ETV Bharat / sports

ಉತ್ತರಾಖಂಡ ರಾಜ್ಯ ಬ್ರಾಂಡ್ ಅಂಬಾಸಿಡರ್ ಆಗಿ ರಿಷಭ್ ಪಂತ್ ನೇಮಕ - ಉತ್ತರಖಂಡ ಸರ್ಕಾರ ರಾಜ್ಯ ಬ್ರಾಂಡ್​ ಅಂಬಾಸಿಡರ್ ರಿಷಭ್ ಪಂತ್

ಭಾರತ ಮೂರು ಮಾದರಿಯ ತಂಡದಲ್ಲಿ ಖಾಯಂ ಬ್ಯಾಟರ್ ಆಗಿರುವ ರಿಷಭ್ ಪಂತ್ ಭಾರತ ಕ್ರಿಕೆಟ್​ನ ಭವಿಷ್ಯ ಆಗಿದ್ದಾರೆ. ಅವರು ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ..

Uttarakhand govt appoints Rishabh Pant as state brand ambassador
ಉತ್ತರಖಂಡ ರಾಜ್ಯ ಬ್ರಾಂಡ್ ಅಂಬಾಸಿಡರ್ ಆಗಿ ರಿಷಭ್ ಪಂತ್ ನೇಮಕ
author img

By

Published : Dec 19, 2021, 10:23 PM IST

Updated : Dec 20, 2021, 8:17 AM IST

ಡೆಹರಡೂನ್ : ಭಾರತ ತಂಡದ ಉದಯೋನ್ಮುಖ ವಿಕೆಟ್ ಕೀಪರ್ ಮತ್ತು ಬ್ಯಾಟರ್​ ರಿಷಭ್ ಪಂತ್ ಅವರನ್ನು ಉತ್ತರಾಖಂಡ ಸರ್ಕಾರ ರಾಜ್ಯ ಬ್ರಾಂಡ್​ ಅಂಬಾಸಿಡರ್​ ಆಗಿ ನೇಮಕ ಮಾಡಿರುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾನುವಾರ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಸರ್ಕಾರ ಕ್ರೀಡೆ ಮತ್ತು ಸಾರ್ವಜನಿಕ ಆರೋಗ್ಯದ ಕಡೆಗೆ ರಾಜ್ಯದ ಯುವಕರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಅದಕ್ಕಾಗಿ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ, ಯುವಕರಿಗೆ ಸ್ಪೂರ್ತಿಯಾಗಿರುವ ಉತ್ತರಾಖಂಡದ ರಿಷಭ್​ ಪಂತ್​ ಅವರನ್ನು ಸ್ಟೇಟ್​ ಬ್ರಾಂಡ್​ ಅಂಬಾಸಿಡರ್ ಆಗಿ ನಮ್ಮ ಸರ್ಕಾರ ನೇಮಕ ಮಾಡಿದೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಭಾರತ ಮೂರು ಮಾದರಿಯ ತಂಡದಲ್ಲಿ ಖಾಯಂ ಬ್ಯಾಟರ್ ಆಗಿರುವ ರಿಷಭ್ ಪಂತ್ ಭಾರತ ಕ್ರಿಕೆಟ್​ನ ಭವಿಷ್ಯ ಆಗಿದ್ದಾರೆ. ಅವರು ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದ ಜೊತೆಯಲ್ಲಿದ್ದಾರೆ.

ಇದನ್ನೂ ಓದಿ:ಅಂಡರ್​ 19 ವಿಶ್ವಕಪ್​ಗೆ ಭಾರತ ತಂಡ ಪ್ರಕಟ : ಡೆಲ್ಲಿಯ ಯಶ್ ಧುಲ್ ನಾಯಕ, ಕರ್ನಾಟಕದ ಅನೀಶ್ವರ್‌ಗೆ ಅವಕಾಶ

Last Updated : Dec 20, 2021, 8:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.