ಮುಂಬೈ: ಸತತ ಸೋಲು ಕಂಡಿರುವ ಆರ್ಸಿಬಿಗೆ ಇಂದು ಗೆಲುವು ಕಂಡರೆ, ಪ್ಲೇ ಆಪ್ ಕನಸು ಉಳಿದುಕೊಳ್ಳಲಿದೆ. ಇಂದಿನ ಪಂದ್ಯದಲ್ಲೂ ಆರ್‌ಸಿಬಿ ಸೋಲನುಭವಿಸಿದರೆ ಲೀಗ್ನ ಸ್ಪರ್ಧೆಯಿಂದ ಹೊರ ಬೀಳಲಿದೆ. ಕಳೆದ ಪಂದ್ಯದಲ್ಲಿ ಕ್ರೀಡಾಂಗಣ ಬದಲಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಟ ಬದಲಾಗಿರಲಿಲ್ಲ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಇಂದು ಆರ್‌ಸಿಬಿ ಅಲಿಸ್ಸಾ ಹೀಲಿ ನೇತೃತ್ವದ ಯುಪಿ ವಾರಿಯರ್ಸ್ ಅನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಆರ್‌ಸಿಬಿ ತಂಡ ಬೌಲಿಂಗ್ ಆಯ್ದುಕೊಂಡಿದೆ. ಬೆಂಗಳೂರು ಮತ್ತು ಗುಜರಾತ್ನಲ್ಲಿ ಒಂದೊಂದು ಬದಲಾವಣೆಗಳಾಗಿದೆ.
-
🚨 Toss Update 🚨@RCBTweets win the toss and opt to field first against @UPWarriorz.
— Women's Premier League (WPL) (@wplt20) March 15, 2023 " class="align-text-top noRightClick twitterSection" data="
Follow the match ▶️ https://t.co/uW2g78eeTC#TATAWPL | #UPWvRCB pic.twitter.com/vOiu6imSsu
">🚨 Toss Update 🚨@RCBTweets win the toss and opt to field first against @UPWarriorz.
— Women's Premier League (WPL) (@wplt20) March 15, 2023
Follow the match ▶️ https://t.co/uW2g78eeTC#TATAWPL | #UPWvRCB pic.twitter.com/vOiu6imSsu🚨 Toss Update 🚨@RCBTweets win the toss and opt to field first against @UPWarriorz.
— Women's Premier League (WPL) (@wplt20) March 15, 2023
Follow the match ▶️ https://t.co/uW2g78eeTC#TATAWPL | #UPWvRCB pic.twitter.com/vOiu6imSsu
ಗುಜರಾತ್ ಜೈಂಟ್ಸ್ ಆಡುವ ತಂಡ: ಅಲಿಸ್ಸಾ ಹೀಲಿ(ವಿಕೆಟ್ ಕೀಪರ್/ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ಗ್ರೇಸ್ ಹ್ಯಾರಿಸ್, ತಹ್ಲಿಯಾ ಮೆಗ್ರಾತ್, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ತಂಡ: ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್ ಸಿಂಗ್, ಕನಿಕಾ ಅಹುಜಾ
ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲು ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದರೆ ಬರಡು ಭೂಮಿಯಲ್ಲಿ ಜಲ ಸಿಕ್ಕಿದಂತಾಗುತ್ತದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವುದರ ಜೊತೆಗೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಎಲ್ಲ ಪಂದ್ಯದಲ್ಲಿ ಗೆದ್ದರೆ ಕನಸು ಉಳಿಯಲಿದೆ. ಆರ್‌ಸಿಬಿ ಇಂದಿನ ಪಂದ್ಯದಲ್ಲಿ ಗೆದ್ದು ಮಿಕ್ಕೆರಡು ಪಂದ್ಯದಲ್ಲೂ ಉತ್ತಮ ಗೆಲುವು ದಾಖಲಿಸಬೇಕಿದೆ.
ಮಾರ್ಚ್ 12 ರಂದು, ವಾರಿಯರ್ಸ್ ಅನ್ನು ಮುಂಬೈ ಇಂಡಿಯನ್ಸ್ 8 ವಿಕೆಟ್‌ಗಳಿಂದ ಸೋಲಿಸಿತು. ಅದೇ ಸಮಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇಂದಿನ ಪಂದ್ಯ ಸೇರಿದಂತೆ ಆರ್‌ಸಿಬಿ ಇನ್ನೆರಡು ಪಂದ್ಯಗಳನ್ನು ಆಡಬೇಕಿದೆ.
ಭರ್ಜರಿ ಗೆಲುವು ಸಾಧಿಸಿದ್ದ ಯುಪಿ ವಾರಿಯರ್ಸ್: ರೌಂಡ್ ರಾಬಿನ್ ಸುತ್ತಿನ ಮೊದಲ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿರ್ಸ್ ವಿರುದ್ಧ ಹೀನಾಯ ಸೋಲು ಕಂಡಿತ್ತು. 138 ರನ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಲ್ಔಟ್ ಆಗಿತ್ತು. ಎಲ್ಲಿಸಾ ಪೆರಿ 52 ರನ್ ಗಳಿಸಿ ತಂಡಕ್ಕೆ ಆಸರೆ ಆದರೆ, ಹೆಚ್ಚಿನವರು ಒಂದಂಕಿ ಆಟಕ್ಕೆ ವಿಕೆಟ್ ಒಪ್ಪಿಸಿದ್ದರು. ಯುಪಿ ಪರ ಸೋಫಿ ಎಕ್ಲೆಸ್ಟೋನ್ 4 ವಿಕೆಟ್ ಮತ್ತು ದಿಪ್ತಿ ಶರ್ಮಾ 3 ವಿಕೆಟ್ ಪಡೆದಿದ್ದರು. ಯುಪಿ ವಾರಿಯರ್ಸ್ ಯಾವುದೇ ವಿಕೆಟ್ ನಷ್ಟ ಅನುಭವಿಸದೇ ಗೆಲುವು ಕಂಡಿತ್ತು, ನಾಯಕಿ ಅಲಿಸ್ಸಾ ಹೀಲಿ 96 ರನ್ಗಳ ಭರ್ಜರಿ ಬ್ಯಾಟಿಂಗ್ ಮಾಡಿದ್ದರು.
ಮುಂಬೈ ಇಂಡಿಯನ್ಸ್ ರೀತಿ ಕಮ್ಬ್ಯಾಕ್ ಮಾಡುತ್ತಾ ಆರ್‌ಸಿಬಿ: ಐಪಿಎಲ್ 2014ರಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ ಐದು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ನಂತರದ ಒಂಬತ್ತು ಪಂದ್ಯದಲ್ಲಿ ಏಳನ್ನು ಗೆದ್ದು, ಪ್ಲೇ - ಆಫ್ ಪ್ರವೇಶ ಪಡೆದುಕೊಂಡಿತು. ಈಗ ರಾಯಲ್ ಚಾಲೆಂಜರ್ಸ್ ತಮ್ಮ ಮುಂದಿನ ಮೂರು ಪಂದ್ಯಗಳನ್ನು ಗೆದ್ದರೆ, ನಂತರ ಅವರು ಪ್ಲೇ-ಆಫ್ ಟಿಕೆಟ್ ಖಚಿತಪಡಿಸಿಕೊಳ್ಳಬಹುದು. ಇದಕ್ಕಾಗಿ ಸ್ಮೃತಿ ಮಂಧಾನಾ ತಂಡ ಆಲ್ರೌಂಡರ್ ಪ್ರದರ್ಶನ ನೀಡುವ ಅಗತ್ಯ ಇದೆ. ಸದ್ಯ ಎಲ್ಲ ಪಂದ್ಯಗಳನ್ನು ಸೋತಿರುವ ಆರ್‌ಸಿಬಿ ಅಂಕ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ: ಮುಂದುವರೆದ ಮುಂಬೈ ಇಂಡಿಯನ್ಸ್ ಗೆಲುವಿನ ಓಟ: ಗುಜರಾತ್ ವಿರುದ್ಧ 55 ರನ್ ಜಯ