ಬಾಸ್ಸೆಟೆರೆ (ಸೇಂಟ್ ಕಿಟ್ಸ್ ಮತ್ತು ನೆವಿಸ್): ಸೋಮವಾರ ಇಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆತಿಥೇಯ ವೆಸ್ಟ್ ಇಂಡೀಸ್ ಏಳು ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಸ್ಕಾಟ್ಲೆಂಡ್ ಅನ್ನು ಬ್ಯಾಟಿಂಗ್ಗೆ ಇಳಿಸಿತು. ಆರಂಭದಿಂದಲೇ ಸ್ಕಾಟ್ಲೆಂಡ್ ತಂಡ ವೆಸ್ಟ್ ಇಂಡೀಸ್ ಬೌಲರ್ಗಳ ದಾಳಿಗೆ ತುತ್ತಾಗುತ್ತಲೇ ಬಂತು. 35.1 ಓವರ್ಗಳಿಗೆ ಸ್ಕಾಟ್ಲೆಂಡ್ ತಂಡ ತನ್ನ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡು ಕೇವಲ 95 ರನ್ಗಳನ್ನು ಕಲೆ ಹಾಕಿತು.
ಓದಿ: ಚೀನಾದಲ್ಲಿ ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ: 2021ರಲ್ಲಿ ಹುಟ್ಟಿದ್ದು ಕೇವಲ 4.80 ಲಕ್ಷ ಮಂದಿ!
ವೇಗಿ ಶಿವ ಶಂಕರ್ 17 ರನ್ಗಳನ್ನು ನೀಡಿ ಮೂರು ವಿಕೆಟ್ ಪಡೆದರು ಮತ್ತು ಒನಾಜೆ ಅಮೋರಿ ಮತ್ತು ಆಂಡರ್ಸನ್ ಮಹಾಸೆ ತಲಾ ಎರಡು ವಿಕೆಟ್ಗಳನ್ನು ಪಡೆದು ಮಿಂಚಿದರೆ, ಮೆಕೆನ್ನಿ ಕ್ಲಾರ್ಕ್ ಮತ್ತು ಮ್ಯಾಥ್ಯೂ ನಂದು ತಲಾ ಒಂದೊಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು. ಸ್ಕಾಟ್ಲೆಂಡ್ ಪರ ಆರಂಭಿಕ ಆಟಗಾರ ಒಲಿವರ್ ಡೇವಿಡ್ಸನ್ 43 ರನ್ ಗಳಿಸಿದರು. ಉಳಿದ ಬ್ಯಾಟ್ಸ್ಮನ್ಗಳು ಹೆಚ್ಚು ರನ್ಗಳನ್ನು ಕಲೆ ಹಾಕದೇ ಪೆವಿಲಿಯನ್ ಹಾದಿ ಹಿಡಿದರು.
ಸ್ಕಾಟ್ಲೆಂಡ್ ನೀಡಿದ ಅಲ್ಪ ಮೊತ್ತವನ್ನು ಬೆನ್ನತ್ತಿದ್ದ ವೆಸ್ಟ್ ಇಂಡೀಸ್ U19 ತಂಡ 19.4 ಓವರ್‌ಗಳಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು 96 ರನ್ಗಳನ್ನು ಕಲೆ ಹಾಕುವ ಮೂಲಕ ಗುರಿಯನ್ನು ತಲುಪಿತು. ಆರಂಭಿಕ ಆಟಗಾರ ಶಾಕೆರೆ ಪ್ಯಾರಿಸ್ 26 ರನ್‌ಗಳಿಸಿ ಮಿಂಚಿದ್ರೆ, ಟೆಡ್ಡಿ ಬಿಷಪ್ ಅಜೇಯ 23 ರನ್ಗಳನ್ನು ತಂಡಕ್ಕೆ ಕೊಡುಗೆ ನೀಡಿದರು. ಒಟ್ಟಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ ಭರ್ಜರಿ ಜಯ ಸಾಧಿಸಿತು.
ವೆಸ್ಟ್ ಇಂಡೀಸ್ U19 ಜನವರಿ 21 ರಂದು ತನ್ನ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ U19 ತಂಡವನ್ನು ಎದುರಿಸಲಿದೆ.