ಮುಂಬೈ: ಸತತ ಗೆಲುವುಗಳನ್ನೇ ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಯುಪಿ ವಾರಿಯರ್ಸ್ ಎದುರು ಮಂಡಿಯೂರಿದೆ. ಯುಪಿ ವಾರಿಯರ್ಸ್ ಮುಂಬೈ ವಿರುದ್ಧ 5 ವಿಕೆಟ್ಗಳ ಜಯ ದಾಖಲಿಸಿದೆ. ಲೀಗ್ ಪಂದ್ಯದಲ್ಲಿ ಮುಂಬೈಗೆ ಇದು ಪ್ರಥಮ ಸೋಲಾಗಿದೆ. ಕಳಪೆ ಬ್ಯಾಟಿಂಗ್ನಿಂದ ಕಡಿಮೆ ಮೊತ್ತಕ್ಕೆ ಕುಸಿದ ಕೌರ್ ಪಡೆ ಫೈನಲ್ ಪ್ರವೇಶಕ್ಕೆ ಕಂಡಿದ್ದ ಕನಸು ಮುಂದಿನ ಪಂದ್ಯಕ್ಕೆ ಮುಂದೂಡಿಕೆಯಾಗಿದೆ.
ಮುಂಬೈ ಕೊಟ್ಟಿದ್ದ ಸುಲಭ ಗುರಿಯನ್ನು ಬೆನ್ನು ಹತ್ತಿದ ಅಲಿಸ್ಸಾ ಹೀಲಿ ಪಡೆ ಸೆಣಸಾಡಿ ಗೆಲುವು ದಾಖಲಿಸಿದೆ. ಯುಪಿ ವಾರಿಯರ್ಸ್ ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡು ಕೌರ್ ಪಡೆಯನ್ನು 127ಕ್ಕೆ ಕಟ್ಟಿಹಾಕಿತು. ಸೋಫಿ ಎಕ್ಲೆಸ್ಟೋನ್ ಮೂರು ವಿಕೆಟ್ ಪಡೆದುಕೊಂಡರು. ಅವರ ಜೊತೆ ದೀಪ್ತಿ ಶರ್ಮಾ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ ಎರಡು ವಿಕೆಟ್ ಪಡೆದರು. ಇದನ್ನು ಬೆನ್ನತ್ತಿದ ಯುಪಿ ಕೊನೆಯ 3 ಬಾಲ್ ಉಳಿಸಿಕೊಂಡು ಗೆಲುವು ಸಾಧಿಸಿತು.
ಮುಂಬೈ ಇಂಡಿಯನ್ಸ್ನ ಯಾಸ್ತಿಕಾ ಭಾಟಿಯಾ (7) ಮತ್ತು ನ್ಯಾಟ್ ಸಿವರ್-ಬ್ರಂಟ್ (5) ಅವರು ವಿಕೆಟ್ ಬೇಗ ಕಳೆದುಕೊಂಡರು. ಇದರಿಂದ ಮುಂಬೈಗೆ ಆರಂಭಿಕ ಆಘಾತ ಉಂಟಾಯಿತು. ಹೇಲಿ ಮ್ಯಾಥ್ಯೂಸ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರಾದರೂ ಗುಜರಾತ್ ಬೌಲಿಂಗ್ ಎದುರು ವಿಫಲತೆ ಕಂಡರು.
-
Take a bow @Sophecc19 🙌🏻🙌🏻
— Women's Premier League (WPL) (@wplt20) March 18, 2023 " class="align-text-top noRightClick twitterSection" data="
She finishes in style with a SIX & powers @UPWarriorz to a thrilling win! 👏👏
Scorecard ▶️ https://t.co/6bZ3042C4S #TATAWPL | #MIvUPW pic.twitter.com/pwR2D2AoLZ
">Take a bow @Sophecc19 🙌🏻🙌🏻
— Women's Premier League (WPL) (@wplt20) March 18, 2023
She finishes in style with a SIX & powers @UPWarriorz to a thrilling win! 👏👏
Scorecard ▶️ https://t.co/6bZ3042C4S #TATAWPL | #MIvUPW pic.twitter.com/pwR2D2AoLZTake a bow @Sophecc19 🙌🏻🙌🏻
— Women's Premier League (WPL) (@wplt20) March 18, 2023
She finishes in style with a SIX & powers @UPWarriorz to a thrilling win! 👏👏
Scorecard ▶️ https://t.co/6bZ3042C4S #TATAWPL | #MIvUPW pic.twitter.com/pwR2D2AoLZ
35 ರನ್ ಗಳಿಸಿ ಆಡುತ್ತಿದ್ದ ಹೇಲಿ ಮ್ಯಾಥ್ಯೂಸ್ ಅವರು ಸೋಫಿ ಎಕ್ಲೆಸ್ಟೋನ್ಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ 25 ರನ್ ಗಳಿಸಿದ್ದ ಹರ್ಮನ್‌ಪ್ರೀತ್ ಕೌರ್ ಸಹ ಔಟ್ ಆದರು. ಇದರಿಂತ ತಂಡಕ್ಕೆ ಇನ್ನಷ್ಟೂ ರನ್ ಸೆಳೆತ ಕಡಿಮೆಯಾಯಿತು. ಇಸ್ಸಿ ವಾಂಗ್ ಒಂದೆಡೆ ವಿಕೆಟ್ ಹೋಗುತ್ತಿದ್ದರು ತಮ್ಮ ಆಟವನ್ನು ಮುಂದುವರೆಸಿದರು. ಅಮೆಲಿಯಾ ಕೆರ್ (3), ಹುಮೈರಾ ಕಾಜಿ (4), ಧಾರಾ ಗುಜ್ಜರ್ (3), ಅಮಂಜೋತ್ ಕೌರ್ (5) ಮತ್ತು ಸೈಕಾ ಇಶಾಕ್ ಶೂನ್ಯಕ್ಕೆ ಔಟ್ ಆದರು. ಇಸ್ಸಿ ವಾಂಗ್ 32 ರನ್ಗೆ ವಿಕೆಟ್ ಒಪ್ಪಿಸಿದರು. 20 ಓವರ್ಗೆ ಸಂಪೂರ್ಣ ಪತನವಾದ ಕೌರ್ ಪಡೆ 127 ರನ್ ಗಳಿಸಿತ್ತು.
ಈ ಮೊತ್ತವನ್ನು ಬೆನ್ನು ಹತ್ತಿದ ಅಲಿಸ್ಸಾ ಹೀಲಿ ಮತ್ತು ದೇವಿಕಾ ವೈದ್ಯ ಬಂದಂತೆ ಹೋದರು. ಕಿರಣ್ ನವಗಿರೆ (12), ತಹ್ಲಿಯಾ ಮೆಕ್‌ಗ್ರಾತ್ (38), ಗ್ರೇಸ್ ಹ್ಯಾರಿಸ್ (39) ರನ್ ಗಳಿಸಿ ತಂಡ ವಿಕೆಟ್ ಕಾಯ್ದುಕೊಂಡದ್ದಲ್ಲದೇ ಗೆಲುವಿನ ರನ್ ಬಳಿಗೆ ತಲುಪಲು ಕೊಡುಗೆ ನೀಡಿದರು. ಆದರೆ ಕೊನೆ ಕ್ಷಣದಲ್ಲಿ ದೀಪ್ತಿ ಶರ್ಮಾ ಮತ್ತು ಸೋಫಿ ಎಕ್ಲೆಸ್ಟೋನ್ ಸಮಯೋಚಿತ ಬ್ಯಾಟಿಂಗ್ನಿಂದ ಯುಪಿ ವಾರಿಯರ್ಸ್ ಕೊನೆಯ ಮೂರು ಬಾಲ್ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.
ಮುಂಬೈ ಇಂಡಿಯನ್ಸ್ಗೆ ಪ್ರಥಮ ಸೋಲು: ವುಮೆನ್ಸ್ ಪ್ರೀಮಿಯರ್ ಲೀಗ್ನ ಪ್ರಥಮ ಪಂದ್ಯದಿಂದ ಗೆಲುವಿನ ಲಯದಲ್ಲಿದ್ದ ಮುಂಬೈ ಇಂಡಿಯನ್ಸ್ಗೆ ಯುಪಿ ವಾರಿಯರ್ಸ್ ಸೋಲಿನ ರುಚಿ ತೋರಿಸಿದ್ದಾರೆ. ಸತತ ಎರಡು ಪಂದ್ಯಗಳನ್ನು ಸೋತಿದ್ದ ಯುಪಿ ಉತ್ತಮ ಕಮ್ ಬ್ಯಾಕ್ ಮಾಡಿದೆ.
ಇದನ್ನೂ ಓದಿ: ಟಾಸ್ ಗೆದ್ದ ಯುಪಿ ವಾರಿಯರ್ಸ್ ಬೌಲಿಂಗ್ ಆಯ್ಕೆ: ಮುಂಬೈ ಗೆದ್ದರೆ ಫೈನಲ್ ಪಕ್ಕಾ