್ಲಿ​: ಈ ಪಂದ್ಯಗಳಲ್ಲಿ ವಿರಾಟ್ 66 ರನ್ ಗಳಿಸಿದ ತಕ್ಷಣವೇ ಹೊಸದೊಂದು ದಾಖಲೆ ನಿರ್ಮಿಸುವರು. ತಮ್ಮ ವೃತ್ತಿಜೀವನದಲ್ಲಿ ಈವರೆಗೆ ವಿರಾಟ್ ವರ್ಷವೊಂದರಲ್ಲಿ 2,000 ಅಂತರರಾಷ್ಟ್ರೀಯ ರನ್​ ಗಳಿಸಿದ ಸಾಧನೆಯಲ್ಲಿ ಒಟ್ಟು 6 ಬಾರಿ ಮಾಡಿದ್ದಾರೆ. 2023ರಲ್ಲಿ 2 ಸಾವಿರ ರನ್​ ಪೂರೈಸಲು ಅವರಿಗೆ ಕೇವಲ 66 ರನ್​ಗಳ ಅವಶ್ಯಕತೆ ಇದೆ. ಬಾಕ್ಸಿಂಗ್​​ ಡೇ ಟೆಸ್ಟ್​ನಲ್ಲಿ ಈ ರನ್​ ಗಳಿಸುತ್ತಿದ್ದಂತೆ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕಾರ ದಾಖಲೆ ಮುರಿಯುವರು.

virat kohli
ವಿರಾಟ್ ಕೊಹ್ಲಿ

ಸದ್ಯ ಲಂಕಾ ಬ್ಯಾಟರ್​ ಸಂಗಕ್ಕಾರ ಮತ್ತು ವಿರಾಟ್​ ಕೊಹ್ಲಿ ವರ್ಷದಲ್ಲಿ 2,000 ರನ್​ ಪೂರೈಸಿದ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. 2023ರ ಕೊನೆಯ ಪಂದ್ಯವಾದ ಸೆಂಚೂರಿಯನ್ ಟೆಸ್ಟ್‌ನಲ್ಲಿ ವಿರಾಟ್​ 66 ರನ್​ ಗಳಿಸಿದರೆ 7ನೇ ಬಾರಿಗೆ 2,000 ಗಡಿ ದಾಟಿದಂತಾಗುತ್ತದೆ. ಇದರಿಂದ ವಿರಾಟ್​ 7ನೇ ಬಾರಿಗೆ ಈ ಸಾಧನೆ ಮಾಡಲಿದ್ದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದ್ದಾರೆ.

ಸೆಹ್ವಾಗ್​ vs ಕೊಹ್ಲಿ: ಹರಿಣಗಳ ವಿರುದ್ಧ ಅತಿ ಹೆಚ್ಚು ರನ್​ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ವಿರಾಟ್​ (1236) ಮೂರನೇ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸುವ ಅವಕಾಶವೂ ಇದೆ. ರನ್​ ಮಷಿನ್​ ಕೊಹ್ಲಿ 71 ರನ್​ ಗಳಿಸಿದಲ್ಲಿ ವಿರೇಂದ್ರ ಸೆಹ್ವಾಗ್​ ಅವರನ್ನು ಹಿಂದಿಕ್ಕುವರು. ಸೆಹ್ವಾಗ್​ ದಕ್ಷಿಣ ಆಫ್ರಿಕಾ ವಿರುದ್ಧ 1306 ರನ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇದರೊಂದಿಗೆ ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾ ವಿರುದ್ಧ 1741 ರನ್ ಗಳಿಸುವ ಮೂಲಕ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ.

virat kohli
ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾ vs ಕೊಹ್ಲಿ: ವಿರಾಟ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ 14 ಟೆಸ್ಟ್ ಪಂದ್ಯಗಳ 24 ಇನ್ನಿಂಗ್ಸ್‌ನಲ್ಲಿ 56.18 ಸರಾಸರಿಯಲ್ಲಿ 3 ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 1,236 ರನ್ ಗಳಿಸಿದ್ದಾರೆ. ಆಫ್ರಿಕನ್ ನೆಲದಲ್ಲಿ 7 ಪಂದ್ಯಗಳ 14 ಇನ್ನಿಂಗ್ಸ್‌ ಮೂಲಕ 2 ಶತಕ ಮತ್ತು 3 ಅರ್ಧ ಶತಕಗಳೊಂದಿಗೆ 719 ರನ್ ಪೇರಿಸಿದ್ದಾರೆ.

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯ ಬಿಕರಿಗೆ ಗುಜರಾತ್​ ಟೈಟಾನ್ಸ್​ಗೆ ₹100 ಕೋಟಿ ನೀಡಿತಾ ಮುಂಬೈ ಇಂಡಿಯನ್ಸ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.