ETV Bharat / sports

ಹೈದರಾಬಾದ್ ಗೆಲುವಿನ ನಾಗಾಲೋಟ ತಡೆಯುವುದೇ ಆರ್​ಸಿಬಿ?

author img

By

Published : Apr 23, 2022, 3:41 PM IST

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 7 ಪಂದ್ಯಗಳಿಂದ 10 ಅಂಕ ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ, ಸನ್​ರೈಸರ್ಸ್​ ಹೈದರಾಬಾದ್​ ತಂಡ 6 ಪಂದ್ಯಗಳಿಂದ 8 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಆರ್​ಸಿಬಿ ಮೊದಲ ಪಂದ್ಯದಲ್ಲಿ ಸೋಲು ಕಂಡು ನಂತರ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. ಸಿಎಸ್​ಕೆ ವಿರುದ್ಧ ರೋಚಕ ಸೋಲು ಕಂಡ ಬೆಂಗಳೂರು ನಂತರ ಮತ್ತೆ ಸತತ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

Royal Challengers Bangalore vs Sunrisers Hyderabad

ಮುಂಬೈ: ಶನಿವಾರ ಸಂಜೆ ಮತ್ತೊಂದು ಹೈವೋಲ್ಟೇಜ್ ಕದನದಲ್ಲಿ ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಮುಖಾಮುಖಿಯಾಗುತ್ತಿವೆ. ಇಬ್ಬರು ಶಾಂತಸ್ವಭಾವದ ನಾಯಕರಾದ ಫಾಫ್ ಡು ಪ್ಲೆಸಿಸ್​ ಮತ್ತು ಕೇನ್ ವಿಲಿಯಮ್ಸನ್​ ತಂಡಗಳನ್ನು ಮುನ್ನಡೆಸುತ್ತಿದ್ದು, ಇತ್ತಂಡಗಳು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಪ್ಲೇ ಆಫ್​ ರೇಸ್​​ನಲ್ಲಿವೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 7 ಪಂದ್ಯಗಳಿಂದ 10 ಅಂಕ ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ, ಸನ್​ರೈಸರ್ಸ್​ ಹೈದರಾಬಾದ್​ 6 ಪಂದ್ಯಗಳಿಂದ 8 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಆರ್​ಸಿಬಿ ಮೊದಲ ಪಂದ್ಯ ಸೋಲು ಕಂಡು ನಂತರ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. ಸಿಎಸ್​ಕೆ ವಿರುದ್ಧ ರೋಚಕ ಸೋಲು ಕಂಡ ಬೆಂಗಳೂರು ನಂತರ ಮತ್ತೆ ಸತತ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಇತ್ತ ಸತತ 2 ಸೋಲು ಕಂಡಿದ್ದ ಹೈದರಾಬಾದ್​ ತಂಡ ನಂತರ ಸಂಘಟಿತ ಪ್ರದರ್ಶನ ತೋರಿ ಸತತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಾಯಕ ಕೇನ್ ವಿಲಿಯಮ್ಸನ್​, ಅಭಿಷೇಕ್ ಶರ್ಮಾ, ತ್ರಿಪಾಠಿ ಮತ್ತು ಮಾರ್ಕ್ರಮ್​ ಉತ್ತಮ ಲಯದಲ್ಲಿದ್ದಾರೆ. ಪೂರನ್ ತಮ್ಮ ಫಿನಿಶಿಂಗ್ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಎಸ್​ಆರ್​ಹೆಚ್​ ಎಲ್ಲಾ ಪಂದ್ಯಗಳಲ್ಲಿ ಟಾಸ್​ ಗೆದ್ದು ಯಶಸ್ವಿಯಾಗಿ ಚೇಸ್​ ಮಾಡಿರುವ 4 ಪಂದ್ಯಗಳಲ್ಲಿ ಗರಿಷ್ಠ ಎಂದರೆ ಕೇವಲ 3 ವಿಕೆಟ್​ ಮಾತ್ರ ಕಳೆದುಕೊಂಡಿದೆ. ಹಾಗಾಗಿ ಟೂರ್ನಿಯಲ್ಲಿ ಅತ್ಯಂತ ಸ್ಥಿರತೆ ಹೊಂದಿರುವ ಬ್ಯಾಟಿಂಗ್ ಬಳಗವಾಗಿ ಗುರುತಿಸಿಕೊಂಡಿದೆ.

ನಟರಾಜನ್​, ಭುವನೇಶ್ವರ್ ಜೊತೆಗೆ ಯುವ ಬೌಲರ್​ಗಳಾದ ಮಾರ್ಕೊ ಜಾನ್ಸನ್​ ಮತ್ತು ಉಮ್ರಾನ್ ಮಲಿಕ್ ವೇಗದ ಬೌಲಿಂಗ್​​ನಲ್ಲಿ ತಂಡದ ಬಲವಾಗಿದ್ದಾರೆ. ಸುಂದರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಕನ್ನಡಿಗ ಜೆ. ಸುಚಿತ್ ಕೇವಲ 28 ರನ್​ ನೀಡಿ 1 ವಿಕೆಟ್​ ಪಡೆದಿದ್ದರು. ಸಂಪೂರ್ಣ ತಂಡವಾಗಿ ಉತ್ತಮ ಪ್ರದರ್ಶನ ತೋರುತ್ತಿರುವ ಹೈದರಾಬಾದ್​ ಬೆಂಗಳೂರು ತಂಡಕ್ಕೆ ಎಲ್ಲಾ ರೀತಿಯಲ್ಲೂ ಸವಾಲಾಗಲಿದೆ.

ಆರ್​ಸಿಬಿ ಪಂದ್ಯಗಳನ್ನು ಗೆಲ್ಲುತ್ತಿದೆಯಾದರೂ ಯಾವುದೇ ವಿಭಾಗದಲ್ಲಿ ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಆಡಿರುವ 7 ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಆರಂಭಿಕರಿಂದ ಉತ್ತಮ ಜೊತೆಯಾಟ ಬಂದಿದೆ. ಯುವ ಬ್ಯಾಟರ್ ಅನುಜ್ ರಾವತ್​ ಮತ್ತು ಕೊಹ್ಲಿ ದಯನೀಯ ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ತಲೆನೋವಾಗಿದೆ.

ಸಕಾರಾತ್ಮಕ ಅಂಶವೆಂದರೆ, ನಿರ್ಣಾಯಕ ಹಂತದಲ್ಲಿ ಡುಪ್ಲೆಸಿಸ್​, ಮ್ಯಾಕ್ಸ್​ವೆಲ್​, ಶಹಬಾಜ್ ಮತ್ತು ದಿನೇಶ್​ ಕಾರ್ತಿಕ್​ರಲ್ಲಿ ತಂಡಕ್ಕೆ ನೆರವಾಗಿ ಗೆಲುವು ತಂದುಕೊಡುತ್ತಿದ್ದಾರೆ. ಕೊಹ್ಲಿ ಈ ಪಂದ್ಯದಲ್ಲಿ ಫಾರ್ಮ್​ಗೆ ಬಂದರೆ ತಂಡದ ಬ್ಯಾಟಿಂಗ್​ ವಿಭಾಗಕ್ಕೆ ಆನೆಬಲ ಬಂದಂತಾಗಲಿದೆ.

ಬೌಲಿಂಗ್​ನಲ್ಲಿ ಜಾಶ್ ಹೇಜಲ್​ವುಡ್​ ತಂಡಕ್ಕೆ ಬಂದ ಬಳಿಕ ಅತ್ಯುತ್ತಮವಾಗಿ ಕಾಣುತ್ತಿದೆ. ಕಳೆದ ಪಂದ್ಯದಲ್ಲಿ ಸಿರಾಜ್​ ಉತ್ತಮ ಪ್ರದರ್ಶನ ತೋರಿದ್ದಾರೆ. ಆದರೆ ಕಳೆದ ವರ್ಷದ ಹೀರೋ ಹರ್ಷಲ್ ಪಟೇಲ್ ಮಾತ್ರ ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಕಳೆದ ಆವೃತ್ತಿಯಂತೆ ಡೆತ್​ ಓವರ್​ಗಳಲ್ಲಿ ವಿಕೆಟ್​ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಆದರೆ ಇಡೀ ತಂಡವಾಗಿ ಆರ್​ಸಿಬಿ ಬೌಲಿಂಗ್ ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ತಂಡಕ್ಕೆ ವೈಯಕ್ತಿಕ ವೈಫಲ್ಯಗಳು ಕಾಣಿಸುತ್ತಿಲ್ಲ. ಆದರೆ ಹೈದರಾಬಾದ್​ ತಂಡಕ್ಕೆ ಸ್ಪರ್ಧೆಯೊಡ್ಡಲು ಇಡೀ ತಂಡವಾಗಿ ಪ್ರದರ್ಶನ ತೋರುವ ಅಗತ್ಯವಿದೆ.

ಎರಡು ತಂಡಗಳು ಒಟ್ಟು 19 ಬಾರಿ ಮುಖಾಮುಖಿಯಾಗಿದ್ದು, ಹೈದರಾಬಾದ್​ 11-8ರಿಂದ ಮುನ್ನಡೆ ಪಡೆದುಕೊಂಡಿದೆ. ಕಳೆದ 5 ಪಂದ್ಯಗಳಲ್ಲಿ 4 ರಲ್ಲಿ ಆರ್​ಸಿಬಿ ಸೋಲು ಕಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಅನುಜ್ ರಾವತ್, ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್(ವಿಕೀ), ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

ಸನ್​ರೈಸರ್ಸ್ ಹೈದರಾಬಾದ್​: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್(ವಿಕೀ), ಶಶಾಂಕ್ ಸಿಂಗ್, ಜೆ.ಸುಚಿತ್ / ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ.ನಟರಾಜನ್.

ಇದನ್ನೂ ಓದಿ:ಡೆಲ್ಲಿ ವಿರುದ್ಧ ಗೆದ್ದ ರಾಜಸ್ಥಾನ... ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ ಸ್ಯಾಮ್ಸನ್​ ಬಳಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.