ಚೆನ್ನೈ (ತಮಿಳುನಾಡು): ವಿರಾಟ್ ಕೊಹ್ಲಿ ಮೈದಾನಕ್ಕಿಳಿದು ಆಟವಾಡಿದರೆ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣ ಆಗುತ್ತವೆ. ಬ್ಯಾಟಿಂಗ್ನಲ್ಲಿ ರನ್ ಮಷಿನ್ ಎಂದೇ ಕರೆಯಲ್ಪಡುವ ವಿರಾಟ್ ಈ ಬಾರಿ ಫೀಲ್ಡಿಂಗ್ನಲ್ಲಿ ಕಮಾಲ್ ಮಾಡಿ ಹೊಸ ರೇಕಾರ್ಡ್ನ್ನು ನಿರ್ಮಿಸಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಮುರಿದಿದ್ದಾರೆ.
ಏಕದಿನ ವಿಶ್ವಕಪ್‌ನ ಭಾರತದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್ ದಾಖಲೆಯಾಗಿದೆ. ಐಸಿಸಿ ಪುರುಷರ ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ ದೇಶಕ್ಕಾಗಿ ಅತಿ ಹೆಚ್ಚು ಬಾಲ್ಗಳನ್ನು ಕ್ಯಾಚ್ ಮಾಡಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಈ ದಾಖಲೆಯಲ್ಲಿ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದರು. ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಮಿಚೆಲ್ ಮಾರ್ಷ್ ಕ್ಯಾಚ್ ಮಾಡಿದ ಕೊಹ್ಲಿ ಈ ಸಾಧನೆಗೈದಿದ್ದಾರೆ. ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಮಿಚೆಲ್ ಮಾರ್ಷ್ ಪಂದ್ಯದ ಮೂರನೇ ಓವರ್ನಲ್ಲಿ ಕ್ಯಾಚ್ ಕೊಟ್ಟು ಡಕ್ಗೆ ಔಟ್ ಆದರು.
-
Milestone Unlocked! 🔓
— BCCI (@BCCI) October 8, 2023 " class="align-text-top noRightClick twitterSection" data="
Virat Kohli now has most catches for India in ODI World Cups as a fielder 😎#CWC23 | #INDvAUS | #TeamIndia | #MeninBlue pic.twitter.com/HlLTDqo7iZ
">Milestone Unlocked! 🔓
— BCCI (@BCCI) October 8, 2023
Virat Kohli now has most catches for India in ODI World Cups as a fielder 😎#CWC23 | #INDvAUS | #TeamIndia | #MeninBlue pic.twitter.com/HlLTDqo7iZMilestone Unlocked! 🔓
— BCCI (@BCCI) October 8, 2023
Virat Kohli now has most catches for India in ODI World Cups as a fielder 😎#CWC23 | #INDvAUS | #TeamIndia | #MeninBlue pic.twitter.com/HlLTDqo7iZ
ಇದಕ್ಕೂ ಮೊದಲು ವಿರಾಟ್ ಕೊಹ್ಲಿ ವಿಶ್ವಕಪ್ ಕ್ಯಾಚ್ನ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಜೊತೆಗೆ ಜಂಟಿಯಾಗಿ ಪ್ರಥಮ ಸ್ಥಾನದಲ್ಲಿದ್ದರು. ಈ ಪಂದ್ಯದಲ್ಲಿ ಎರಡು ಕ್ಯಾಚ್ ಮಾಡಿದ ವಿರಾಟ್ 16 ಕ್ಯಾಚ್ ಮೂಲಕ ಈಗ ಪ್ರಥಮ ಸ್ಥಾನದಲ್ಲಿದ್ದಾರೆ. ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ತಲಾ 12 ಕ್ಯಾಚ್‌ಗಳೊಂದಿಗೆ ಸಮಬಲದಲ್ಲಿದ್ದಾರೆ.
ವಿಶ್ವಕಪ್ನಲ್ಲಿ ಸಚಿನ್ ದಾಖಲೆ ಮುರಿಯುತ್ತಾರಾ ವಿರಾಟ್?: ಅದ್ಭುತ ಫಾರ್ಮ್ನಲ್ಲಿರುವ ಕಿಂಗ್ ಕೊಹ್ಲಿ ಏಕದಿನ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಅವರ ಬ್ಯಾಟ್ನಿಂದ ಇನ್ನು ಎರಡು ಶತಕಗಳು ಬಂದಲ್ಲಿ ಸಚಿನ್ ಅವರನ್ನು ಸಮಬಲ ಮಾಡಲಿದ್ದಾರೆ. ವಿಶ್ವಕಪ್‌ನ ಲೀಗ್ ಹಂತದಲ್ಲಿ ಟಿಮ್ ಇಂಡಿಯಾ 9 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಮೂರು ಶತಕ ಅವರ ಬ್ಯಾಟ್ನಿಂದ ಬಂದರೆ ಸಚಿನ್ ದಾಖಲೆ ಮುರಿಯಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೆ ವಿರಾಟ್ ಕೊಹ್ಲಿ 77 ಶತಕ ದಾಖಲಿಸಿದ್ದಾರೆ. ಇನ್ನು 13 ಶತಕ ಬಂದಲ್ಲಿ ಸಚಿನ್ ದಾಖಲೆ ತಲುಪಲಿದ್ದಾರೆ.
ಪಂದ್ಯದಲ್ಲಿ: ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ 49.3 ಓವರ್ಗೆ 199 ರನ್ ಗಳಸಿ ಆಲ್ಔಟ್ ಆಯಿತು. ದೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಕ್ರಮವಾಗಿ 41 ಮತ್ತು 46 ರನ್ ಗಳಿಸಿ ತಂಡಕ್ಕೆ ನೆರವಾದರು. ಇವರನ್ನು ಬಿಟ್ಟರೆ ಮತ್ತಾರು ದೊಡ್ಡ ಮೊತ್ತ ಗಳಿಸಲಿಲ್ಲ. ಭಾರತದ ಪರ ಜಡೇಜ 3, ಕುಲ್ದೀಪ್, ಬುಮ್ರಾ ಎರಡು ವಿಕೆಟ್ ಪಡೆದು ಕಾಂಗರೂ ಪಡೆಯನ್ನು ಕಾಡಿದರು.
ಇದನ್ನೂ ಓದಿ: Cricket World Cup 2023: ಭಾರತದ ಸ್ಪಿನ್ ಮೋಡಿಗೆ ಸರ್ವಪತನ ಕಂಡ ಆಸಿಸ್.. ರೋಹಿತ್ ಪಡೆಗೆ ದ್ವಿಶತಕದ ಗುರಿ