ನವದೆಹಲಿ: 2012ರಲ್ಲಿ ಅಂಡರ್-19 ಭಾರತ ತಂಡದ ಕ್ಯಾಪ್ಟನ್ ಆಗಿ ವಿಶ್ವಕಪ್ ಗೆದ್ದುಕೊಟ್ಟಿರುವ ನಾಯಕ ಉನ್ಮುಕ್ತ್ ಚಾಂದ್ ಭಾರತೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
-
T2- On to the next innings of my life #JaiHind🇮🇳 pic.twitter.com/8yK7QBHtUZ
— Unmukt Chand (@UnmuktChand9) August 13, 2021 " class="align-text-top noRightClick twitterSection" data="
">T2- On to the next innings of my life #JaiHind🇮🇳 pic.twitter.com/8yK7QBHtUZ
— Unmukt Chand (@UnmuktChand9) August 13, 2021T2- On to the next innings of my life #JaiHind🇮🇳 pic.twitter.com/8yK7QBHtUZ
— Unmukt Chand (@UnmuktChand9) August 13, 2021
2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಅಂಡರ್-19 ಫೈನಲ್ ಪಂದ್ಯದಲ್ಲಿ ಚಾಂದ್ ಅಜೇಯ 111ರನ್ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ, ಟೀಂ ಇಂಡಿಯಾದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದರು. ಹೀಗಾಗಿ ನಿವೃತ್ತಿ ಘೋಷಣೆ ಮಾಡಿರುವ ಅವರು ಇದೀಗ ಅಮೆರಿಕದಲ್ಲಿ ಕ್ರಿಕೆಟ್ ಆಡುವ ಸಾಧ್ಯತೆ ದಟ್ಟವಾಗಿದೆ.
-
T3- On to the next innings of my life #JaiHind🇮🇳 pic.twitter.com/w84kWeCqhM
— Unmukt Chand (@UnmuktChand9) August 13, 2021 " class="align-text-top noRightClick twitterSection" data="
">T3- On to the next innings of my life #JaiHind🇮🇳 pic.twitter.com/w84kWeCqhM
— Unmukt Chand (@UnmuktChand9) August 13, 2021T3- On to the next innings of my life #JaiHind🇮🇳 pic.twitter.com/w84kWeCqhM
— Unmukt Chand (@UnmuktChand9) August 13, 2021
ಚಾಂದ್ 67 ಪ್ರಥಮ ದರ್ಜೆ ಕ್ರಿಕೆಟ್ನಿಂದ 3,379ರನ್ಗಳಿಕೆ ಮಾಡಿದ್ದು, ಎಂಟು ಶತಕ ಮತ್ತು 16 ಅರ್ಧಶತಕ ಗಳಿಸಿದರು. ಟಿ-20 ಕ್ರಿಕೆಟ್ನಲ್ಲಿ 1,565ರನ್ಗಳಿಸಿದ್ದಾರೆ. ಕೇವಲ 18 ವರ್ಷದವರಿದ್ದಾಗಲೇ ಐಪಿಎಲ್ಗೆ ಲಗ್ಗೆ ಹಾಕಿದ್ದ ಚಾಂದ್, ಡೆಲ್ಲಿ ಡೇರ್ ಡೆವಿಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದಾರೆ. 2013ರಲ್ಲಿ ನ್ಯೂಜಿಲ್ಯಾಂಡ್ ಹಾಗೂ 2015ರಲ್ಲಿ ಬಾಂಗ್ಲಾ ಪ್ರವಾಸ ಕೈಗೊಂಡಿದ್ದ ಭಾರತದ ಎ ತಂಡದಲ್ಲೂ ಚಾಂದ್ ಇದ್ದರು.
28 ವರ್ಷದ ಉನ್ಮುಕ್ತ್ ಚಾಂದ್ ನಿವೃತ್ತಿ ಘೋಷಣೆ ಮಾಡಿರುವ ಬೆನ್ನಲ್ಲೇ ಅಮೆರಿಕಕ್ಕೆ ಹೋಗಲು ತಯಾರಿ ನಡೆಸಿದ್ದು, ಅಲ್ಲಿನ ರಾಷ್ಟ್ರೀಯ ಕ್ರಿಕೆಟ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಭಾರತದಲ್ಲಿ ಅವಕಾಶದ ಕೊರತೆಯಿಂದಾಗಿ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದು ಬಂದಿದೆ.