ETV Bharat / sports

5 ಕೋಟಿ ರೂ.ದೇಣಿಗೆ ನೀಡಿದ ಎಂಪಿಎಲ್: 7 ಕೋಟಿಯಿದ್ದ ನಿಧಿ ಸಂಗ್ರಹ ಗುರಿ 11ಕ್ಕೆ ಏರಿಸಿಕೊಂಡ ವಿರುಷ್ಕಾ ದಂಪತಿ

author img

By

Published : May 12, 2021, 9:03 PM IST

7 ಕೋಟಿರೂ ಸಂಗ್ರಹಕ್ಕೆ ಈ ಮೊದಲು ವಿರುಷ್ಕಾ ಜೋಡಿ ನಿರ್ಧಾರ ಮಾಡಿತ್ತು. ಆದರೆ ಕೊಹ್ಲಿ ರಾಯಭಾರಿಯಾಗಿರುವ ಎಂಪಿಎಲ್ ಸ್ಪೋರ್ಟ್ಸ್​ ಫೌಂಡೇಶನ್ ಬರೋಬ್ಬರಿ 5 ಕೋಟಿ ರೂಗಳನ್ನು ದೇಣಿಗೆಯಾಗಿ ನೀಡಿದೆ. ನಿನ್ನೆಗೆ ದೇಣಿಗೆ 5 ಕೋಟಿ ದಾಟಿದ್ದರಿಂದ ಸಂಗ್ರಹ ನಿಧಿ ಇದೀಗ ಒಟ್ಟಾರೆ 10 ಕೋಟಿಗಳನ್ನು ದಾಟಿದೆ. ಹಾಗಾಗಿ ತಮ್ಮ ಗುರಿಯನ್ನು ವಿರುಷ್ಕಾ ದಂಪತಿ 11 ಕೋಟಿರೂಗಳಿಗೆ ಏರಿಸಿಕೊಂಡಿದೆ.

ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ

ಮುಂಬೈ: ಭಾರತದ ಸೆಲೆಬ್ರೆಟಿ ದಂಪತಿಗಳಾದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೋವಿಡ್​ 19 ವಿರುದ್ಧ ಹೋರಾಟಕ್ಕಾಗಿ ನಡೆಸುತ್ತಿರುವ ಸಂಗ್ರಹ ನಿಧಿ ಅಭಿಯಾನ 6 ದಿನದಲ್ಲಿ ಗುರಿ ತಲುಪಿದೆ. 7 ಕೋಟಿ ಸಂಗ್ರಹದ ಗುರಿ ಹೊಂದಿದ್ದ ಸ್ಟಾರ್ ದಂಪತಿ ಇದೀಗ 11 ಕೋಟಿ ರೂ ಸಂಗ್ರಹಿಸುವುದಕ್ಕೆ ಮುಂದಾಗಿದೆ.

ಹೌದು, 7 ಕೋಟಿರೂ ಸಂಗ್ರಹಕ್ಕೆ ಈ ಮೊದಲು ವಿರುಷ್ಕಾ ಜೋಡಿ ನಿರ್ಧಾರ ಮಾಡಿತ್ತು. ಆದರೆ, ಕೊಹ್ಲಿ ರಾಯಭಾರಿಯಾಹಿರುವ ಎಂಪಿಎಲ್ ಸ್ಪೋರ್ಟ್ಸ್​ ಫೌಂಡೇಶನ್ ಬರೋಬ್ಬರಿ 5 ಕೋಟಿ ರೂಗಳನ್ನು ದೇಣಿಗೆಯಾಗಿ ನೀಡಿದೆ. ನಿನ್ನೆಗೆ ದೇಣಿಗೆ 5 ಕೋಟಿ ದಾಟಿದ್ದರಿಂದ ಸಂಗ್ರಹ ನಿಧಿ ಇದೀಗ ಒಟ್ಟಾರೆ 10 ಕೋಟಿಗಳನ್ನು ದಾಟಿದೆ. ಹಾಗಾಗಿ ತಮ್ಮ ಗುರಿಯನ್ನು ವಿರುಷ್ಕಾ ದಂಪತಿ 11 ಕೋಟಿರೂಗಳಿಗೆ ಏರಿಸಿಕೊಂಡಿದೆ.

  • Thank you MPL Sports Foundation for your generous contribution of 5 crore in our fight against Covid-19. With your help we have now increased our target to 11 crore. Anushka & I are deeply grateful for your unconditional support. 🙏@PlayMPL#InThisTogether #ActNow

    — Virat Kohli (@imVkohli) May 12, 2021 " class="align-text-top noRightClick twitterSection" data=" ">

ಕೋವಿಡ್ 2ನೇ ಅಲೆಗೆ ದೇಣಿಗೆ ಸಂಗ್ರಹಿಸುವ ಮುನ್ನ ಸ್ವತಃ ಕೊಹ್ಲಿ ಮತ್ತು ಅನುಷ್ಕಾ 2 ಕೋಟಿ ರೂ ದೇಣಿಗೆ ನೀಡಿದ್ದರು.

ಕೋವಿಡ್ 19 ವಿರುದ್ಧದ ನಮ್ಮ ಹೋರಾಟಕ್ಕೆ 5 ಕೋಟಿ ರೂ.ಗಳ ಉದಾರ ಕೊಡುಗೆ ನೀಡಿದ್ದಕ್ಕಾಗಿ ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಶನ್​ಗೆ ಧನ್ಯವಾದಗಳು. ನಿಮ್ಮ ಸಹಾಯದಿಂದ ನಾವು ಈಗ ನಮ್ಮ ಗುರಿಯನ್ನು 11 ಕೋಟಿಗೆ ಹೆಚ್ಚಿಸಿಕೊಂಡಿದ್ದೇವೆ. ನಿಮ್ಮ ಬೇಷರತ್ತಾದ ಬೆಂಬಲಕ್ಕಾಗಿ ಅನುಷ್ಕಾ ಮತ್ತು ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ವಿರಾಟ್​ ಕೊಹ್ಲಿ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ:ಆಕ್ಸಿಜನ್, ವೆಂಟಿಲೇಟರ್​ ಸೌಲಭ್ಯಕ್ಕಾಗಿ ₹70 ಲಕ್ಷದೇಣಿಗೆ ನೀಡಿದ ಪಂಜಾಬ್​ ಕಿಂಗ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.