ETV Bharat / sports

2024ರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಉಗಾಂಡ: ಜಿಂಬಾಬ್ವೆ ಔಟ್​ - ಟಿ20 ವಿಶ್ವಕಪ್

ಮುಂಬರುವ ಟಿ-20 ವಿಶ್ವಕಪ್​​ಗೆ ಉಗಾಂಡ ತಂಡ ಅರ್ಹತೆ ಪಡೆದಿದೆ.

ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಉಗಾಂಡಾ
ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಉಗಾಂಡಾ
author img

By ETV Bharat Karnataka Team

Published : Nov 30, 2023, 7:45 PM IST

ನವದೆಹಲಿ: ಮುಂದಿನ ವರ್ಷ​ ನಡೆಯಲಿರುವ ಐಸಿಸಿ (ICC) ಟಿ-20 ವಿಶ್ವಕಪ್ (World Cup)​ಗೆ ಚೊಚ್ಚಲ ಬಾರಿಗೆ ಉಗಾಂಡ ತಂಡ ಅರ್ಹತೆ ಪಡೆದಿದೆ. ವಿಶ್ವಕಪ್​ ಅರ್ಹತ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಉಗಾಂಡ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆಲುವು ದಾಖಲಿಸಿದೆ. ಇಂದು ನಡೆದ ಕ್ವಾಲಿಫೈಯರ್ ಹಂತದ ಕೊನೆಯ ಸುತ್ತಿನ ಪಂದ್ಯದಲ್ಲಿ ರುವಾಂಡಾವನ್ನು ಸೋಲಿಸುವ ಮೂಲಕ ಉಗಾಂಡ ವಿಶ್ವಕಪ್​ಗೆ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.

ಮತ್ತೊಂದೆಡೆ ಜಿಂಬಾಬ್ವೆ ಅರ್ಹತಾ ಸುತ್ತಿನಲ್ಲಿ ನಮೀಬಿಯಾ ಮತ್ತು ಉಗಾಂಡ ವಿರುದ್ಧ ಸೋಲನ್ನು ಎದುರಿಸಿ ವಿಶ್ವಕಪ್​ ರೇಸ್​ನಿಂದ ಹೊರ ಬಿದ್ದಿದೆ​. ಕಳೆದ T20 ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದ ಜಿಂಬಾಬ್ವೆ ಪಾಕಿಸ್ತಾನವನ್ನು ಬಗ್ಗು ಬಡೆದಿತ್ತು. ಇದಕ್ಕೂ ಮುನ್ನಾ ಜಿಂಬಾಬ್ವೆ ತಂಡ ತವರಿನಲ್ಲಿ ನಡೆದ 2019 ಮತ್ತು 2023 ODI ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಸೋಲನ್ನು ಕಂಡು ಹೊರ ಬಿದ್ದಿತ್ತು. ಉಳಿದಂತೆ 2021ರ T-20 ವಿಶ್ವಕಪ್‌ನಲ್ಲಿ ತಂಡ ಅರ್ಹತ ಪಂದ್ಯಗಳನ್ನು ಆಡಲು ಆಗಿರಲಿಲ್ಲ. ಆ ಸಮಯದಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ICC ಅಮಾನತುಗೊಳಿಸಿತ್ತು.

ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಜಿಂಬಾಬ್ವೆ ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಏಳು ವಿಕೆಟ್‌ಗಳಿಂದ ಸೋಲು ಕಂಡು ಕಳಪೆ ಆರಂಭ ಪಡೆಯಿತು. ಅಂಕಪಟ್ಟಿಯ ಅಗ್ರ ಎರಡು ಸ್ಥಾನ ತಲುಪಲು ಜಿಂಬಾಬ್ವೆ ತನ್ನು ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಿತ್ತು. ಆದರೆ ಅದು ಸಾಧ್ಯವಾಗದೇ ಇದೀಗ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ.

ಮೂರು ಆಫ್ರಿಕನ್​ ತಂಡಗಳು: ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಫ್ರಿಕಾದ ಮೂರು ತಂಡಗಳಾದ ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಉಗಾಂಡ ಭಾಗವಹಿಸಲಿವೆ. ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಉಗಾಂಡ ಅರ್ಹತೆ ಪಡೆದಿದೆ.

ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಲಿರುವ ತಂಡಗಳು: ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್​ಗೆ, ವೆಸ್ಟ್ ಇಂಡೀಸ್, ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಪಪುವಾ ನ್ಯೂಜಿನಿಯಾ, ಕೆನಡಾ, ನೇಪಾಳ, ಓಮನ್, ನಮೀಬಿಯಾ, ಉಗಾಂಡ ತಂಡಗಳು ಭಾಗವಹಿಸಲಿವೆ.

ನೇರ ಪ್ರವೇಶ ಪಡೆದ ತಂಡಗಳು: ಭಾರತ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಅಮೆರಿಕ

ಇದನ್ನೂ ಓದಿ: ಸ್ಮಿತ್​ ಜೊತೆ ಬಾಬರ್​ ಹೋಲಿಸುವುದು ಕೊಹ್ಲಿ ಜೊತೆಗೆ ಸ್ಮಿತ್​ ಹೋಲಿಸಿದಂತೆ: ಉಸ್ಮಾನ್ ಖವಾಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.