ETV Bharat / sports

U19 ವಿಶ್ವಕಪ್​: ಕೆರಿಬಿಯನ್ ನಾಡಿನಲ್ಲಿ ಮಿಂಚುತ್ತಿರುವ ಈ ಪ್ರತಿಭೆ ನಿತ್ಯ 3 ಗಂಟೆ ರೈಲುಪ್ರಯಾಣ ಮಾಡಿ ಕ್ರಿಕೆಟ್ ಕಲಿತ - ಅಂಡರ್ 19 ವಿಶ್ವಕಪ್​

ಓಸ್ತ್ವಾಲ್​ಗೆ 16, 19 ವರ್ಷಗಳಿದ್ದಾಗಲೂ ನಾವು ಆತನನ್ನು ಹಿರಿಯರ ವಿಭಾಗದ ಪಂದ್ಯಗಳಲ್ಲಿ ಆಡಿಸುತ್ತಿದ್ದೆವು. ಆ ಸಂದರ್ಭದಲ್ಲಿ ಆತ ಪೈಪೋಟಿಯುತ ಬೌಲರ್​ ಆಗಿದ್ದರು. ಸೀನಿಯರ್ ಹಂತದಲ್ಲಿ ಆಡುತ್ತಿದ್ದರೂ ಆತ ಯಾವುದೇ ಕಷ್ಟವನ್ನು ಎದುರಿಸಿಲ್ಲ ಎಂದು ಜಾಧವ್​ ನೆನಪಿಸಿಕೊಂಡರು.

Vicky Ostwal  journey
ವಿಕಿ ಓಸ್ತ್ವಾಲ್
author img

By

Published : Jan 17, 2022, 9:43 PM IST

ಪುಣೆ: ಮಹಾರಾಷ್ಟ್ರದ ಕೆಲವು ಭಾಗದಲ್ಲಿ ಕ್ರಿಕೆಟ್​ ಆಡುವ ಮಧ್ಯಮ ವರ್ಗದ ಯುವ ಕ್ರಿಕೆಟಿಗರಿಗೆ ಅಲ್ಲಿನ ರೈಲಿನ ಪ್ರಯಾಣದ ಅನುಭವ ಇದ್ದೇ ಇರುತ್ತದೆ. ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್,​ ಇತ್ತೀಚೆಗೆ ಭಾರತ ತಂಡದಲ್ಲಿ ಮಿಂಚುತ್ತಿರುವ ಶಾರ್ದೂಲ್ ಠಾಕೂರ್​ ಕೂಡ ಈ ಅನುಭವದ ಭಾಗವಾಗಿದ್ದಾರೆ. ತಮ್ಮೂರಿನಿಂದ ಕ್ರಿಕೆಟ್​ ಅಕಾಡೆಮಿಗೆ ತರಬೇತಿ ಪಡೆಯುವುದಕ್ಕಾಗಿ ಗಂಟೆಗಟ್ಟಲೆ ಪಯಣಿಸುತ್ತಿದ್ದ ಇವರು ತಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದಿದ್ದಾರೆ. ಇದೀಗ ಇದೇ ಸಾಲಿಗೆ ಮತ್ತೊಬ್ಬ ಯುವ ಆಟಗಾರ ಸೇರಿದ್ದಾರೆ.

ಆ ಯುವಕನ ಹೆಸರು ವಿಕಿ ಓಸ್ತ್ವಾಲ್. ಎರಡು ದಿನಗಳ ಹಿಂದೆ ಕೆರಿಬಿಯನ್​ ನಾಡಿನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಭೀತಿ ಎದುರಿಸುತ್ತಿದ್ದ ಭಾರತ ತಂಡಕ್ಕೆ ಆಸರೆಯಾದ ಪ್ರತಿಭೆ. ತಮ್ಮ ಕರಾರುವಾಕ್ ಸ್ಪಿನ್​ ಬೌಲಿಂಗ್ ದಾಳಿಯಿಂದ 5 ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಯುವಕ. ಈ ಪಂದ್ಯಕ್ಕೂ ಮೊದಲೇ ನಡೆದಿದ್ದ ಏಷ್ಯಾಕಪ್​ನಲ್ಲೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಈ ಬೌಲರ್​ ಪ್ರಸ್ತುತ ಕ್ರಿಕೆಟ್​ ವಲಯದಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ಸ್ಪಿನ್​ ಬೌಲರ್​.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲ ಗಿರಿಧಾಮದಲ್ಲಿ ಬೆಳೆದ ಈ ಯುವಕ, ಆರಂಭದಲ್ಲಿ ಹವ್ಯಾಸಕ್ಕಾಗಿ ಕ್ರಿಕೆಟ್​ ಆಡುತ್ತಾ ಆನಂದಿಸುತ್ತಿದ್ದ. ನಂತರ ತನ್ನ 9ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿ ಮಾಜಿ ಕ್ರಿಕೆಟ್ ದಿಗ್ಗಜ ದಿಲೀಪ್ ವೆಂಗ್​ಸರ್ಕರ್​ ಕ್ರಿಕೆಟ್​ ಅಕಾಡೆಮಿಗೆ ಸೇರಿಕೊಂಡ. ಆದರೆ ತುಂಬಾ ದೂರವಾಗಿದ್ದರಿಂದ ಹತ್ತಿರದ ಅದೇ ಅಕಾಡೆಮಿಯ ಬೇರೆ ಬ್ರಾಂಚ್​ಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ಅವರ ಕೋಚ್​ ಮೋಹನ್​ ಜಾಧವ್​ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಲೈನ್​ ಆ್ಯಂಡ್ ಲೆಂತ್ ಅದ್ಭುತ

ವಿಕಿ ಆರಂಭದಿಂದಲೂ ಎಡಗೈ ಸ್ಪಿನ್​ ಬೌಲಿಂಗ್ ಮಾಡುತ್ತಿದ್ದಾನೆ. ಆತ 10 ವರ್ಷದವನಿದ್ದಾಗ ಅಂಡರ್​ 13 ವಿಭಾಗದಲ್ಲಿ 14 ಪಂದ್ಯಗಳಲ್ಲಿ ಆಡಿಸಿದ್ದೆ. ಆತನ ಲೈನ್​ ಆ್ಯಂಡ್ ಲೆಂತ್​, ಬೌನ್ಸ್ ಮತ್ತು ಆಟದ ಕಡೆಗಿನ ಒಲವು ಅದ್ಭುತವಾಗಿತ್ತು ಎಂದು ಮೊದಲು ಯುವ ಬೌಲರ್​ನಲ್ಲಿನ ಸ್ಪಾರ್ಕ್ ಗಮನಿಸಿದ ಜಾಧವ್ ತಿಳಿಸಿದ್ದಾರೆ.

ಸೀನಿಯರ್​ ವಿಭಾಗದಲ್ಲಿ ಸ್ಪರ್ಧೆ

ಓಸ್ತ್ವಾಲ್​ಗೆ 16, 19 ವರ್ಷಗಳಿದ್ದಾಗಲೂ ನಾವು ಆತನನ್ನು ಹಿರಿಯರ ವಿಭಾಗದ ಪಂದ್ಯಗಳಲ್ಲಿ ಆಡಿಸುತ್ತಿದ್ದೆವು. ಆ ಸಂದರ್ಭದಲ್ಲಿ ಪೈಪೋಟಿಯುತ ಬೌಲರ್​ ಆಗಿದ್ದ. ಸೀನಿಯರ್ ಹಂತದಲ್ಲಿ ಆಡುತ್ತಿದ್ದರೂ ಆತ ಯಾವುದೇ ಕಷ್ಟ ಎದುರಿಸಿಲ್ಲ ಎಂದು ಜಾಧವ್​ ನೆನಪಿಸಿಕೊಂಡರು.

ಜಾಧವ್​ ಪ್ರಕಾರ, 13ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ವಯೋಮಾನದ ತಂಡಗಳಲ್ಲಿ ಅವಕಾಶ ಪಡೆದ ವಿಕಿ, ಅಲ್ಲಿಂದ ಹಿಂದಿರುಗಿ ನೋಡಲಿಲ್ಲ. ಪ್ರತಿಯೊಂದು ಹಂತದಲ್ಲೂ ಉತ್ತಮ ಪ್ರದರ್ಶನ ತೋರುತ್ತಾ ಇಂದು ಭಾರತ ಕಿರಿಯರ ತಂಡದಲ್ಲಿ ಅವಕಾಶ ಪಡೆದಿದ್ದಾನೆ.

ರೈಲಿನಲ್ಲಿ3 ಗಂಟೆ ಪ್ರಯಾಣ

ಮುಂಬೈ ಕ್ರಿಕೆಟಿಗರಲ್ಲಿ ಸ್ಥಳೀಯ ರೈಲಿನ ಪ್ರಯಾಣ ಒಂದು ಅವಿಭಾಜ್ಯ ಅಂಗ. ಈ ಹಿಂದೆ ಸಚಿನ್​ ತೆಂಡೂಲ್ಕರ್​,ಶಾರ್ದೂಲ್ ಠಾಕೂರ್‌ರಿಂದ ಯುವ ಆಟಗಾರ ಪೃಥ್ವಿ ಶಾವರೆಗೂ ತಮ್ಮ ಆರಂಭದ ದಿನಗಳಲ್ಲಿ ಅಭ್ಯಾಸಕ್ಕಾಗಿ ಈ ರೈಲುಗಳನ್ನೇ ಅವಲಂಬಿಸಿದ್ದರು. ಆದರೆ ಇದು ಮಹಾರಾಷ್ಟ್ರ ಆಟಗಾರರಿಗೆ ಸಂಬಂಧಿಸಿಲ್ಲದ ಸಂಗತಿಯಾದರೂ ಓಸ್ತ್ವಾಲ್​ಗೆ ಅನಿವಾರ್ಯವಾಗಿತ್ತು. ಆತನ ಸ್ಥಳ ಲೋನಾವಾಲಗಿದ್ದರಿಂದ ಚಿನಾವಾಡಕ್ಕೆ ದಿನನಿತ್ಯ ಮೂರು ಗಂಟೆ ರೈಲಿನಲ್ಲಿ ಪ್ರಯಾಣ ಅನಿವಾರ್ಯವಾಗಿತ್ತು. ಇವರ ತಂದೆ ಶಾಲೆಯಲ್ಲಿ ವಿಶೇಷ ಅನುಮತಿ ಪಡೆದು ಬೇಗನೆ ಅವರನ್ನು ಕರೆದುಕೊಂಡು ಬರುತ್ತಿದ್ದರು. ಇದು ಮೂರರಿಂದ ನಾಲ್ಕು ವರ್ಷಗಳವರೆಗೆ ಹೀಗೆಯೇ ನಡೆದಿತ್ತು ಎನ್ನುತ್ತಾರೆ ಜಾಧವ್​.

ಆದರೆ ಪ್ರತಿಭಾವಂತ ಕ್ರಿಕೆಟಿಗನ ಪ್ರತಿನಿತ್ಯದ 3 ಗಂಟೆ ಪ್ರಯಾಣದಲ್ಲೇ ವ್ಯರ್ಥವಾಗುತ್ತಿತ್ತು. ಆತ ಏನಾದರೂ ಅಕಾಡೆಮಿಯ ಸಮೀಪವಿರುವ ಸ್ಥಳಕ್ಕೆ ಸ್ಥಳಾಂತರಗೊಂಡರೆ ಪ್ರಯಾಣದ ಸಮಯ ಉಳಿಯುತ್ತದೆ. ಈ ಪ್ರಯಾಣದ ಅವಧಿಯನ್ನು ಉಳಿಸಿದರೆ ಆತನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ನಾವು ಭಾವಿಸಿ ಆತನ ಪೋಷಕರಿಗೆ ಸಾಧ್ಯವಾದರೆ ಅಕಾಡೆಮಿಗೆ ಹತ್ತಿರದಲ್ಲೇ ಉಳಿಯುವಂತೆ ಮನವಿ ಮಾಡಿದೆವು. ಅವರೂ ಕೂಡ ಒಪ್ಪಿಕೊಂಡರು. ನಂತರ ಅಕಾಡೆಮಿಗೆ ನಡೆದು ಬರಬಹುದಾದ ಸ್ಥಳಕ್ಕೆ ಸ್ಥಳಾಂತರಗೊಂಡರು. ಇದೀಗ ವೆಂಗ್​ಸರ್ಕರ್​ ಅಕಾಡೆಮಿಯಲ್ಲಿ ಅದ್ಭುತ ಆಟಗಾರನಾಗಿ ಹೊರಹೊಮ್ಮಿದ್ದಾರೆ ಎಂದು ಜಾಧವ್ ಯುವ ಸ್ಪಿನ್ನರ್​ ಕ್ರಿಕೆಟ್ ಜರ್ನಿಯನ್ನು ವಿವರಿಸಿದರು.

ಇದನ್ನೂ ಓದಿ:ಭಾರತ ತಂಡದ ನಾಯಕತ್ವ ದೊಡ್ಡ ಗೌರವ, ಅವಕಾಶ ಸಿಕ್ಕರೆ ಹಿಂಜರಿಯಲ್ಲ: ಬುಮ್ರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.