ನವದೆಹಲಿ: ಈ ವರ್ಷ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ಭಾರತ ತಂಡ ತಯಾರಿ ನಡೆಸುತ್ತಿದೆ. ಆಟಗಾರರು ವೈಯಕ್ತಿಕವಾಗಿ ಭರ್ಜರಿ ಲಯಕ್ಕೆ ಮರಳಿದ್ದು, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅದು ಗೋಚರವಾಗಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮಾ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಬ್ಯಾಟ್ ಸದ್ದು ಮಾಡುತ್ತಿದ್ದರೆ, ಮೊಹಮದ್ ಸಿರಾಜ್, ಮೊಹಮದ್ ಶಮಿ ವೇಗ ಮೊನಚು ಪಡೆದಿದೆ. ಯಜುವೇಂದ್ರ ಚಹಲ್, ಕುಲದೀಪ್ ಯಾದವ್ ಸ್ಪಿನ್ ಮೋಡಿ ಮಾಡುತ್ತಿದೆ.
ಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನಿಜವಾಗಿಯೂ ಚರ್ಚೆಗೆ ಗ್ರಾಸವಾಗಿದ್ದು, ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅವರ ಅಬ್ಬರ. ಕಳೆದ 4 ಇನಿಂಗ್ಸ್ಗಳಲ್ಲಿ 3 ಶತಕ ಬಾರಿಸಿರುವ ಕೊಹ್ಲಿ ವಿಶ್ವಕ್ರಿಕೆಟ್ಗೆ ಹಳೆಯ ಕೊಹ್ಲಿಯನ್ನು ಪರಿಚಯಿಸಿದ್ದಾರೆ. ಅದರಲ್ಲೂ ಕೊನೆಯ ಏಕದಿನ ಪಂದ್ಯದಲ್ಲಿಮನ ಅಬ್ಬರ ನಿಜಕ್ಕೂ ಅಚ್ಚರಿಯ ಜೊತೆಗೆ ಅದ್ಭುತವೇ ಸರಿ. ಈ ಎಲ್ಲದರ ಮಧ್ಯೆ ವಿರಾಟ್ ಬಳಸುತ್ತಿರುವ ಬ್ಯಾಟ್ ಬಗ್ಗೆ ಕುತೂಹಲ ಮೂಡಿದೆ.
ವಿರಾಟ್ ಕೊಹ್ಲಿ ಬಳಸುತ್ತಿರುವ ಎಂಆರ್ಎಫ್ ಕಂಪನಿಯ ಬ್ಯಾಟ್ನ ವಿಶೇಷತೆ ಮತ್ತು ಅದರ ದರದ ಬಗ್ಗೆ ಕ್ರಿಕೆಟ್ ಲೋಕ ಮಾತನಾಡುತ್ತಿದೆ. ಅದರಲ್ಲೂ ವಿರಾಟ್ರೂಪದ ಬಳಿಕ ಸ್ವತಃ ಶ್ರೀಲಂಕಾ ಆಟಗಾರರೇ ಕೊಹ್ಲಿ ಬ್ಯಾಟ್ ಅನ್ನು ಪರಿಶೀಲಿಸಿದ್ದಾರೆ ಎಂದು ಹೇಳಲಾಗಿದೆ. ಬ್ಯಾಟಿಂಗ್ ಕಿಂಗ್ ಬಳಸುವ ಶಸ್ತ್ರದಂತಹ ಬ್ಯಾಟ್ನ ದರ ಮತ್ತು ಅದರ ವಿಶೇಷತೆ ಕುತೂಹಲದ ಕಣಜವಾಗಿದೆ.
ವಿರಾಟ್ ಬಳಸುವ ಬ್ಯಾಟ್ನ ದರವೆಷ್ಟು ಗೊತ್ತಾ?: ವಿರಾಟ್ ಕೊಹ್ಲಿ ಅವರು ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಬ್ಯಾಟ್ ಎಷ್ಟು ದುಬಾರಿ ಮತ್ತು ಅದರ ವಿಶೇಷಗಳೇನು ಎಂಬುದು ಈಗಿನ ಪ್ರಶ್ನೆಯಾಗಿದೆ. ವಿರಾಟ್ಗಾಗಿ ಎಂಆರ್ಎಫ್ ಕಂಪನಿ ಬ್ಯಾಟ್ ತಯಾರಿಸುತ್ತಿದ್ದು, ಇದನ್ನು ಇಂಗ್ಲಿಷ್ ವಿಲೋ ಮರವನ್ನು ಬಳಸಲಾಗುತ್ತಿದೆ. ಕಳೆದ ವರ್ಷದ ಏಷ್ಯಾ ಕಪ್ ವೇಳೆ ಕಂಪನಿ ವಿರಾಟ್ಗೆ ಗೋಲ್ಡ್ ವಿಝಾರ್ಡ್ ಬ್ಯಾಟ್ಗಳನ್ನು ತಯಾರಿಸಿದೆ. ಇದು ಕಂಪನಿಯ ಗ್ಯಾಂಡ್ ಎಡಿಷನ್ ಬ್ಯಾಟ್ ಆಗಿದ್ದು, ಬೆಲೆ 20 ರಿಂದ 70 ಸಾವಿರ ರೂಪಾಯಿ ಇದೆ.
MRF ಕಂಪನಿ ಪ್ರಾಯೋಜಕತ್ವದ ಬ್ಯಾಟ್ ಗಟ್ಟಿ ಮತ್ತು ಹೊಡೆತಗಳಿಗೆ ಹೆಸರಾಗಿದೆ. ವಿರಾಟ್ ಬಳಸುವ ಬ್ಯಾಟ್ ಈಗಲೇ ಹರಾಜಾದರೂ ಅದು ಕೋಟಿಗಟ್ಟಲೇ ಬೆಲೆ ಕಾಣಲಿದೆ ಎಂಬುದು ಕ್ರಿಕೆಟ್ ವಲಯದ ಮಾತು. ಈ ಮೊದಲು ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರ ಬ್ಯಾಟ್ ಅನ್ನು 2021 ರಲ್ಲಿ ಹರಾಜು ಮಾಡಲಾಯಿತು. ಅದು 1.9 ಕೋಟಿ ರೂಪಾಯಿಗೆ ಹರಾಜಾಗಿದೆ. ಈವರೆಗೂ ಆಟಗಾರನ ಬ್ಯಾಟ್ ಕಂಡ ಅತಿ ಹೆಚ್ಚಿನ ಖರೀದಿ ಇದಾಗಿದೆ.
ವಿರಾಟ್ ಬ್ಯಾಟ್ ಬೀಸಿದರೆ ದಾಖಲೆಗಳು ಸೃಷ್ಟಿ: ಏಕದಿನ ವಿಶ್ವಕಪ್‌ಗೂ ಮುನ್ನ ಭಾರತ ತಂಡ ಅದ್ಭುತ ಫಾರ್ಮ್‌ಗೆ ಮರಳಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಕೂಡ ಹಳೆಯ ಖದರ್ ತೋರಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ 2 ಶತಕಗಳನ್ನು ಗಳಿಸಿದರೆ, ತಂಡ ವಿಶ್ವದಾಖಲೆಯ 317 ರನ್ಗಳ ಗೆಲುವು ದಾಖಲಿಸಿದೆ. ಇದು ಏಕದಿನ ಇತಿಹಾಸದಲ್ಲಿ ದೊಡ್ಡ ರನ್ ಅಂತರದ ಗೆಲುವಾಗಿದೆ. ಈ ಪಂದ್ಯದಲ್ಲಿ ಕೊಹ್ಲಿ 110 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 13 ಬೌಂಡರಿಗಳ ಸಮೇತ ಅಜೇಯ 166 ರನ್ ಗಳಿಸಿದ್ದರು. ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜರ ಹಲವು ದಾಖಲೆಗಳನ್ನು ಮೀರಿದ್ದಾರೆ.
ಟಾಪ್ 5 ಪಟ್ಟಿಯಲ್ಲಿ ವಿರಾಟ್ ವಿರಾಜಮಾನ: ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಲಂಕಾದ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ಟಾಪ್ 5 ನೇ ಸ್ಥಾನ ಪಡೆದಿದ್ದಾರೆ. ಜಯವರ್ಧನೆ 12650 ರನ್ ಮಾಡಿದ್ದರೆ, ವಿರಾಟ್ ಸದ್ಯ 268 ಪಂದ್ಯಗಳಲ್ಲಿ 12754 ರನ್ ಕಲೆ ಹಾಕಿದ್ದಾರೆ. ಸಚಿನ್ ತೆಂಡೂಲ್ಕರ್ 18426, ಕುಮಾರ ಸಂಗಕ್ಕಾರ 14234, ರಿಕ್ಕಿ ಪಾಂಟಿಂಗ್ 13704, ಸನತ್ ಜಯಸೂರ್ಯ 13430 ರನ್ ಕಲೆಹಾಕಿ ಮೊದಲ 4 ಸ್ಥಾನಗಳಲ್ಲಿದ್ದಾರೆ.
ಓದಿ: ವಯಾಕಾಮ್ 18 ಸಂಸ್ಥೆಗೆ ಮಹಿಳಾ ಐಪಿಎಲ್ ಪ್ರಸಾರದ ಹಕ್ಕು.. ₹951 ಕೋಟಿ ರೂಪಾಯಿಗೆ ಬಿಡ್