ETV Bharat / sports

2023ರ "ವಿರಾಟ" ದಾಖಲೆ ಪುಟ: ರನ್​ ಮಷಿನ್​ ಕೊಹ್ಲಿಯ ಮೈಲಿಗಲ್ಲುಗಳಿವು - ವಿರಾಟ್​ ಕೊಹ್ಲಿ

Virat Kohli 2023 records: 2023ರಲ್ಲಿ ಭಾರತ ಕ್ರಿಕೆಟ್​ನಲ್ಲಿ ಕೆಲ ಕಹಿಗಳನ್ನು ಕಂಡರೂ ಉತ್ತಮ ಆಟವಾಡಿದೆ. ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ತಮ್ಮ ಗೋಲ್ಡನ್​ ಫಾರ್ಮ್​​ನಿಂದ ರಚಿಸಿರುವ ದಾಖಲೆಗಳ ಪಟ್ಟಿ ಹೀಗಿದೆ.

Virat Kohli
Virat Kohli
author img

By ETV Bharat Karnataka Team

Published : Dec 31, 2023, 8:49 PM IST

ಹೈದರಾಬಾದ್​: ಜಾಗತಿಕವಾಗಿ ಕೋವಿಡ್​ ಆವರಿಸಿ ಚಟುವಟಿಕೆ ಸ್ತಬ್ಧವಾಗಿ 2019 ಖಾಲಿ ಖಾಲಿಯ ಭಾವ ಇದ್ದರೆ, 2020 ರಿಂದ 2022ರ ವರೆಗೆ ಸತತ ಎರಡು ವರ್ಷ ರನ್​ ಮಷಿನ್​ ವಿರಾಟ್​ ಕೊಹ್ಲಿ ಫಾರ್ಮ್​ನಿಂದ ಬಳಲುತ್ತಿದ್ದರು. ಇದರಿಂದ ಭಾರತದ ಕ್ರಿಕೆಟ್​ನಲ್ಲಿ ನಿರಾಶೆಯ ಛಾಯೆ ಮೂಡಿತ್ತು. 2022ರ ಟಿ20 ವಿಶ್ವಕಪ್​ನ ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ವಿರಾಟ್​ ಫಾರ್ಮ್​​ ಕಂಡುಕೊಂಡರು. ಅಂದು ಕಿಂಗ್​ ಕೊಹ್ಲಿ ಗಳಿಸಿದ 84 ರನ್ ಅವಿಸ್ಮರಣೀಯ. ಹಿಂದಿನ ಎರಡು ವರ್ಷ ಅನಾವಶ್ಯಕ ದಾಖಲೆಗಳಲ್ಲೇ ವಿರಾಟ್ ಹೆಸರು ಕೇಳಿ ಬರುತ್ತಿದ್ದರೆ, ನಂತರ ಗೋಲ್ಡನ್​ ಫಾರ್ಮ್​ಗೆ ಮರಳಿ ಹೊಸ ಮೈಲಿಗಲ್ಲನ್ನೇ ಸೃಷ್ಠಿಸುತ್ತ ಬಂದರು.

ಭಾರತದಲ್ಲಿ ಕ್ರಿಕೆಟ್​ ಪರಂಪರೆಯನ್ನು ಆಕರ್ಷಕವಾಗಿ ಉಳಿಸಿಕೊಂಡು ಹೋದ ಕೆಲ ಕ್ರಿಕೆಟಿಗರಿದ್ದಾರೆ, ಅವರಿಂದ ಮುಂದಿನ ಯುವ ಪೀಳಿಗೆ ಆಟದತ್ತ ಒಲವು ತೋರಿದೆ. ವಿರಾಟ್​ ಕೊಹ್ಲಿ ಸಚಿನ್​ ತೆಂಡೂಲ್ಕರ್​ ನಂತರ ಭಾರತದ ಶ್ರೀಮಂತ ಕ್ರಿಕೆಟ್​ ಇತಿಹಾಸವನ್ನು ರಚಿಸಿದ್ದಾರೆ ಎಂದರೆ ತಪ್ಪಾಗದು. ಅಲ್ಲದೇ ಈ ವರ್ಷ ಅವರ ಹೆಸರಿನಲ್ಲಿ ಹಲವಾರು ದಾಖಲೆಗಳು ಸೇರಿವೆ. ಹಲವಾರು ಬೇಸರದ ಘಟನೆಗಳ ನಡುವೆಯೂ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಿ ಕಿಂಗ್​ ಕೊಹ್ಲಿ ಹೊರಹೊಮ್ಮಿದ್ದಾರೆ.

2011ರಲ್ಲಿ ಯುವ ಕ್ರಿಕೆಟಿಗನಾಗಿದ್ದ ವಿರಾಟ್ ವಿಶ್ವಕಪ್​ ತಂಡದಲ್ಲಿ ಇದ್ದರು. ಅಂದು ಸಚಿನ್​ ಅವರನ್ನು ಕ್ರೀಡಾಂಗಣ ಸುತ್ತ ಹೊತ್ತು ತಿರುಗಿದ್ದರು. ಈ ಸಂಭ್ರಮ ಕಳೆದು ಬರೋಬ್ಬರಿ 13 ವರ್ಷಗಳೇ ಕಳೆಯಿತು. ಭಾರತದಲ್ಲಿ ಮತ್ತೊಂದು ಇಂತಹ ಘಟನೆ ಜರುಗುತ್ತದೆ. ವಿರಾಟ್​ ಅವರನ್ನು ಯುವ ಕ್ರಿಕೆಟಿಗರು ಮೈದಾನದ ತುಂಬೆಲ್ಲಾ ಹೊತ್ತುತಿರುಗಿ ಸಂಭ್ರಮಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಕಣ್ಣಂಚನ್ನು ತೇವವಾಗಿಸಿ ನಿರಾಶೆ ಉಂಟುಮಾಡಿತು. 10 ವರ್ಷಗಳ ಐಸಿಸಿ ಟ್ರೋಫಿಯ ಕೊರತೆ ಹಾಗೇ ಮುಂದುವರೆಯಿತು. ಇದೆಲ್ಲದರ ನಡುವೆ ವಿರಾಟ್​ ರನ್​ ಮಷಿನ್​ ಆಗಿ ರಾಶಿ ರಾಶಿ ರನ್​ ಮೊತ್ತವನ್ನು ತಂಡಕ್ಕಾಗಿ ಕಲೆಹಾಕಿದ್ದಾರೆ.

ಈ ವರ್ಷ ವಿರಾಟ್ ಸ್ಥಾಪಿಸಿದ ಬ್ಯಾಟಿಂಗ್ ದಾಖಲೆಗಳನ್ನು ನೋಡೋಣ:

  • ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ: ಸಚಿನ್​ ತೆಂಡೂಲ್ಕರ್​ ಏಕದಿನ ಕ್ರಿಕೆಟ್​ನಲ್ಲಿ 49 ಶತಕ ಗಳಿಸಿದ್ದರು. ವಿರಾಟ್​​ ಒನ್​ ಡೇ ಮಾದರಿಯಲ್ಲಿ 50 ಶತಕ ಗಳಿಸಿ ಕ್ರಿಕೆಟ್​ ದೇವರನ್ನೇ ಹಿಂದಿಕ್ಕಿದ್ದಾರೆ. ಕೊಹ್ಲಿ ಶತಕವನ್ನು ಮೈದಾನದಲ್ಲೇ ನೋಡಿದ ಸಚಿನ್​ ವಿರಾಟ್​ ಸೆಂಚುರಿಗೆ ಶುಭಕೋರಿ ಮೊದಲ ಭೇಟಿಯನ್ನು ನೆನೆದಿದ್ದರು.
  • ವಿಶ್ವಕಪ್​ನಲ್ಲಿ ದಾಖಲೆಯ ರನ್​ ಗಳಿಕೆ: ಏಕದಿನ ವಿಶ್ವಕಪ್​ನಲ್ಲಿ 11 ಪಂದ್ಯಗಳನ್ನು ಆಡಿದ ವಿರಾಟ್​ 3 ಶತಕ, 6 ಅರ್ಧಶತಕದಿಂದ 95.62ರ ಸರಾಸರಿಯಲ್ಲಿ 765 ರನ್​ ಕಲೆಹಾಕಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆದರು. 2003ರಲ್ಲಿ ಸಚಿನ್​ ತೆಂಡೂಲ್ಕರ್​ 673 ರನ್​ ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ವಿರಾಟ್​ ಅದನ್ನೂ ಹಿಂದಿಕ್ಕಿ ಹೊಸ ಮೈಲಿಗಲ್ಲು ಸ್ಥಾಪಿಸಿದರು.
  • ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ 3,000 ರನ್ ಸಿಡಿಸಿದ ಮೊದಲ ಕ್ರಿಕೆಟಿಗ: 77 ಐಸಿಸಿ ವೈಟ್-ಬಾಲ್ ಪಂದ್ಯಗಳಲ್ಲಿ ವಿರಾಟ್ 74 ಇನ್ನಿಂಗ್ಸ್‌ಗಳಲ್ಲಿ 69.30 ಸರಾಸರಿಯಲ್ಲಿ 3,465 ರನ್ ಗಳಿಸಿದ್ದಾರೆ. ಐದು ಶತಕಗಳು ಮತ್ತು 31 ಅರ್ಧಶತಕಗಳನ್ನು ಗಳಿಸಿದ್ದಾರೆ. 117 ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಏಕದಿನ ವಿಶ್ವಕಪ್​ನಲ್ಲಿ 37 ಪಂದ್ಯಗಳಲ್ಲಿ ಐದು ಶತಕಗಳು, 12 ಅರ್ಧಶತಕ ದಿಂದ 1,795 ರನ್, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 13 ಪಂದ್ಯಗಳಲ್ಲಿ 12 ಇನ್ನಿಂಗ್ಸ್‌ಗಳಲ್ಲಿ ಐದು ಅರ್ಧಶತಕದಿಂದ 529 ರನ್ ಗಳಿಸಿದ್ದಾರೆ. 27 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 14 ಅರ್ಧಶತಕದಿಂದ 1,141 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ಶ್ರೇಷ್ಠ ಕ್ರಿಸ್ ಗೇಲ್ ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ 85 ಪಂದ್ಯಗಳಲ್ಲಿ 2,942 ರನ್ ಗಳಿಸಿದ್ದು ದಾಖಲೆ ಆಗಿತ್ತು, ಅದನ್ನು ವಿರಾಟ್​ ಮೀರಿಸಿದ್ದಾರೆ.
  • 7,000 ಐಪಿಎಲ್​ ರನ್​: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 237 ಪಂದ್ಯದ ಮತ್ತು 229 ಇನ್ನಿಂಗ್ಸ್‌ಗಳಲ್ಲಿ ವಿರಾಟ್​ 37.24 ರ ಸರಾಸರಿಯಲ್ಲಿ 7,263 ರನ್ ಗಳಿಸಿದ್ದಾರೆ. ಅವರು ಏಳು ಶತಕಗಳು ಮತ್ತು 50 ಅರ್ಧಶತಕಗಳನ್ನು ತಮ್ಮ ಹೆಸರಿಗೆ ಹೊಂದಿದ್ದಾರೆ, 113 ರ ಅತ್ಯುತ್ತಮ ಸ್ಕೋರ್ ಆಗಿದೆ.
  • ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 13,000 ರನ್‌: ಈ ವರ್ಷ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ 122 ರನ್‌ಗಳ ಇನ್ನಿಂಗ್ಸ್​ ಆಡಿದ ವೇಳೆ ವಿರಾಟ್ ಕೇವಲ 267 ಇನ್ನಿಂಗ್ಸ್‌ಗಳಲ್ಲಿ 13,000 ಏಕದಿನ ರನ್‌ಗಳಿಸಿದ ಆಟಗಾರ ಆದರು. ಪ್ರಸ್ತುತ 292 ಏಕದಿನಗಳಲ್ಲಿ 50 ಶತಕ, 72 ಅರ್ಧಶತಕದಿಂದ 13,848 ರನ್​ ಗಳಿಸಿದ್ದಾರೆ.
  • 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ: ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್​​ನಲ್ಲಿ ವಿರಾಟ್ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ಒಂಬತ್ತನೇ ಆಟಗಾರರಾದರು. ಈ ಪಂದ್ಯದಲ್ಲಿ 206 ಎಸೆತಗಳಲ್ಲಿ 121 ರನ್ ಗಳಿಸಿದರು ಮತ್ತು ಅಂತಾರಾಷ್ಟ್ರೀಯ ಆಟಗಾರನಾಗಿ 500ನೇ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರರಾದರು.
  • ಐಪಿಎಲ್​ನಲ್ಲಿ ಹೆಚ್ಚು ಶತಕ: ಗುಜರಾತ್ ಟೈಟಾನ್ಸ್ ವಿರುದ್ಧ 61 ಎಸೆತಗಳಲ್ಲಿ ಅವರ ಅದ್ಭುತ 101 ರನ್ ಗಳಿಸಿದ ನಂತರ ವಿರಾಟ್ ತಮ್ಮ ಏಳನೇ ಐಪಿಎಲ್ ಶತಕವನ್ನು ದಾಖಲಿಸಿದರು ಮತ್ತು ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ (ಆರು ಶತಕ) ಅನ್ನು ಹಿಂದಿಕ್ಕಿ ಅತಿ ಹೆಚ್ಚು ಐಪಿಎಲ್ ಟನ್‌ಗಳೊಂದಿಗೆ ಬ್ಯಾಟರ್ ಆದರು.
  • ಒಂದು ಕ್ಯಾಲೆಂಡರ್ ವರ್ಷದಲ್ಲಿ ಏಕದಿನಗಳಲ್ಲಿ ಹೆಚ್ಚಿನ ಬಾರಿ 1,000 ರನ್: ಶ್ರೀಲಂಕಾ ವಿರುದ್ಧದ ಕ್ರಿಕೆಟ್ ವಿಶ್ವಕಪ್ ಪಂದ್ಯದ ವೇಳೆ ವಿರಾಟ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ 1,000 ಪ್ಲಸ್ ಏಕದಿನ ರನ್ ಗಳಿಸಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು. ವಿರಾಟ್ ಎಂಟು ವಿಭಿನ್ನ ಕ್ಯಾಲೆಂಡರ್ ವರ್ಷಗಳಲ್ಲಿ 1,000 ಏಕದಿನ ರನ್‌ಗಳನ್ನು ದಾಟಿದ್ದಾರೆ, ಸಚಿನ್ ಏಳು ಬಾರಿ.
  • 2000 ರನ್​: ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯವಾಗಿ ಸೋತ ಸಂದರ್ಭದಲ್ಲಿ ಕೊಹ್ಲಿ ಏಳು ವಿಭಿನ್ನ ಕ್ಯಾಲೆಂಡರ್ ವರ್ಷಗಳಲ್ಲಿ 2000 ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

ಇದನ್ನೂ ಓದಿ: ರಿಷಬ್​​ ಬಾಕ್ಸ್ ಆಫೀಸ್ ಕ್ರಿಕೆಟಿಗ, 2024ರಲ್ಲಿ ಮರಳುವ ವಿಶ್ವಾಸ ಇದೆ: ನಾಸಿರ್ ಹುಸೇನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.