ಮೆಲ್ಬೋರ್ನ್: ಭಾರತದ ಐಪಿಎಲ್ನಂತೆ ವಿಶ್ವದಲ್ಲಿ ಹೆಸರು ಮಾಡಿರುವ ಇನ್ನೊಂದು ಕ್ರಿಕೆಟ್ ಲೀಗ್ ಎಂದರೆ ಅದು ಆಸ್ಟ್ರೇಲಿಯಾದ ಬಿಗ್ ಬ್ಯಾಷ್. ಮಹಿಳೆಯರ ವುಮೆನ್ ಬಿಗ್ ಬ್ಯಾಷ್ ಲೀಗ್ನಲ್ಲಿ ಭಾರತದ 8 ಆಟಗಾರ್ತಿಯರು ಈಗಾಗಲೇ ಆಡುತ್ತಿದ್ದಾರೆ. ಇದೀಗ ಪುರುಷರ ಬಿಗ್ ಬ್ಯಾಷ್ ಲೀಗ್ ಟೂರ್ನಿಗೆ ಇದೇ ಮೊದಲ ಬಾರಿಗೆ ಭಾರತೀಯ ಕ್ರಿಕೆಟಿಗರೊಬ್ಬರು ಎಂಟ್ರಿ ಕೊಟ್ಟಿದ್ದಾರೆ.
-
The new colours suit you, @UnmuktChand9 ❤️#GETONRED pic.twitter.com/aJKcnv6aIP
— Melbourne Renegades (@RenegadesBBL) January 18, 2022 " class="align-text-top noRightClick twitterSection" data="
">The new colours suit you, @UnmuktChand9 ❤️#GETONRED pic.twitter.com/aJKcnv6aIP
— Melbourne Renegades (@RenegadesBBL) January 18, 2022The new colours suit you, @UnmuktChand9 ❤️#GETONRED pic.twitter.com/aJKcnv6aIP
— Melbourne Renegades (@RenegadesBBL) January 18, 2022
ಭಾರತ U19 ವಿಶ್ವಕಪ್ ವಿಜೇತ ಮಾಜಿ ನಾಯಕ ಉನ್ಮುಕ್ತ್ ಚಂದ್ ಬಿಬಿಎಲ್ ಪ್ರವೇಶಿಸಿದ್ದಾರೆ. ಭಾರತದ ಆಟಗಾರನೊಬ್ಬ ಈ ಲೀಗ್ನಲ್ಲಿ ಆಡುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು. ಆರೋನ್ ಫಿಂಚ್ ನೇತೃತ್ವದ ಮೆಲ್ಬೋರ್ನ್ ರೆನಿಗೇಡ್ಸ್ ತಂಡವನ್ನು ಇವರು ಸೇರಿದ್ದಾರೆ.
ಇಂದು ಮೆಲ್ಬೋರ್ನ್ ರೆನಿಗೇಡ್ಸ್ ತಂಡ ಹೋಬರ್ಟ್ ಹರಿಕೇನ್ಸ್ ವಿರುದ್ಧ ಸೆಣಸಾಡುತ್ತಿದ್ದು, ಈ ಪಂದ್ಯದಲ್ಲಿ ಉನ್ಮುಕ್ತ್ ಚಂದ್ ಕಣಕ್ಕಿಳಿದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೆಲ್ಬೋರ್ನ್ ರೆನಿಗೇಡ್ಸ್ ತಂಡ ಚಂದ್ಗೆ ಶುಭಾಶಯ ತಿಳಿಸಿದೆ.
ಚಂದ್ ಅವರ ನಾಯಕತ್ವದಲ್ಲಿ ಭಾರತವು 2012ರಲ್ಲಿ ಆಸ್ಟ್ರೇಲಿಯಾದಲ್ಲಿ ICC U-19 ವಿಶ್ವಕಪ್ ಗೆದ್ದಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ಯುವ ಕ್ರಿಕೆಟಿಗ ದೇಶದ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಹೊಂದಿದ್ದು, ಇದರಿಂದಾಗಿ ಅವರು ವಿದೇಶಿ ಲೀಗ್‌ಗಳನ್ನು ಆಡಲು ಅರ್ಹರಾಗಿದ್ದಾರೆ. ಅಂಡರ್-19 ವಿಶ್ವಕಪ್ ಯಶಸ್ಸಿನ ನಂತರ, ಚಂದ್ ಭಾರತ ಎ ತಂಡ ಮುನ್ನಡೆಸಿದರು. ಆದರೆ ಇವರಿಗೆ ಟೀಮ್ ಇಂಡಿಯಾಗೆ ಆಡುವ ಅವಕಾಶ ಮಾತ್ರ ಒಲಿದು ಬರಲಿಲ್ಲ.
ಇದೀಗ ಬಂದಿರುವ ವರದಿಯಂತೆ ಆ್ಯರನ್ ಫಿಂಚ್ ಜೊತೆ ಬ್ಯಾಟ್ ಮಾಡುತ್ತಿರುವ ಚಂದ್, 6 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.