ETV Bharat / sports

ಈ ಅನ್​ಕ್ಯಾಪ್ಡ್​ ಆಟಗಾರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದಲ್ಲಿರಲು ಅರ್ಹ: ಹರ್ಭಜನ್​ ಸಿಂಗ್ - ಇಂಡಿಯನ್ ಪ್ರೀಮಿಯರ್ ಲೀಗ್

ಉಮ್ರಾನ್​ ಮಲಿಕ್ ಈ ಬಾರಿಯ ಐಪಿಎಲ್​ನಲ್ಲಿ ತಮ್ಮ ಮಾರಕ ವೇಗದ ಬೌಲಿಂಗ್​​ನಿಂದ ಗಮನ ಸೆಳೆದಿದ್ದಾರೆ. ಜೊತೆಗೆ ನಿನ್ನೆ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 20ನೇ ಓವರ್ ಅನ್ನು ಮೇಡನ್ ಮಾಡುವ​ ಜೊತೆಗೆ 4 ವಿಕೆಟ್​ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

Umran Malik 20 world cup Indian Team
ಹರ್ಭಜನ್ ಸಿಂಗ್ ಉಮ್ರಾನ್ ಮಲಿಕ್
author img

By

Published : Apr 18, 2022, 6:26 PM IST

ಮುಂಬೈ: ಇಂಡಿಯನ್ ಪ್ರೀಮಿಯರ್​ ಲೀಗ್​ ಪ್ರದರ್ಶನ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ಮಾನದಂಡವಲ್ಲ. ಹಾಗಿದ್ದರೂ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​ ತಿಂಗಳಲ್ಲಿ ಜರುಗಲಿರುವ ಟಿ20 ವಿಶ್ವಕಪ್​ಗೆ ಅತ್ಯುತ್ತಮ ತಂಡ ಸಂಯೋಜನೆಯನ್ನು ಸಿದ್ಧಪಡಿಸುವ ಉದ್ದೇಶದಿಂದ ಆಯ್ಕೆ ಸಮಿತಿ ಪ್ರಸ್ತುತ ಐಪಿಎಲ್ ಕಡೆಗೆ ಗಮನ ನೀಡುತ್ತಿದೆ.

ಹಾಗಾಗಿ, ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವ ಕನಸಿನಲ್ಲಿರುವ ಅನುಭವಿ ಆಟಗಾರರಿಗೆ ಮಾತ್ರವಲ್ಲ, ಕೆಲವು ಹೊಸ ಯುವ ಆಟಗಾರರಿಗೂ ಈ ಐಪಿಎಲ್​ ವಿಶ್ವಕಪ್ ಆಯ್ಕೆಯ ಸ್ಪರ್ಧೆಗೆ ಪ್ರವೇಶಿಸುವ ಅವಕಾಶವನ್ನು ನೀಡಿದೆ. ಮಾಜಿ ಸ್ಪಿನ್ನರ್ ಹರ್ಭಜನ್​ ಸಿಂಗ್​ ಸನ್​ರೈಸರ್ಸ್​ನಲ್ಲಿರುವ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡದಿರುವ ಯುವ ವೇಗಿ ಉಮ್ರಾನ್ ಮಲಿಕ್​ ಪರ ಬ್ಯಾಟಿಂಗ್ ಮಾಡಿದ್ದಾರೆ.

ಉಮ್ರಾನ್​ ಮಲಿಕ್ ಈ ಬಾರಿಯ ಐಪಿಎಲ್​ನಲ್ಲಿ ತಮ್ಮ ಮಾರಕ ವೇಗದ ಬೌಲಿಂಗ್​​ನಿಂದ ಗಮನ ಸೆಳೆದಿದ್ದಾರೆ. ಜೊತೆಗೆ, ನಿನ್ನೆ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 20ನೇ ಓವರ್​ನಲ್ಲಿ ಒಂದೂ ರನ್ ಬಿಟ್ಟುಕೊಡದೆ ಮೇಡನ್​ ಜೊತೆಗೆ 4 ವಿಕೆಟ್​ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಪಂಜಾಬ್ ಇನ್ನಿಂಗ್ಸ್ ನಂತರ ಸ್ಟಾರ್ ಸ್ಪೋರ್ಟ್ಸ್​ ವಿಶ್ಲೇಷಣೆಯಲ್ಲಿ ಮಾತನಾಡಿದ ಹರ್ಭಜನ್ ಸಿಂಗ್ , ಉಮ್ರಾನ್ ಆದಷ್ಟು ಬೇಗ ಭಾರತೀಯ ಜರ್ಸಿ ತೊಡುವಂತಾಗಬೇಕು. ಆತ ಮುಂಬರುವ ಟಿ20 ವಿಶ್ವಕಪ್​​ ತಂಡಕ್ಕೆ ಅತ್ಯಂತ ಹೆಚ್ಚು ಅರ್ಹನಾದ ಅಭ್ಯರ್ಥಿ ಎಂದು ಅಭಿಪ್ರಾಯಪಟ್ಟಿದ್ದಾರೆ.

"ನೀಲಿ ಜರ್ಸಿ ಮಾತ್ರ ಮಿಸ್​ ಆಗಿದೆ ಮತ್ತು ಅವರು ಅದನ್ನು ಬೇಗ ಪಡೆದುಕೊಳ್ಳಬೇಕು. ಆತ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಭಾರತ ತಂಡದ ಪರ ಆಡುವುದಕ್ಕೆ ಹೆಚ್ಚು ಅರ್ಹನಾಗಿರುವ ಆಟಗಾರ ಎಂದು ನಾನು ಭಾವಿಸುತ್ತೇನೆ. ಅವರು ಅಲ್ಲಿ ನಿಮ್ಮ ಮ್ಯಾಚ್​ ವಿನ್ನರ್ ಆಗಬಹುದು" ಎಂದು ಹೇಳಿದ್ದಾರೆ.

ಉಮ್ರಾನ್ ಒಂದೆರಡು ಪಂದ್ಯಗಳಲ್ಲಿ ಧಾರಾಳವಾಗಿ ರನ್​ ಬಿಟ್ಟುಕೊಟ್ಟರಾದರೂ ಕಳೆದ 2 ಪಂದ್ಯಗಳಲ್ಲಿ ಅತ್ಯುತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಅವರು ಆಡಿರುವ 6 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ:ಪುರುಷರ ಜರ್ಸಿಗೆ ಮರುಹೊಲಿಗೆ, ಸಮೋಸವೇ ಬ್ರೇಕ್‌ಫಾಸ್ಟ್! ಮಹಿಳಾ ಕ್ರಿಕೆಟಿಗರ ಯಾತನೆ ವಿವರಿಸಿದ ವಿನೋದ್‌ ರಾಯ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.