ದುಬೈ : ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸ್ಟ್ರೇಲಿಯಾದ ಬೆತ್ ಮೂನಿ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಭಾರತದ ಮತ್ತೊಬ್ಬ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ 3ನೇ ಸ್ಥಾನ ಪಡೆದಿದ್ದಾರೆ.
ಶೆಫಾಲಿ ವರ್ಮಾ(726) ಇತ್ತೀಚಿಗೆ ಮುಗಿದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ, ಇದೇ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಬೆತ್ ಮೂನಿ ಉತ್ತಮ 754 ರೇಟಿಂಗ್ ಪಡೆದು ಅಗ್ರಸ್ಥಾನ ಪಡೆದಿದ್ದಾರೆ. 709 ಅಂಕಗಳನ್ನು ಹೊಂದಿರುವ ಸ್ಮೃತಿ ಮಂಧಾನ 3ನೇ ಸ್ಥಾನದಲ್ಲಿದ್ದಾರೆ.
-
We have a new No. 1 in town 👏
— ICC (@ICC) October 12, 2021 " class="align-text-top noRightClick twitterSection" data="
Plenty of movement in this week's @MRFWorldwide ICC Women's T20I Player Rankings 📈
More 👉 https://t.co/9r1AQ9zGSu pic.twitter.com/o0U1hEYJ1T
">We have a new No. 1 in town 👏
— ICC (@ICC) October 12, 2021
Plenty of movement in this week's @MRFWorldwide ICC Women's T20I Player Rankings 📈
More 👉 https://t.co/9r1AQ9zGSu pic.twitter.com/o0U1hEYJ1TWe have a new No. 1 in town 👏
— ICC (@ICC) October 12, 2021
Plenty of movement in this week's @MRFWorldwide ICC Women's T20I Player Rankings 📈
More 👉 https://t.co/9r1AQ9zGSu pic.twitter.com/o0U1hEYJ1T
ಟಾಪ್ 10ರಲ್ಲಿ ಆಸ್ಟ್ರೇಲಿಯಾದ ನಾಯಕಿ ಮೆಗ್ಲ್ಯಾನಿಂಗ್ 4, ನ್ಯೂಜಿಲ್ಯಾಂಡ್ನ ಸೋಫಿ ಡಿವೈನ್ 5ರಲ್ಲಿದ್ದಾರೆ. ಅಲಿಸ್ಸಾ ಹೀಲಿ 6ನೇ, ಸೂಜಿ ಬೇಟ್ಸ್ 7ನೇ ಸ್ಥಾನದಲ್ಲಿದ್ದಾರೆ. ಬೌಲರ್ಗಳ ಶ್ರೇಯಾಂಕದಲ್ಲಿ ಇಂಗ್ಲೆಂಡ್ನ ಸೋಫಿ ಎಕ್ಲೆಸ್ಟೋನ್ ಮತ್ತು ಸಾರಾ ಗ್ಲೇನ್ ಮೊದಲೆರಡು ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್, ಆಸ್ಟ್ರೇಲಿಯಾದ ಮೇಗನ್ ಶೂಟ್ ಮತ್ತು ಭಾರತದ ದೀಪ್ತಿ ಶರ್ಮಾ ಕ್ರಮವಾಗಿ 3,4 ಮತ್ತು 5ನೇ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ:ಇಬ್ಬರು ಭಾರತೀಯರು ಸೇರಿ ಟಾಪ್ 5 ಟಿ20 ಕ್ರಿಕೆಟಿಗರನ್ನು ಹೆಸರಿಸಿದ ರಶೀದ್ ಖಾನ್