ಹೈದರಾಬಾದ್: ಭಾರತ ಮತ್ತು ಪಾಕಿಸ್ತಾನ ಎಂದಾಗ ಮೊದಲು ಕೇಳಿ ಬರುವ ಪದ ಸಾಂಪ್ರದಾಯಿಕ ಎದುರಾಳಿಗಳು ಎಂದು. ಇದು ಕ್ರೀಡೆಯಲ್ಲೂ ಬಿಂಬಿತವಾಗುತ್ತಿರುತ್ತದೆ. ಅದರಲ್ಲೂ ಭಾರತ - ಪಾಕಿಸ್ತಾನದ ನಡುವ ನಡೆಯುವ ಕ್ರಿಕೆಟ್ ಮೇಲೆ ಎಲ್ಲಿಲ್ಲದ ನಿರೀಕ್ಷೆಗಳಿರುತ್ತದೆ. 2019ರ ವಿಶ್ವಕಪ್ ನಂತರ ಭಾತರ ಪಾಕ್ ಏಕದಿನ ಪಂದ್ಯದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮುಖಾಮುಖಿ ಆಗಿತ್ತು. ಆದರೆ, ಈ ಬಹುನಿರೀಕ್ಷಿತ ಹೈವೋಲ್ಟೇಜ್ ಪಂದ್ಯ ಮಳೆಯಿಂದ ರದ್ದಾಯಿತು.
-
A Pakistani baba stops this cute girl from loving Virat Kohli & India but this courageous girl gives a befitting reply to him and continues her support for Virat. Hats off to her.#INDvPAK #PAKvIND pic.twitter.com/9nh1M9FPbW
— Silly Context (@SillyMessiKohli) September 2, 2023 " class="align-text-top noRightClick twitterSection" data="
">A Pakistani baba stops this cute girl from loving Virat Kohli & India but this courageous girl gives a befitting reply to him and continues her support for Virat. Hats off to her.#INDvPAK #PAKvIND pic.twitter.com/9nh1M9FPbW
— Silly Context (@SillyMessiKohli) September 2, 2023A Pakistani baba stops this cute girl from loving Virat Kohli & India but this courageous girl gives a befitting reply to him and continues her support for Virat. Hats off to her.#INDvPAK #PAKvIND pic.twitter.com/9nh1M9FPbW
— Silly Context (@SillyMessiKohli) September 2, 2023
ಕೇವಲ ಭಾರತದ ಬ್ಯಾಟಿಂಗ್ ಮಾತ್ರ ಮಳೆ ಅವಕಾಶ ನೀಡಿತು ನಂತರ ಎರಡನೇ ಇನ್ನಿಂಗ್ಸ್ ವೇಳೆ ಸುರಿದ ಮಳೆ ಬಿಡುವು ನೀಡದ ಕಾರಣ ಉಭಯ ತಂಡಕ್ಕೆ ತಲಾ ಒಂದು ಅಂಕ ಹಂಚಿ ಫಲಿತಾಂಶ ರಹಿತ ಪಂದ್ಯ ಎಂದು ಪ್ರಕಟಿಸಲಾಯಿತು. ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ್ದ ಭಾರತ 266 ರನ್ಗಳನ್ನು ಮಧ್ಯಮ ಕ್ರಮಾಂಕದ ಉತ್ತಮ ಪ್ರದರ್ಶನದಿಂದ ಕಲೆಹಾಕಿತ್ತು. ಇದರಲ್ಲಿ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು.
ಈ ಪಂದ್ಯ ಸ್ಥಗಿತವಾಗಿದ್ದಕ್ಕೆ ಹೆಚ್ಚಿನ ಅಭಿಮಾನಿಗಳು ಬೇಸರಗೊಂಡಿದ್ದರು. ಈ ಎರಡು ರಾಷ್ಟ್ರಗಳ ಪಂದ್ಯವನ್ನು ನೋಡಲು ಬರುವ ಅಭಿಮಾನಿಗಳು ವಿರಾಟ್ ಆಟವನ್ನು ನೋಡಲು ಇಚ್ಚಿಸುತ್ತಾರೆ. ಇದಕ್ಕೆ ಕಾರಣ ಈ ಹಿಂದಿನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಡೀ ತಂಡವೇ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಾಗ ವಿರಾಟ್ ಏಕಾಂಗಿ ಪ್ರದರ್ಶನ ನೀಡಿರುವ ಅನೇಕ ನಿದರ್ಶನಗಳಿವೆ. ಇದರಿಂದಾಗಿ ವಿರಾಟ್ ಅಭಿಮಾನಿಗಳಿಗೆ ಪಾಕಿಸ್ತಾನ ಪಂದ್ಯ ಹೆಚ್ಚು ಅಚ್ಚುಮೆಚ್ಚಿನದ್ದು. ಕಳೆದ ವರ್ಷದ ಟಿ-20 ವಿಶ್ವಕಪ್ನಲ್ಲಿ ಭಾತರ ಉತ್ತಮ ಪ್ರದರ್ಶನ ನೀಡದಿದ್ದರೂ, ಪಾಕಿಸ್ತಾನದ ವಿರುದ್ಧ ವಿರಾಟ್ 86 ರನ್ ಆಟದ ಮೂಲಕ ಗೆಲುವು ದಾಖಲಿಸಿತ್ತು.
-
"Artist Sachaan Baloch from Balochistan created a sand art of @imVkohli on the beach".#ViratKohli Sand Art by Sachaan#SandArt #Gwadar #Balochistan pic.twitter.com/17aConC8g2
— Balochistan (@baloch69991) September 3, 2023 " class="align-text-top noRightClick twitterSection" data="
">"Artist Sachaan Baloch from Balochistan created a sand art of @imVkohli on the beach".#ViratKohli Sand Art by Sachaan#SandArt #Gwadar #Balochistan pic.twitter.com/17aConC8g2
— Balochistan (@baloch69991) September 3, 2023"Artist Sachaan Baloch from Balochistan created a sand art of @imVkohli on the beach".#ViratKohli Sand Art by Sachaan#SandArt #Gwadar #Balochistan pic.twitter.com/17aConC8g2
— Balochistan (@baloch69991) September 3, 2023
ಶನಿವಾರದ ಪಂದ್ಯಕ್ಕೆ ವಿರಾಟ್ ಮೇಲೆ ಇದೇ ನಿರೀಕ್ಷೆ ಇಟ್ಟು ಬಂದಿದ್ದ ಪಾಕಿಸ್ತಾನದ ಯುವತಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನದ ಯುವತಿ ಅಂದು ವಿಶೇಷವಾಗಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅನ್ನು ಮೈದಾನದಲ್ಲಿ ಲೈವ್ ವೀಕ್ಷಿಸುವ ಆಸೆಯಿಂದ ಬಂದಿದ್ದಾಗಿ ಮತ್ತು ವಿರಾಟ್ ಬೇಗ ಔಟ್ ಆಗಿದ್ದು ಬೇಸರ ತಂದಿದೆ ಎಂದು ಹೇಳಿಕೊಂಡಿದ್ದಾಳೆ.
ಆ ವಿಡಿಯೋದಲ್ಲಿ ಪಾಕಿಸ್ತಾನಿ ಯುವತಿಗೆ ಪಾಕ್ ನಾಯಕ ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ನಡುವೆ ಯಾರನ್ನು ಇಷ್ಟ ಪಡುತ್ತೀರಿ ಎಂದು ಕೇಳಿದಾಗ, ಯುವತಿ ತನ್ನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಎಂದು ಹೇಳಿದ್ದಾಳೆ. ಕೊಹ್ಲಿ ಆಟ ನೋಡಲು ಇಲ್ಲಿಗೆ ಬಂದಿದ್ದೇನೆ. ನೀವು ಯಾವ ತಂಡವನ್ನು ಬೆಂಬಲಿಸುತ್ತೀರಿ? ಕೇಳಿದಾಗ, "ನಾನು ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ ಎಂದು ತನ್ನ ಕೆನ್ನೆಯ ಮೇಲೆ ಭಾರತ ಮತ್ತು ಪಾಕಿಸ್ತಾನದ ಧ್ವಜಗಳನ್ನು ತೋರಿಸಿದ್ದಾಳೆ".
ಮತ್ತೊಂದೆಡೆ, ಪಾಕ್ನ ಬಲೂಚಿಸ್ತಾನದ ಕೆಲವು ಅಭಿಮಾನಿಗಳು ವಿನೂತನ ರೀತಿಯಲ್ಲಿ ಕೊಹ್ಲಿ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ. ವಿರಾಟ್ ಕೊಹ್ಲಿಯ ಬೃಹತ್ ಚಿತ್ರವನ್ನು ಮರಳಿನಿಂದ ತಯಾರಿಸಿ ಡ್ರೋನ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಭಾರತ ಸ್ಟಾರ್ ಬ್ಯಾಟರ್ಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳಿದ್ದಾರೆ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಇದನ್ನೂ ಓದಿ: ಭಾರತ - ನೇಪಾಳ ಪಂದ್ಯದ ಮ್ಯಾಚ್ ರೆಫರಿ ಆಗಿ ದಾಖಲೆ ಬರೆಯಲಿದ್ದಾರೆ ಕನ್ನಡಿಗ ಜಾವಗಲ್ ಶ್ರೀನಾಥ್