ETV Bharat / sports

ಏಷ್ಯಾಕಪ್​​​ಗೋಸ್ಕರ ಅಭ್ಯಾಸ ಆರಂಭಿಸಿದ ಕೊಹ್ಲಿ: 100ನೇ ಟಿ20 ಪಂದ್ಯಕ್ಕೆ ತಯಾರಿ

ಏಷ್ಯಾಕಪ್​​ನಲ್ಲಿ ಅಬ್ಬರಿಸುವ ಉದ್ದೇಶದಿಂದ ವಿರಾಟ್​ ಕೊಹ್ಲಿ ಈಗಾಗಲೇ ಕಸರತ್ತು ಆರಂಭಿಸಿದ್ದು, ಒಳಾಂಗಣ ಕ್ರೀಡಾಂಗಣದಲ್ಲಿ ಬೆವರು ಹರಿಸುತ್ತಿದ್ದಾರೆ.

Virat Kohli
Virat Kohli
author img

By

Published : Aug 11, 2022, 3:40 PM IST

ಆಗಸ್ಟ್​ 27ರಿಂದ ಆರಂಭಗೊಳ್ಳಲಿರುವ ಏಷ್ಯಾ ರಾಷ್ಟ್ರಗಳ ಟಿ20 ಕ್ರಿಕೆಟ್ ಕದನ ಏಷ್ಯಾಕಪ್​​ಗೆ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದೆ. ವೆಸ್ಟ್​​ ಇಂಡೀಸ್​ ಸರಣಿಯಿಂದ ಹೊರಗುಳಿದಿದ್ದ ಮಾಜಿ ಕ್ಯಾಪ್ಟನ್ ವಿರಾಟ್​​ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಸರಣಿ ಆರಂಭಗೊಳ್ಳಲು 15 ದಿನಗಳು ಬಾಕಿ ಇದ್ದು, ಈಗಾಗಲೇ ರನ್​ ಮಷಿನ್ ಖ್ಯಾತಿಯ ವಿರಾಟ್​ ಅಭ್ಯಾಸ ಆರಂಭಿಸಿದ್ದಾರೆ.

ಏಷ್ಯಾಕಪ್​​ನಲ್ಲಿ ಟೀಂ ಇಂಡಿಯಾ ಆಗಸ್ಟ್​ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಯುಎಇನಲ್ಲಿ ಸೆಣಸಲಿದೆ. ಇದು ಕೊಹ್ಲಿಗೆ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವೂ ಹೌದು. ಹೀಗಾಗಿ, ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಇಟ್ಟುಕೊಂಡಿದ್ದಾರೆ. ಒಳಾಂಗಣ ಮೈದಾನದಲ್ಲಿ ವಿರಾಟ್​ ಅಭ್ಯಾಸ ನಡೆಸುತ್ತಿದ್ದು, ಚಿಕ್ಕ ವಿಡಿಯೋ ತುಣುಕನ್ನು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಏಷ್ಯಾ ಕಪ್​​ಗೆ 15 ಸದಸ್ಯರ ಟೀಂ ಇಂಡಿಯಾ: ಕೆ.ಎಲ್.ರಾಹುಲ್ ಉಪನಾಯಕ, ಜಸ್ಪ್ರೀತ್​, ಹರ್ಷಲ್​ ಔಟ್​

ಜುಲೈ-ಆಗಸ್ಟ್ ತಿಂಗಳಲ್ಲಿ ವಿಂಡೀಸ್​ ವಿರುದ್ಧದ ಮೂರು ಏಕದಿನ ಹಾಗೂ 5 ಟಿ20 ಪಂದ್ಯಗಳಿಂದ ವಿರಾಟ್​ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು. ಇದೀಗ ಬಿಸಿಸಿಐ ಆಯ್ಕೆ ಸಮಿತಿ ಏಷ್ಯಾಕಪ್​​ಗೆ ಪ್ರಕಟಿಸಿರುವ 15 ಸದಸ್ಯರ ತಂಡದ ಬಳಗದಲ್ಲಿ ಅವರಿಗೆ ಅವಕಾಶ ಸಿಕ್ಕಿದೆ. ಕಳೆದ ಎರಡೂವರೆ ವರ್ಷಗಳಿಂದ ರನ್ ಬರ ಎದುರಿಸುತ್ತಿರುವ ಕೊಹ್ಲಿ ಏಷ್ಯಾಕಪ್​ನಲ್ಲಿ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದು, ಅವರ ಬ್ಯಾಟ್​​ನಿಂದ ರನ್​ ಹರಿದು ಬರುವ ಸಾಧ್ಯತೆ ಇದೆ.

ಪಾಕ್​ ವಿರುದ್ಧ ವಿರಾಟ್​ ಸಾಧನೆ: ಆಗಸ್ಟ್​ 28ರಂದು ಪಾಕಿಸ್ತಾನ ವಿರುದ್ಧ ನಡೆಯಲಿರುವ ಟಿ20 ಪಂದ್ಯದಲ್ಲಿ ವಿರಾಟ್​​ ಹೊಸ ದಾಖಲೆ ಬರೆಯಲಿದ್ದಾರೆ. ಈ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಇವರು​​ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿರುವ ಸಾಧನೆ ಮಾಡಲಿದ್ದಾರೆ. ಜೊತೆಗೆ ಈ ರೆಕಾರ್ಡ್ ನಿರ್ಮಿಸುವ ಎರಡನೇ ಭಾರತೀಯ ಆಟಗಾರನಾಗಲಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 132 ಟಿ20 ಪಂದ್ಯಗಳನ್ನಾಡಿದ್ದಾರೆ.

33 ವರ್ಷದ ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಲ್ಲಿ 91 ಇನ್ನಿಂಗ್ಸ್​​​ಗಳಲ್ಲಿ ಬ್ಯಾಟ್​ ಬೀಸಿದ್ದಾರೆ. 50ರ ಸರಾಸರಿಯಲ್ಲಿ 3,308 ರನ್​​​ಗಳಿಸಿದ್ದಾರೆ. ಇದರಲ್ಲಿ 50 ಅರ್ಧಶತಕ ಸೇರಿವೆ.

ಏಷ್ಯಾಕಪ್​ಗಾಗಿ ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.