ETV Bharat / sports

ODI ಗೆಲುವಿನ ಸರಾಸರಿಯಲ್ಲಿ ಕೊಹ್ಲಿಯೇ ಅಗ್ರ... ಭಾರತದ ನಾಯಕನಾಗಿ ವಿರಾಟ್​ ಸಾಧನೆ ಹೀಗಿದೆ

author img

By

Published : Dec 9, 2021, 12:44 AM IST

Updated : Dec 9, 2021, 8:29 AM IST

2017ರಲ್ಲಿ ಭಾರತ ತಂಡದ ಪೂರ್ಣ ಸಮಯದ ನಾಯಕರಾಗಿ ಕೊಹ್ಲಿ ಅಧಿಕಾರ ವಹಿಸಿಕೊಂಡಿದ್ದರು. 95 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಕೊಹ್ಲಿ ಶೇಕಡಾ 70.43ರ ಜಯದ ಸರಾಸರಿಯೊಂದಿಗೆ ಭಾರತ ಕಂಡಿರುವ ಶ್ರೇಷ್ಠ ನಾಯಕರ ಸಾಲಿನಲ್ಲಿ ಅಗ್ರಗಣ್ಯರಾಗಿದ್ದಾರೆ.

Virat kohli
ವಿರಾಟ್​ ಕೊಹ್ಲಿ

ನವದೆಹಲಿ: ಏಕದಿನ ಕ್ರಿಕೆಟ್​ಗೆ ಭಾರತ ತಂಡದ ನೂತನ ನಾಯಕರಾಗಿ ರೋಹಿತ್​ ಶರ್ಮಾ ಆಯ್ಕೆಯಾಗಿದ್ದು, ಸೀಮಿತ ಓವರ್​ಗಳಲ್ಲಿ ವಿರಾಟ್​ ಕೊಹ್ಲಿ ನಾಯಕತ್ವ ಯುಗ ಅಂತ್ಯವಾಗಿದೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಟ್​ಮ್ಯಾನ್​​ ಏಕದಿನ ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದು, ವಿರಾಟ್​​ ನೇತೃತ್ವದಲ್ಲಿ ಭಾರತ ತಂಡದ ಏಳುಬೀಳಿನ ಕುರಿತಾದ ಮಾಹಿತಿ ಇಲ್ಲಿದೆ.

2017ರಲ್ಲಿ ಭಾರತ ತಂಡದ ಪೂರ್ಣ ಸಮಯದ ನಾಯಕರಾಗಿ ಕೊಹ್ಲಿ ಅಧಿಕಾರ ವಹಿಸಿಕೊಂಡಿದ್ದರು. ಈ ಹಿಂದಿನ ಕ್ಯಾಪ್ಟನ್​ ಎಂಎಸ್ ಧೋನಿ ಕೆಳಗಿಳಿದ ಬಳಿಕ ಈ ಜವಾಬ್ದಾರಿ ವಿರಾಟ್​ ಹೆಗಲಿಗೇರಿತ್ತು. 95 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಕೊಹ್ಲಿ ಶೇಕಡಾ 70.43ರ ಜಯದ ಸರಾಸರಿಯೊಂದಿಗೆ ಭಾರತ ಕಂಡಿರುವ ಶ್ರೇಷ್ಠ ನಾಯಕರ ಸಾಲಿನಲ್ಲಿ ಅಗ್ರಗಣ್ಯರಾಗಿದ್ದಾರೆ. ಇದರಲ್ಲಿ ಟೀಂ ಇಂಡಿಯಾ 65 ಗೆಲುವು ಸಾಧಿಸಿದ್ದರೆ, 27 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಟೈ ಹಾಗೂ 2 ಪಂದ್ಯಗಳು ರದ್ದುಗೊಂಡಿವೆ.

2011ರ ಏಕದಿನ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ (ಶೇ. 59.52 ಗೆಲುವಿನ ಸರಾಸರಿ) ಮತ್ತು ಕಪಿಲ್ ದೇವ್ (54.16) ಗಿಂತ ಭಾರತದ ODI ನಾಯಕನಾಗಿ ಕೊಹ್ಲಿ ಉತ್ತಮ ಗೆಲುವಿನ ಶೇಕಡಾವಾರು ಹೊಂದಿದ್ದಾರೆ. 10ಕ್ಕೂ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಇತರ ಯಾವುದೇ ಭಾರತೀಯ ನಾಯಕರಿಗಿಂತ ಅತ್ಯುತ್ತಮ ಗೆಲುವಿನ ಸರಾಸರಿ ಕೊಹ್ಲಿಯದ್ದಾಗಿದೆ. ಮಾಜಿ ನಾಯಕರಾದ ಮೊಹಮ್ಮದ್ ಅಜರುದ್ದೀನ್ ಮತ್ತು ಸೌರವ್ ಗಂಗೂಲಿ ಅವರು ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅಲ್ಲದೆ, ಕೊಹ್ಲಿ ನಾಯಕತ್ವದಲ್ಲಿ, ಭಾರತವು 19 ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ 15ನ್ನು ಗೆದ್ದುಕೊಂಡಿದೆ. ಇದರಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿನ ಐತಿಹಾಸಿಕ ಸರಣಿ ಗೆಲುವುಗಳೂ ಸೇರಿವೆ. ಆದರೆ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಡುವಲ್ಲಿ ಕೊಹ್ಲಿ ವಿಫಲರಾಗಿದ್ದು, ಅವರ ನಾಯಕತ್ವಕ್ಕೆ ಕಪ್ಪುಚುಕ್ಕೆಯಾಗಿದೆ. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಮತ್ತು 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್​ನಲ್ಲಿ ಭಾರತ ಸೋಲುಂಡಿತ್ತು. ಇತ್ತೀಚೆಗೆ ದುಬೈನಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಯಲ್ಲೂ ಕೂಡ ಸೋಲಿನೊಂದಿಗೆ ಅವರು ನಾಯಕತ್ವವನ್ನು ಕೊನೆಗೊಳಿಸಿದ್ದರು.

ಇದನ್ನೂ ಓದಿ: T20I ಜೊತೆಗೆ ODI ಕ್ಯಾಪ್ಟನ್​ ಆಗಿ ರೋಹಿತ್ ಶರ್ಮಾ ಆಯ್ಕೆ: ಟೆಸ್ಟ್​​ ತಂಡಕ್ಕೆ ಉಪನಾಯಕ

ನಾಯಕನಾಗಿ ಕೊಹ್ಲಿಯ ಬ್ಯಾಟಿಂಗ್​ನಲ್ಲೂ ಕೂಡ ಪಾರಮ್ಯ ಮೆರೆದಿದ್ದರು. ಕಪ್ತಾನನಾಗಿ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 95 ಪಂದ್ಯಗಳಿಂದ ಅವರು 21 ಶತಕ ಮತ್ತು 27 ಅರ್ಧಶತಕಗಳೊಂದಿಗೆ 72.65ರ ಸರಾಸರಿಯಲ್ಲಿ 5,449 ರನ್​ ಬಾರಿಸಿದ್ದಾರೆ. ಕೊಹ್ಲಿ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ನಂತರದ ಸ್ಥಾನದಲ್ಲಿದ್ದಾರೆ. ಅಲ್ಲದೆ, ರಿಕಿ ಪಾಂಟಿಂಗ್​ ನಾಯಕನಾಗಿ 22 ಸೆಂಚುರಿ ಗಳಿಸಿದ್ದು, ಕೊಹ್ಲಿ ಸ್ವಲ್ಪದರಲ್ಲಿ ಹಿಂದೆ ಬಿದ್ದಿದ್ದಾರೆ. ಸದ್ಯ ಟೆಸ್ಟ್ ತಂಡವನ್ನು ಮುನ್ನಡೆಸಲಿರುವ​ ಕೊಹ್ಲಿ, ಈ ಮಾದರಿಯಲ್ಲಿ 66 ಪಂದ್ಯಗಳಿಂದ 39 ಜಯದೊಂದಿಗೆ ಭಾರತದ ಅತ್ಯಂತ ಯಶಸ್ವಿ ನಾಯಕನಾಗಿದ್ದಾರೆ.

ಈಗ ಏಕದಿನ ತಂಡಕ್ಕೆ ನೂತನ ನಾಯಕನಾಗಿ ನೇಮಕಗೊಂಡಿರುವ ರೋಹಿತ್​ ಶರ್ಮಾ ಈ ಹಿಂದೆ 10 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 8 ಗೆಲುವು ಕಂಡಿದ್ದಾರೆ. ವಿಶೇಷವಾಗಿ 2018ರಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ಯುಎಇಯಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಹಿಟ್​ಮ್ಯಾನ್​ ನೇತೃತ್ವದ ಟೀಂ ಇಂಡಿಯಾವು ಬಾಂಗ್ಲಾ ಮಣಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು.

ಇದನ್ನೂ ಓದಿ: 6 ವರ್ಷದ ಹಿಂದೆ ಕಾಪ್ಟರ್‌ ಪತನವಾದ್ರೂ ರಾವತ್‌ 'ಮೃತ್ಯುಂಜಯ'.. ಈಗ ವಿಧಿಗೇ ಗೆಲುವಾಯ್ತು..

Last Updated : Dec 9, 2021, 8:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.