ನವದೆಹಲಿ : ಕ್ರಿಕೆಟ್ನಲ್ಲಿ ಅವಕಾಶ ಸಿಗದಿದ್ದಕ್ಕೆ ಭಾರತ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಅಮೆರಿಕಾಕ್ಕೆ ವಲಸೆ ಹೋಗಿರುವ ಉನ್ಮುಕ್ತ್ ಚಾಂದ್ ಮೈನರ್ ಕ್ರಿಕೆಟ್ ಲೀಗ್ನಲ್ಲಿ ಅಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ ಮೈನರ್ ಲೀಗ್ ಕ್ರಿಕೆಟ್ನಲ್ಲಿ ಚಾಂದ್ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಇಂದು ನಡೆದ ಆಸ್ಟಿನ್ ಅಥ್ಲೆಟಿಕ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ವೀರಾವೇಶದ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಅವರು ಈ ಪಂದ್ಯದಲ್ಲಿ ಕೇವಲ 69 ಎಸೆತಗಳಲ್ಲಿ 15 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್ಗಳ ನೆರವಿನಿಂದ 132 ರನ್ಗಳಿಸಿದ್ದಾರೆ.
ಈ ಪಂದ್ಯದಲ್ಲಿ ಆಸ್ಟಿನ್ ಅಥ್ಲೆಟಿಕ್ಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಉನ್ಮುಕ್ತ್ ಚಾಂದ್ ಅಬ್ಬರದ ಶತಕದ ನೆರವಿನಿಂದ ಸಿಲಿಕಾನ್ ವ್ಯಾಲಿ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಭರ್ಜರಿ ಜಯ ಸಾಧಿಸಿದೆ.
-
Unmukt Chand scored unbeaten 132 runs from 69 balls including 15 fours and 7 sixes for Silicon Valley Strikers in Minor League Cricket in USA.pic.twitter.com/8iKuoKmJmx
— Johns. (@CricCrazyJohns) September 27, 2021 " class="align-text-top noRightClick twitterSection" data="
">Unmukt Chand scored unbeaten 132 runs from 69 balls including 15 fours and 7 sixes for Silicon Valley Strikers in Minor League Cricket in USA.pic.twitter.com/8iKuoKmJmx
— Johns. (@CricCrazyJohns) September 27, 2021Unmukt Chand scored unbeaten 132 runs from 69 balls including 15 fours and 7 sixes for Silicon Valley Strikers in Minor League Cricket in USA.pic.twitter.com/8iKuoKmJmx
— Johns. (@CricCrazyJohns) September 27, 2021
ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಮೈದಾನದ ಮೂಲೆ ಮೂಲೆಗಳಿಗೂ ಬೌಂಡರಿ ಮತ್ತು ಸಿಕ್ಸರ್ಗಳ ಸುರಿಮಳೆಗೈಯ್ದರು. ಇವರ ಆರ್ಭಟದ ಮುಂದೆ ಅಸಹಾಯಕರಾದ ಎದುರಾಳಿಗಳು ದಿಕ್ಕು ತೋಚದೇ ಚಾಂದ್ ಬ್ಯಾಟಿಂಗ್ ವೀಕ್ಷಿಸಿದರು.
2012ರಲ್ಲಿ ಭಾರತಕ್ಕೆ ಅಂಡರ್-19 ವಿಶ್ವಕಪ್ ಗೆದ್ದ ತಂಡದ ನೇತೃತ್ವ ವಹಿಸಿದ್ದ ಚಾಂದ್, ಕೊಹ್ಲಿ, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಅವರಂತೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಸರು ಮಾಡಲು ಸಾಧ್ಯವಾಗಲಿಲ್ಲ.
ಕೊನೆಗೆ ದೇಶೀಯ ಕ್ರಿಕೆಟ್, ಐಪಿಎಲ್ನಲ್ಲೂ ವಿಫಲರಾದ ಅವರು, ಅವಕಾಶವಂಚಿತರಾಗಿ ಇರುವುದಕ್ಕಿಂತ ಉಳಿದಿರುವ ಕೆಲವು ವರ್ಷಗಳಲ್ಲಿ ಅಮೆರಿಕಾದಲ್ಲಿ ಕ್ರಿಕೆಟ್ ಆಡಿ ಭವಿಷ್ಯ ರೂಪಿಸಿಕೊಳ್ಳಲು ವಲಸೆ ಹೋಗಿದ್ದಾರೆ.
ಇದನ್ನು ಓದಿ:ಚಹಾಲ್ರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಿ: ಅಭಿಮಾನಿಗಳಿಂದ ಬಿಸಿಸಿಐಗೆ ಮನವಿ