ETV Bharat / sports

ಅಮೆರಿಕದ ಕ್ರಿಕೆಟ್ ಲೀಗ್​​ನೊಂದಿಗೆ ಮಾಜಿ ಕ್ರಿಕೆಟಿಗ ಉನ್ಮುಕ್ತ್ ಚಾಂದ್​ ಒಪ್ಪಂದ - ಟೊಯೋಟಾ ಮೈನರ್ ಕ್ರಿಕೆಟ್​ ಲೀಗ್ ಚಾಂಪಿಯನ್​ಶಿಪ್

ಅಮೆರಿಕದಲ್ಲಿ ಕ್ರಿಕೆಟ್ ಅನ್ನು ಅಭಿವೃದ್ಧಿಪಡಿಸಲು, ಮುಂದಿನ ಪೀಳಿಗೆಯ ಅಮೆರಿಕದ ಕ್ರಿಕೆಟಿಗರಿಗೆ ಮಾರ್ಗದರ್ಶನ ಮಾಡುವ ಸಲುವಾಗಿ ಉನ್ಮುಕ್ತ್ ಚಾಂದ್ ಅವರೊಂದಿಗೆ ಹಲವು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಲೀಗ್​ನ ವೆಬ್​ಸೈಟ್​​ ಮಾಹಿತಿ ನೀಡಿದೆ.

Unmukt Chand inks multi-year deal with Major League Cricket
ಅಮೆರಿಕದ ಕ್ರಿಕೆಟ್ ಲೀಗ್​​ನೊಂದಿಗೆ ಮಾಜಿ ಕ್ರಿಕೆಟಿಗ ಉನ್ಮುಕ್ತ್ ಚಂದ್ ಒಪ್ಪಂದ
author img

By

Published : Aug 14, 2021, 12:42 PM IST

Updated : Aug 14, 2021, 1:05 PM IST

ನವದೆಹಲಿ: 19 ವರ್ಷದೊಳಗಿನವರ ಕ್ರಿಕೆಟ್​ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಮಾಜಿ ಕ್ರಿಕೆಟಿಗ ಉನ್ಮುಕ್ತ್ ಚಾಂದ್ ​​ಅಮೆರಿಕದ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್​ ತಂಡದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ.

ಅಮೆರಿಕದ ಮೈನರ್ ಕ್ರಿಕೆಟ್​ ಲೀಗ್ (ಎಂಎಲ್​ಸಿ)ಯ 2021ನೇ ಆವೃತ್ತಿಗಾಗಿ ಉನ್ಮುಕ್ತ್ ಚಾಂದ್ ಸಹಿ ಹಾಕಿದ್ದು, ಶುಕ್ರವಾರವಷ್ಟೇ ಎಲ್ಲಾ ವಿಭಾಗದ ಕ್ರಿಕೆಟ್​ಗೆ ರಾಜೀನಾಮೆಯನ್ನು ಘೋಷಣೆ ಮಾಡಿದ್ದರು.

ರಾಜೀನಾಮೆ ನೀಡಿದ ನಂತರ ಅಮೆರಿಕ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದ ಪರವಾಗಿ ಟೊಯೋಟಾ ಮೈನರ್ ಕ್ರಿಕೆಟ್​ ಲೀಗ್ ಚಾಂಪಿಯನ್​ಶಿಪ್​ನಲ್ಲಿ ಉನ್ಮುಕ್ತ್ ಚಾಂದ್ ಮೈದಾನಕ್ಕೆ ಇಳಿಯಲಿದ್ದು, ಮೊದಲ ಪಂದ್ಯವನ್ನು ಸೋಕಲ್ ಲ್ಯಾಶಿಂಗ್ಸ್​​ ವಿರುದ್ಧ ಆಡಲಿದ್ದಾರೆ.

ಮೋರ್ಗಾನ್ ಹಿಲ್ ಔಟ್​ಡೋರ್​ ಸ್ಫೋರ್ಟ್ಸ್​​​ ಕಾಂಪ್ಲೆಕ್ಸ್​ನಲ್ಲಿ ಹಣಾಹಣಿ ನಡೆಯಲಿದೆ. ಈಗಾಗಲೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಉನ್ಮುಕ್ತ್​ ಚಾಂದ್​ ಸ್ಥಳಾಂತರಗೊಂಡಿದ್ದಾರೆ.

ಅಮೆರಿಕದಲ್ಲಿ ಕ್ರಿಕೆಟ್ ಅನ್ನು ಅಭಿವೃದ್ಧಿಪಡಿಸಲು, ಮುಂದಿನ ಪೀಳಿಗೆಯ ಅಮೆರಿಕದ ಕ್ರಿಕೆಟಿಗರಿಗೆ ಮಾರ್ಗದರ್ಶನ ಮಾಡುವ ಸಲುವಾಗಿ ಉನ್ಮುಕ್ತ್ ಚಾಂದ್ ಅವರೊಂದಿಗೆ ಹಲವು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಲೀಗ್​ನ ವೆಬ್​ಸೈಟ್​​ ಮಾಹಿತಿ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉನ್ಮುಕ್ತ್ ಚಾಂದ್​ ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಮುಂದಿನ ಹೆಜ್ಜೆಯಿಟ್ಟಿದ್ದೇನೆ. ಅಮೆರಿಕನ್ ಕ್ರಿಕೆಟ್​ ಅಭಿವೃದ್ಧಿಯ ಭಾಗವಾಗಲಿದ್ದೇನೆ. ಈ ಅವಕಾಶದಿಂದ ರೋಮಾಂಚನಗೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಟೊಯೋಟಾ ಮೈನರ್ ಕ್ರಿಕೆಟ್​ ಲೀಗ್ ಚಾಂಪಿಯನ್​ಶಿಪ್ ರಾಷ್ಟ್ರ ಮಟ್ಟದ ಟಿ-20 ಮಾದರಿಯ ಚಾಂಪಿಯನ್​ಶಿಪ್ ಆಗಿದ್ದು, ಸುಮಾರು 27 ನಗರಗಳು ಈ ಚಾಂಪಿಯನ್​​ಶಿಪ್​​ನಲ್ಲಿ ಪಾಲ್ಗೊಳ್ಳಲಿವೆ.

ಇದನ್ನೂ ಓದಿ: ಆಗಸ್ಟ್ 14 ಇನ್ಮುಂದೆ 'ವಿಭಜನೆಯ ಭಯಾನಕತೆಯ ನೆನಪಿನ ದಿನ': ಪ್ರಧಾನಿ ಮೋದಿ

Last Updated : Aug 14, 2021, 1:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.