ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸುವ ಮುನ್ನ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಹುರುಪಿನಿಂದ ತಯಾರಿ ನಡೆಸುತ್ತಿದ್ದು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರ, ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರಿಗೆ ಸಾಕಷ್ಟು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಕಾಲಕಾಲಕ್ಕೆ ಬ್ಯಾಟಿಂಗ್‌ಗೆ ಅಗತ್ಯವಾದ ಸಲಹೆಗಳನ್ನು ಸಹ ನೀಡುತ್ತಿದ್ದಾರೆ.
-
Virat Kohli giving tips to Yashasvi Jaiswal in the practice session.
— CricketMAN2 (@ImTanujSingh) May 31, 2023 " class="align-text-top noRightClick twitterSection" data="
King Kohli always there for youngsters! pic.twitter.com/LGMPqX29NW
">Virat Kohli giving tips to Yashasvi Jaiswal in the practice session.
— CricketMAN2 (@ImTanujSingh) May 31, 2023
King Kohli always there for youngsters! pic.twitter.com/LGMPqX29NWVirat Kohli giving tips to Yashasvi Jaiswal in the practice session.
— CricketMAN2 (@ImTanujSingh) May 31, 2023
King Kohli always there for youngsters! pic.twitter.com/LGMPqX29NW
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಪೂಜಾರ ಭಾರತ ತಂಡದಲ್ಲಿ ಅನುಭವಿ ಬ್ಯಾಟರ್ಗಳಾಗಿದ್ದಾರೆ. ಇವರ ಜೊತೆ ಈಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಕೆಲ ಯುವಕರು ಸೇರಿದ್ದು, ಯುವಕರು ಅನುಭವಿಗಳ ಅಡಿ ಅಭ್ಯಾಸದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಶುಭಮನ್ ಗಿಲ್ ಮತ್ತು ಕೆ.ಎಸ್.ಭರತ್ಗೆ ವಿದೇಶಿ ಪಿಚ್ಗಳಲ್ಲಿನ ಬ್ಯಾಟಿಂಗ್ ಅನುಭವ ಕಲಿಯಲು ಸಹಕಾರಿಯಾಗಲಿದೆ.
ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರು ತಮ್ಮ ಅನುಭವದ ಲಾಭವನ್ನು ತಂಡದ ಯುವ ಆಟಗಾರರಿಗೆ ನೀಡಲು ಪ್ರಯತ್ನಿಸುತ್ತಾರೆ ಮತ್ತು ಅವರಿಗೆ ಬ್ಯಾಟಿಂಗ್ ಸಲಹೆಗಳನ್ನು ನೀಡುವ ಮೂಲಕ ಅವರ ಆಟವನ್ನು ಇನ್ನಷ್ಟು ಉತ್ತಮ ಮಾಡಲು ಸಲಹೆ ನೀಡುತ್ತಾರೆ. ಐಪಿಎಲ್ನಲ್ಲಿ ಪಂದ್ಯ ಮುಗಿದ ನಂತರ ಯುವ ಆಟಗಾರರ ಜೊತೆ ವಿರಾಟ್ ಕೊಹ್ಲಿ ಸಂಭಾಷಣೆ ನಡೆಸುತ್ತಿದ್ದರು. ಬ್ಯಾಟಿಂಗ್ ಸಲಹೆಗಳನ್ನು ಕೊಡುತ್ತಿದ್ದರು.
-
Yashasvi Jaiswal in the batting practice session ahead of WTC Final.
— CricketMAN2 (@ImTanujSingh) May 31, 2023 " class="align-text-top noRightClick twitterSection" data="
What a inspiring journey of Jaiswal - The future of Indian cricket. All the best, Yashasvi. pic.twitter.com/ME3RNPm6Gf
">Yashasvi Jaiswal in the batting practice session ahead of WTC Final.
— CricketMAN2 (@ImTanujSingh) May 31, 2023
What a inspiring journey of Jaiswal - The future of Indian cricket. All the best, Yashasvi. pic.twitter.com/ME3RNPm6GfYashasvi Jaiswal in the batting practice session ahead of WTC Final.
— CricketMAN2 (@ImTanujSingh) May 31, 2023
What a inspiring journey of Jaiswal - The future of Indian cricket. All the best, Yashasvi. pic.twitter.com/ME3RNPm6Gf
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಮೊದಲ ಮತ್ತು ಎರಡನೇ ಬ್ಯಾಚ್ನಲ್ಲಿ ಲಂಡನ್ ತೆರಳಿದ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ವಿರಾಟ್, ಅಶ್ವಿನ್, ಸಿರಾಜ್, ಉಮೇಶ್ ಯಾದವ್ ಮತ್ತು ತಂಡದ ಕೊಚ್ ಹಾಗೂ ಸಹಾಯಕ ಸಿಬ್ಬಂದಿ ಮೊದಲ ಯುಕೆಗೆ ಹಾರಿದ್ದರು. ಪ್ಲೇ ಆಫ್ನಲ್ಲಿ ಮುಂಬೈ ಸೋತ ನಂತರ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಜೈಸ್ವಾಲ್ ಒಟ್ಟಿಗೆ ಲಂಡನ್ಗೆ ತೆರಳಿದ್ದರು. ಸದ್ಯ ಆಟಗಾರರು ಇಲ್ಲಿನ ಅರುಂಡೆಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಾರೆ.
ಅಭ್ಯಾಸದ ಸಮಯ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಕೊಹ್ಲಿ ಮತ್ತು ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲು ತಯಾರಿ ನಡೆಸುತ್ತಿದ್ದಾರೆ, ಇದರಲ್ಲಿ ಅಭ್ಯಾಸದ ಅವಧಿಯಲ್ಲಿ ವಿರಾಟ್ ಕೊಹ್ಲಿ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಸಲಹೆಗಳನ್ನು ನೀಡುತ್ತಿರುವುದು ಕಂಡು ಬಂದಿದೆ. ಈ ಸಮಯದಲ್ಲಿ, ವಿರಾಟ್ ಕೊಹ್ಲಿ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಫ್ರಂಟ್ ಫೂಟ್ ಮತ್ತು ಬ್ಯಾಕ್ ಫುಟ್ ಬ್ಯಾಟಿಂಗ್‌ನ ಕೆಲವು ತಂತ್ರಗಳನ್ನು ಹೇಳುತ್ತಿರುವುದು ಕಂಡು ಬರುತ್ತದೆ. ಇದರಿಂದ ವಿದೇಶಿ ಪಿಚ್‌ಗಳಲ್ಲಿ ವೇಗದ ಬೌಲರ್‌ಗಳನ್ನು ಉತ್ತಮವಾಗಿ ಎದುರಿಸಬಹುದು.
-
When Virat Kohli speaks,everyone respect and hear it just like Yashasvi Jaiswal. ❤️pic.twitter.com/QDTVk97zsN
— Akshat (@AkshatOM10) May 31, 2023 " class="align-text-top noRightClick twitterSection" data="
">When Virat Kohli speaks,everyone respect and hear it just like Yashasvi Jaiswal. ❤️pic.twitter.com/QDTVk97zsN
— Akshat (@AkshatOM10) May 31, 2023When Virat Kohli speaks,everyone respect and hear it just like Yashasvi Jaiswal. ❤️pic.twitter.com/QDTVk97zsN
— Akshat (@AkshatOM10) May 31, 2023
ಗಾಯಕ್ವಾಡ್ ಬದಲಿಗೆ ಜೈಸ್ವಾಲ್: ಜೂನ್ 3 ರಂದು ಮದುವೆ ಇರುವ ಕಾರಣ ಗಾಯಕ್ವಾಡ್ 5ನೇ ತಾರೀಕಿನ ನಂತರ ಲಂಡನ್ ತೆರಳುವುದಾಗಿ ಹೇಳಿದ್ದರಿಂದ ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಿಂದ ಅವರಿಗೆ ಕೊಕ್ ನೀಡಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಜೈಸ್ವಾಲ್ ಈ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಈ ಆವೃತ್ತಿಯಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದಾರೆ. ಯಶಸ್ವಿ 16ನೇ ಐಪಿಎಲ್ ಸೀಸನ್ನಲ್ಲಿ 5ನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.
ಭಾರತದ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಸ್ಟ್ಯಾಂಡ್‌ಬೈ ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್
ಇದನ್ನೂ ಓದಿ: ಐಪಿಎಲ್ ಟ್ರೋಫಿಗೆ ವಿಶೇಷ ಪೂಜೆ ಮಾಡಿಸಿದ ಸಿಎಸ್ಕೆ ಮಾಲೀಕ ಎನ್ ಶ್ರೀನಿವಾಸ್