ಅಂಪೈರಿಂಗ್ ಕೆಲಸ ಅಷ್ಟೊಂದು ಸುಲಭವಲ್ಲ. ಇದೊಂದು ಸವಾಲಿನ ಕೆಲಸ. ಥಟ್ ಅಂಥ ಸೆಕೆಂಡುಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕ್ರಿಕೆಟ್ನಲ್ಲಿ ವೈಡ್, ಔಟ್ ಹೀಗೆ ಯಾವುದೇ ನಿರ್ಧಾರ ನಿಖರವಾಗಿರಬೇಕು. ಇಲ್ಲದಿದ್ದರೆ ಪಂದ್ಯದ ಸ್ವರೂಪವೇ ಬದಲಾಗಬಹುದು. ಕೆಲವೊಮ್ಮೆ ಕೆಲ ಅಂಪೈರ್ಗಳು ತಾವು ಕೊಟ್ಟ ತೀರ್ಪಿನ ವಿಭಿನ್ನ ಶೈಲಿಯಿಂದಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಇಲ್ಲೊಬ್ಬ ಅಂಪೈರ್ ವೈಡ್ ಸಿಗ್ನಲ್ ನೀಡಿರುವ ಸ್ಟೈಲ್ ಅನ್ನು ನೀವು ಹಿಂದೆಂದೂ ನೋಡಿರಲು ಸಾಧ್ಯವಿಲ್ಲ.
-
A different style of umpiring #Cricket pic.twitter.com/PZdbB2SUIY
— Saj Sadiq (@SajSadiqCricket) December 5, 2021 " class="align-text-top noRightClick twitterSection" data="
">A different style of umpiring #Cricket pic.twitter.com/PZdbB2SUIY
— Saj Sadiq (@SajSadiqCricket) December 5, 2021A different style of umpiring #Cricket pic.twitter.com/PZdbB2SUIY
— Saj Sadiq (@SajSadiqCricket) December 5, 2021
ವೈಡ್ ಅನ್ನು ಸಾಮಾನ್ಯವಾಗಿ ಎರಡೂ ಕೈಗಳನ್ನು ಅಗಲ ಮಾಡಿ ಚಾಚಿ ಅಂಪೈರ್ ತೋರಿಸುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಟೂರ್ನಿಯಾದ ಟಿ20 ಪುರಂದರ್ ಪ್ರೀಮಿಯರ್ ಲೀಗ್‌ನಲ್ಲಿ ಅಂಪೈರ್ ಒಬ್ಬರು ತಲೆ ಕೆಳಗೆ ಮಾಡಿ, ಎರಡೂ ಕಾಲುಗಳನ್ನು ಅಗಲವಾಗಿ ಚಾಚಿ ವೈಡ್ ಸಿಗ್ನಲ್ ನೀಡಿದ್ದಾರೆ.
ಇದನ್ನೂ ಓದಿ: Mumbai Test: ಕಿವೀಸ್ ವಿರುದ್ಧ ಟೆಸ್ಟ್ ಗೆದ್ದ ಭಾರತ; 372 ರನ್‌ಗಳಿಂದ ಜಯಭೇರಿ
ಅಂಪೈರ್ ತೀರ್ಪಿನ ಈ ತಮಾಷೆಯ ಹಾಗೂ ನೂತನ ಶೈಲಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.