ETV Bharat / sports

Vijay Hazare Trophy: ತಮಿಳುನಾಡು ವಿರುದ್ಧ ಹೀನಾಯ ಸೋಲುಂಡ ಕರ್ನಾಟಕ

ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ಡಿಸೆಂಬರ್ 11ರಂದು ಮುಂಬೈ ವಿರುದ್ಧ ಆಡಲಿದೆ. ಆನಂತರ ಬರೋಡಾ ಮತ್ತು ಬೆಂಗಾಲ್ ವಿರುದ್ಧ ಆಡಲಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಾದರೆ ಈ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

Tamil Nadu beat Karnataka by 8 wicket
ವಿಜಯ ಹಜಾರೆ ಟ್ರೋಫಿ 2022
author img

By

Published : Dec 9, 2021, 6:05 PM IST

ತಿರುವನಂತಪುರಂ: ವಿಜಯ ಹಜಾರೆ ಟ್ರೋಫಿಯಲ್ಲಿ ಬುಧವಾರ ಮೊದಲ ಪಂದ್ಯದಲ್ಲಿ 236 ರನ್​ಗಳ ಬೃಹತ್ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಕರ್ನಾಟಕ ತಂಡ ಗುರುವಾರ ತನ್ನ 2ನೇ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 8 ವಿಕೆಟ್​ಗಳ ಸೋಲು ಕಂಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಮನೀಶ್ ಪಾಂಡೆ ಪಡೆ ತಮಿಳುನಾಡು ಬೌಲರ್​ಗಳ ವಿರುದ್ಧ ಯಾವುದೇ ಪ್ರತಿರೋಧ ತೋರದೇ 36.3 ಓವರ್​ಗಳಲ್ಲಿ ಕೇವಲ 122 ರನ್​ಗಳಿಗೆ ಆಲೌಟ್ ಆಯಿತು. ನಾಯಕ ಮನೀಶ್ ಪಾಂಡೆ 40 ಮತ್ತು ರೋಹನ್ ಕಡಮ್ 37 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಮತ್ತು ಎರಡಂಕಿ ದಾಟಿದ ಬ್ಯಾಟರ್​ ಎನಿಸಿಕೊಂಡರು.

ಉಳಿದಂತೆ ರವಿಕುಮಾರ್ ಸಮರ್ಥ್​(0), ಕೆ. ಸಿದ್ಧಾರ್ಥ್​(6), ಕರುಣ್ ನಾಯರ್​(9), ಶ್ರೀನಿಆಸ್ ಶರತ್​(3), ಜೆ ಸುಚೀತ್(0), ವೆಂಕಟೇಶ್​ ಮುರಳೀಧರ(2), ವಿದ್ಯಾದರ್ ಪಾಟೀಲ್​(1), ಕೆಸಿ ಕಾರಿಯಪ್ಪ(9) ವೈಫಲ್ಯ ಅನುಭವಿಸಿದರು.

ತಮಿಳುನಾಡು ಪರ ಸಾಯಿ ಕಿಶೋರ್​ 28ಕ್ಕೆ 3, ಎಂ. ಸಿದ್ಧಾರ್ಥ್​ 23ಕ್ಕೆ 4, ಸಂದೀಪ್ ವಾರಿಯರ್​ 22ಕ್ಕೆ2, ಸಿಲಂಬರಸನ್​ 11ಕ್ಕೆ1, ವಾಷಿಂಗ್ಟನ್ ಸುಂದರ್​ 27ಕ್ಕೆ1 ವಿಕೆಟ್ ಪಡೆದರು.

123 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ತಮಿಳುನಾಡು 28 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಸಾಯಿ ಸುಧರ್ಸನ್ 18, ಎನ್.ಜಗದೀಶನ್​ 16, ಬಾಬಾ ಇಂದ್ರಜಿತ್​ ಅಜೇಯ 51 ಮತ್ತು ವಾಷಿಂಗ್ಟನ್ ಸುಂದರ್​ ಅಜೇಯ 31 ರನ್​ಗಳಿಸಿದರು.

ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ಡಿಸೆಂಬರ್ 11ರಂದು ಮುಂಬೈ ವಿರುದ್ಧ ಆಡಲಿದೆ. ಆನಂತರ ಬರೋಡಾ ಮತ್ತು ಬೆಂಗಾಲ್ ವಿರುದ್ಧ ಆಡಲಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಾದರೆ ಈ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ಇದನ್ನೂ ಓದಿ:Vijay Hazare Trophy: ಪುದುಚೆರಿ ವಿರುದ್ಧ ಕರ್ನಾಟಕಕ್ಕೆ 236 ರನ್​ಗಳ ಅಮೋಘ ವಿಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.