ETV Bharat / sports

ಧೋನಿ ದಾಖಲೆ ಮುರಿದ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​

author img

By

Published : Jun 19, 2021, 8:56 PM IST

ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿಯುವ ಮೂಲಕ ವಿರಾಟ್​ ಕೊಹ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.

Virat kohli
Virat kohli

ಸೌತಾಂಪ್ಟನ್​: ನ್ಯೂಜಿಲ್ಯಾಂಡ್​ ವಿರುದ್ಧದ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗುವುದರ ಮೂಲಕ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಜತೆಗೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ರೆಕಾರ್ಡ್​​ ಬ್ರೇಕ್​ ಮಾಡಿದ್ದಾರೆ. ಐಸಿಸಿ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಕೊಹ್ಲಿ ಈ ದಾಖಲೆ ಬರೆದಿರುವುದು ವಿಶೇಷವಾಗಿದೆ.

ಇದನ್ನೂ ಓದಿರಿ: IND vs NZ WTC Final: ಆಘಾತಕ್ಕೊಳಗಾದ ಟೀಂ ಇಂಡಿಯಾಗೆ ಕೊಹ್ಲಿ -ರಹಾನೆ ಆಸರೆ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ 60 ಟೆಸ್ಟ್​​ ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನ ಮುನ್ನಡೆಸಿದ್ದಾರೆ. ಈ ಸಾಧನೆ ಬ್ರೇಕ್​ ಮಾಡಿರುವ ವಿರಾಟ್​ ಇದೀಗ 61ನೇ ಟೆಸ್ಟ್​​ ಪಂದ್ಯದಲ್ಲಿ ನಾಯಕನಾಗುವ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಮಾಹಿ ಟೆಸ್ಟ್​ ಕ್ಯಾಪ್ಟನ್​ ಆಗಿ ಆಡಿರುವ 60 ಟೆಸ್ಟ್​ ಪಂದ್ಯಗಳ ಪೈಕಿ 27ರಲ್ಲಿ ಜಯ, 18ರಲ್ಲಿ ಸೋಲು ಹಾಗೂ 15 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.

ವಿರಾಟ್​ ಈಗಾಗಲೇ ಕ್ಯಾಪ್ಟನ್​ ಆಗಿ ಮುನ್ನಡೆಸಿರುವ 60 ಟೆಸ್ಟ್​ ಪಂದ್ಯಗಳಲ್ಲಿ 36 ಗೆಲುವು, 14 ಸೋಲು ಹಾಗೂ 10 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ವಿಶೇಷವೆಂದರೆ ದಕ್ಷಿಣ ಆಫ್ರಿಕಾದ ಮಾಜಿ ಕ್ಯಾಪ್ಟನ್​​ ಗ್ರೇಮ್​ ಸ್ಮಿತ್​ 109 ಟೆಸ್ಟ್​ ಪಂದ್ಯಗಳಲ್ಲಿ ನಾಯಕರಾಗಿದ್ದರು. ಆದರೆ ಏಷ್ಯಾದಲ್ಲಿ ಅತಿ ಹೆಚ್ಚು ಟೆಸ್ಟ್​ ಕ್ರಿಕೆಟ್​ ಪಂದ್ಯಗಳಲ್ಲಿ ಹೆಚ್ಚು ಸಲ ನಾಯಕನಾಗಿರುವ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.