ಎರಡು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಟಿ20 ಏಷ್ಯಾಕಪ್ನಲ್ಲಿ ಲಯಕ್ಕೆ ಮರಳಿದರು. ಅಫ್ಘಾನಿಸ್ತಾನದ ಸ್ಥಾನದ ವಿರುದ್ಧ ಶತಕದ ಬರವನ್ನು ನೀಗಿಸಿಕೊಂಡ ಕಿಂಗ್ ಕೊಹ್ಲಿ ನಂತರ ತಮ್ಮ ಫಾರ್ಮ್ನ್ನು ಮುಂದುವರೆಸಿಕೊಂಡು ಬಂದರು. 2022 ರ ಕೊನೆಯಲ್ಲಿ ವಿರಾಟ್ ಟಿ20 ಶತಕ ಗಳಿಸಿದರೆ ನಂತರ ಭಾರತದಲ್ಲಿ ನಡೆದ ಸರಣಿಗಳಲ್ಲಿ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲೂ ಶತಕ ಗಳಿಸಿ ಮತ್ತೆ ರನ್ ಮಷಿನ್ ಎಂಬ ಪಟ್ಟವನ್ನು ಅಂಕರಿಸಿದರು.
ಈ ವರ್ಷ ಐಪಿಎಲ್ನಲ್ಲಿ ಅವರ ಬ್ಯಾಟ್ ಘರ್ಜನೆ ಮುಂದುವರೆಸಿತ್ತು. ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ 82 ರನ್ ಗಳಿಸಿ ಈ ವರ್ಷ ದೊಡ್ಡ ಮೊತ್ತವನ್ನು ಲೀಗ್ನಲ್ಲಿ ಕಲೆ ಹಾಕುವ ಮುನ್ಸೂಚನೆಯನ್ನು ಕೊಟ್ಟಿದ್ದರು. ಅದರಂತೆ 16ನೇ ಐಪಿಎಲ್ ಲೀಗ್ನಲ್ಲಿ 2 ಶತಕ ಮತ್ತು 6 ಅರ್ಧ ಶತಕಗಳನ್ನು ಅವರು ಗಳಿಸಿದರು. ಲೀಗ್ನಲ್ಲಿ 14 ಪಂದ್ಯದಲ್ಲಿ 53.25 ರ ಸರಾಸರಿಯಲ್ಲಿ 639 ರನ್ ಗಳಿಸಿದ್ದಾರೆ. ಈ ಮೂಲಕ ಅವರು ಅತಿ ಹೆಚ್ಚು ರನ್ಗಳಿಸಿದರವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದ್ದಾರೆ. ಜೂನ್ 7 ರಿಂದ 11ರ ವರೆಗೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ವಿರಾಟ್ ಮೇಲೆ ಹೆಚ್ಚಿನ ನಿರೀಕ್ಷೆ ಹೆಚ್ಚಿದೆ. ಇದಕ್ಕೆ ಕಾರಣ ಆಸಿಸ್ ವಿರುದ್ಧ ಕಿಂಗ್ ಕೊಹ್ಲಿ ಹೊಂದಿರುವ ರೆಕಾರ್ಡ್.
ಆಸಿಸ್ ವಿರುದ್ಧ ವಿರಾಟ್ ಭರ್ಜರಿ ರೆಕಾರ್ಡ್: ವಿರಾಟ್ ಕೊಹ್ಲಿಯನ್ನು ಕೆಲ ಎದುರಾಳಿ ತಂಡಗಳು ತುಂಬಾ ಇಷ್ಟಪಡುತ್ತಾರೆ. ಅದರಲ್ಲಿ ಒಂದು ಆಸ್ಟ್ರೇಲಿಯಾ. ಈವರೆಗೆ ಆಸಿಸ್ ಮೇಲೆ ವಿರಾಟ್ ಟೆಸ್ಟ್ನಲ್ಲಿ ತಮ್ಮ ಪಾರಮ್ಯವನ್ನು ಮುಂದುವರೆಸಿದ್ದಾರೆ. ಈ ಬಾರಿ ಭರ್ಜರಿ ಫಾರ್ಮ್ನಲ್ಲಿರುವ ಕಿಂಗ್ ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕಾಂಗರೂ ಪಡೆಯನ್ನು ಕಾಡುವುದಂತೂ ಖಂಡಿತ. ಐಪಿಎಲ್ನ ಕೊನೆಯ ಐದು ಪಂದ್ಯದಲ್ಲಿ ಎರಡರಲ್ಲಿ ಶತಕ ದಾಖಲಿಸಿ ವಿರಾಟ್ ಬಿಳಿ ಬಾಲ್ನಲ್ಲಿ ಹಿಡಿತ ಹೊಂದಿದ್ದಾರೆ. ಆದರೆ ಕೆಂಪುಬಾಲ್ನಲ್ಲಿ ಹೇಗೆ ಯಶ ಕಂಡುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
-
Virat Kohli against Australia in Tests:
— Johns. (@CricCrazyJohns) June 3, 2023 " class="align-text-top noRightClick twitterSection" data="
Innings - 42
Runs - 1979
Average - 48.27
Hundreds - 8
Fifties - 5
King needs 21 runs to complete 2000 runs against Australia in Tests. pic.twitter.com/hDtZkY8Fce
">Virat Kohli against Australia in Tests:
— Johns. (@CricCrazyJohns) June 3, 2023
Innings - 42
Runs - 1979
Average - 48.27
Hundreds - 8
Fifties - 5
King needs 21 runs to complete 2000 runs against Australia in Tests. pic.twitter.com/hDtZkY8FceVirat Kohli against Australia in Tests:
— Johns. (@CricCrazyJohns) June 3, 2023
Innings - 42
Runs - 1979
Average - 48.27
Hundreds - 8
Fifties - 5
King needs 21 runs to complete 2000 runs against Australia in Tests. pic.twitter.com/hDtZkY8Fce
ಕಾಂಗರೂ ಪಡೆಯ ವಿರುದ್ಧ ಈವರೆಗೆ ವಿರಾಟ್ 42 ಇನ್ನಿಂಗ್ಸ್ಗಳನ್ನು ಆಡಿದ್ದು, ಅದರಲ್ಲಿ 48. 27 ರ ಸರಾಸರಿಯಲ್ಲಿ 1979 ರನ್ ಗಳಿಸಿದ್ದಾರೆ. ಇದರಲ್ಲಿ ವಿರಾಟ್ 8 ಶತಕ ಮತ್ತು 5 ಅರ್ಧಶತಕವನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಇನ್ನು 21 ರನ್ ಗಳಿಸಿದಲ್ಲಿ ಆಸ್ಟ್ರೇಲಿಯಾ ವಿರುದ್ಧವೇ 2000 ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಒಳಪಡುತ್ತಾರೆ. ಉತ್ತಮ ಫಾರ್ಮ್ನಲ್ಲಿರುವ ಗಿಲ್, ವಿರಾಟ್ ಮತ್ತು ಚೇತೇಶ್ವರ ಪೂಜಾರ ಮೇಲೆ ಈ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ನಿರೀಕ್ಷೆ ಹೆಚ್ಚಿದೆ.
ಸಸೆಕ್ಸ್ನಿಂದ ಓವೆಲ್ ಪ್ರಯಾಣ ಬೆಳೆಸಿದ ತಂಡ: ಭಾರತ ತಂಡ ಸಸೆಕ್ಸ್ನಲ್ಲಿನ ಮೈದಾನದಲ್ಲಿ ಇಷ್ಟು ದಿನ ಅಭ್ಯಾಸ ನಡೆಸುತ್ತಿತ್ತು. ಐಪಿಎಲ್ ಲೀಗ್ ಮುಗಿಯುತ್ತಿದ್ದಂತೆ ಮೊದಲ ಬ್ಯಾಚ್ನಲ್ಲಿ ಕೋಚ್ ಜೊತೆಗೆ ಲೀಗ್ನಿಂದ ಹೊರನಿಂದ ತಂಡದ ಆಟಗಾರರು ಇಂಗ್ಲೆಂಡ್ ಪ್ರವಾಸ ಬೆಳೆಸಿದ್ದರು. ಎಲಿಮಿನೇಟರ್ನಲ್ಲಿ ಸೋತ ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಗುಂಪಿನಲ್ಲಿ ಹೋಗಿ ತಂಡ ಸೇರಿಕೊಂಡಿದ್ದರು. ಫೈನಲ್ ಪಂದ್ಯ ಮುಗಿದ ಮಾರನೇ ದಿನವೇ ಗಿಲ್, ಜಡೇಜ, ರಹಾನೆ, ಶ್ರೀಕರ್ ಭರತ್ ಮತ್ತು ಶಮಿ ಇಂಗ್ಲೆಂಡ್ಗೆ ತೆರಳಿ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಇಂದು ಸಸೆಕ್ಸ್ ನಿಂದ ಓವೆಲ್ಗೆ ತೆರಳಿದ್ದು ಮುಂದಿನ ಅಭ್ಯಸವನ್ನು ಅಲ್ಲಿ ನಡೆಸಲಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಭಾರತಕ್ಕಾಗಿ ರನ್ ಗಳಿಸುತ್ತಾರೆ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೆಗ್ ಚಾಪೆಲ್