ETV Bharat / sports

ಮುಂಬೈ ಉಗ್ರರ ದಾಳಿಗೆ 13 ವರ್ಷ: 'ಈ ದಿನವನ್ನೆಂದಿಗೂ ಮರೆಯಲಾರೆವು'- ಕೊಹ್ಲಿ ಸೇರಿದಂತೆ ಕ್ರಿಕೆಟಿಗರಿಂದ ಸ್ಮರಣೆ

author img

By

Published : Nov 26, 2021, 6:09 PM IST

2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಉಗ್ರರ ದಾಳಿಗೆ ಇಂದಿಗೆ 13 ವರ್ಷ ತುಂಬಿದೆ. ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಬ್ಯಾಟರ್​ ವಿರಾಟ್​​ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

Virat kohli tweet mumbai terror attack
Virat kohli tweet mumbai terror attack

ನವದೆಹಲಿ: ಕಳೆದ 13 ವರ್ಷಗಳ ಹಿಂದೆ ಭಯೋತ್ಪಾದಕರು ಭಾರತದೊಳಗೆ ನುಗ್ಗಿ ರಕ್ತದೋಕುಳಿ ನಡೆಸಿದ್ದರು. ಈ ವೇಳೆ ಭಾರತೀಯ ಯೋಧರು ಸೇರಿದಂತೆ 166 ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಭೀಕರ ದಾಳಿಗೆ ಇಂದು 13 ವರ್ಷ ತುಂಬಿದ್ದು, ಅನೇಕರು ಟ್ವೀಟ್ ಮಾಡಿ ದುರಂತದ ನೆನಪನ್ನು ಮೆಲುಕು ಹಾಕಿದ್ದಾರೆ.

ಟೀಂ ಇಂಡಿಯಾ ಟೆಸ್ಟ್​, ಏಕದಿನ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಮುಂಬೈ ಭಯೋತ್ಪಾದಕ ದಾಳಿ ಬಗ್ಗೆ ಟ್ವೀಟ್​ ಮಾಡಿದ್ದು, ಮುಂಬೈ ದಾಳಿ ಮರೆಯಲು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ. ಈ ದಿನ ಹಾಗೂ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರನ್ನು ನಾವೆಂದಿಗೂ ಮರೆಯುವುದಿಲ್ಲ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

  • We will never forget this day, we will never forget the lives lost. Sending my prayers to the friends and families who lost their loved ones 🙏

    — Virat Kohli (@imVkohli) November 26, 2021 " class="align-text-top noRightClick twitterSection" data=" ">

ವಿರೇಂದ್ರ ಸೆಹ್ವಾಗ್ ಟ್ವೀಟ್​

ಈ ದಾಳಿಯ ಬಗ್ಗೆ ಟ್ವೀಟ್ ಮಾಡಿರುವ ಟೀಂ ಇಂಡಿಯಾ ಮಾಜಿ ಸ್ಪೋಟಕ ಆಟಗಾರ ವಿರೇಂದ್ರ ಸೆಹ್ವಾಗ್​, ಈ ದುಃಖದ ದಿನಕ್ಕೆ 13 ವರ್ಷಗಳು. ಅವರು ನಮ್ಮ ಮಣ್ಣಿನ ಶ್ರೇಷ್ಠ ಪುತ್ರರು. ಶಹೀದ್​ ತುಕಾರಾಂ ಓಂಬ್ಳೆ. ಅಂದು ತೋರಿದ ಧೈರ್ಯ, ನಿಸ್ವಾರ್ಥತೆಗೆ ಯಾವುದೇ ಪದ, ಪ್ರಶಸ್ತಿಗಳು ನ್ಯಾಯ ನೀಡುವುದಿಲ್ಲ. ಇಂತಹ ಮಹಾನ್​ ವ್ಯಕ್ತಿಗೆ ಶಿರಬಾಗಿ ನಮಿಸುವೆ ಎಂದಿದ್ದಾರೆ.

  • 13 years since the sad day. He is of the greatest son of our soil- Shaheed Tukaram Omble. The courage, the presence of mind and the selflessness demonstrated by him on that day- no words,no awards can do justice. Dandavat pranam hai aise mahaan insaan ko . 🙏🏼 #MumbaiTerrorAttack pic.twitter.com/wi4t8wHV56

    — Virender Sehwag (@virendersehwag) November 26, 2021 " class="align-text-top noRightClick twitterSection" data=" ">

ಸಚಿನ್ ತೆಂಡೂಲ್ಕರ್ ಟ್ವೀಟ್

ಉಗ್ರರ ದಾಳಿಗೆ ಸಂಬಂಧಿಸಿದಂತೆ ಮಾಸ್ಟರ್ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಕೂಡ ಟ್ವೀಟ್ ಮಾಡಿದ್ದು, ಇದು ಹೃದಯವಿದ್ರಾವಕ ಮತ್ತು ನೋವಿನ ಸಮಯವಾಗಿತ್ತು. ಆದರೆ ಎಲ್ಲರೂ ತೋರಿಸಿರುವ ಮನೋಭಾವ ನಮ್ಮನ್ನು ಬಲಪಡಿಸಿದೆ. 26/11ರ ಸಮಯದಲ್ಲಿ ನಾವು ಕಳೆದುಕೊಂಡ ಎಲ್ಲ ಧೈರ್ಯಶಾಲಿಗಳಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಎಂದಿದ್ದಾರೆ.

  • It was a heartbreaking and painful time, but the spirit shown by everyone is what makes us stronger.
    My heartfelt tribute to all the bravehearts we lost during 26/11. Always in our prayers 🙏

    — Sachin Tendulkar (@sachin_rt) November 26, 2021 " class="align-text-top noRightClick twitterSection" data=" ">

ಇದರ ಜೊತೆಗೆ, ವಾಸೀಂ ಜಾಫರ್​, ವೆಂಕಟೇಶ್ ಪ್ರಸಾದ್​ ಸೇರಿದಂತೆ ಅನೇಕ ಕ್ರಿಕೆಟಿಗರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: India vs New Zealand 1st Test: ವಿಕೆಟ್ ನಷ್ಟವಿಲ್ಲದೆ 129 ರನ್ ಕಲೆ ಹಾಕಿದ ನ್ಯೂಜಿಲ್ಯಾಂಡ್​​​​

2008ರಲ್ಲಿ ದಾಳಿ ನಡೆಸಿದ್ದ 10 ಲಷ್ಕರ್​-ಎ-ತೊಯ್ಬಾ ಉಗ್ರರು ಪ್ರಮುಖವಾಗಿ ಛತ್ರಪತಿ ಶಿವಾಜಿ ಟರ್ಮಿನಲ್​​, ಒಬೆರಾಯ ಟ್ರೈಡೆಂಟ್​, ತಾಜ್​ ಹೋಟೆಲ್​​, ಲಿಯೋಪೋಲ್ಡ್​ ಕೆಫೆ ಸೇರಿದಂತೆ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.

ಈ ವೇಳೆ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ವೇಳೆ ಸೆರೆ ಸಿಕ್ಕಿದ್ದ ಅಜ್ಮಲ್​ ಕಸಬ್​ಗೆ 2012ರಲ್ಲಿ ಗಲ್ಲಿಗೇರಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.