ಆಂಟಿಗುವಾ: ನಾಯಕ ಯಶ್ ಧುಲ್ ಶತಕ ಮತ್ತು ಉಪನಾಯಕ ಶೈಕ್ ಅವರ 94 ರನ್ಗಳ ನೆರವಿನಿಂದ ಭಾರತ ತಂಡ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 291 ರನ್ಗಳ ಬೃಹತ್ ಗುರಿ ನೀಡಿದೆ.
ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ಒದಗಿಸಿಕೊಡುವಲ್ಲಿ ಆರಂಭಿಕರು ವಿಫಲರಾದರು. ಟೂರ್ನಿಯಲ್ಲಿ ಭಾರತದ ಟಾಪ್ ಬ್ಯಾಟರ್ ಆಗಿದ್ದ ರಘುವಂಶಿ ಇಂದು 30 ಎಸೆತಗಳನ್ನೆದುರಿಸಿ ಕೇವಲ 6 ರನ್ಗಳಿಸಿದರೆ, ಹರ್ನೂರ್ ಸಿಂಗ್ 28 ಎಸೆತಗಳಲ್ಲಿ 3 ಬೌಂಡರಿ ಸಹಿತ 16 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ದ್ವಿಶತಕದ ಜೊತೆಯಾಟ:
ಭಾರತಕ್ಕೆ ಒಂದು ಹಂತದಲ್ಲಿ 12.3 ಓವರ್ಗಳಲ್ಲಿ 37 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾಗಿತ್ತು. ಆದರೆ 3ನೇ ವಿಕೆಟ್ಗೆ ಒಂದಾದ ನಾಯಕ ಯಶ್ ಧುಲ್ ಮತ್ತು ಉಪನಾಯಕ ರಶೀದ್ ನಿಧಾನಗತಿ ಆಟಕ್ಕೆ ಮೊರೆ ಹೋಗಿ ವಿಕೆಟ್ ಉಳಿಸಿಕೊಂಡರು. 30 ಓವರ್ಗಳ ಹೊರೆಗೂ ಒಂದೊಂದೆ ರನ್ಗಾಗಿ ಆಡುತ್ತಿದ್ದ ಈ ಜೋಡಿ ನಂತರ ಬೌಂಡರಿಗಳ ಮೂಲಕ ರನ್ಗತಿಯನ್ನು ಹೆಚ್ಚಿಸಿದರು.
-
Innings Break!
— BCCI (@BCCI) February 2, 2022 " class="align-text-top noRightClick twitterSection" data="
Scintillating knocks from captain Yash Dhull (1⃣1⃣0⃣) & vice-captain SK Rasheed (9⃣4⃣) power India U19 to 2⃣9⃣0⃣/5⃣ against Australia U19 in the #U19CWC semifinal. 👏 👏 #BoysInBlue #INDvAUS
Over to our bowlers now. 👍 👍
Scorecard ➡️ https://t.co/tpXk8p6Uw6 pic.twitter.com/upFL8ufdUl
">Innings Break!
— BCCI (@BCCI) February 2, 2022

Scorecard ➡️ https://t.co/tpXk8p6Uw6 pic.twitter.com/upFL8ufdUlInnings Break!
— BCCI (@BCCI) February 2, 2022
Scintillating knocks from captain Yash Dhull (1⃣1⃣0⃣) & vice-captain SK Rasheed (9⃣4⃣) power India U19 to 2⃣9⃣0⃣/5⃣ against Australia U19 in the #U19CWC semifinal. 👏 👏 #BoysInBlue #INDvAUS
Over to our bowlers now. 👍 👍
Scorecard ➡️ https://t.co/tpXk8p6Uw6 pic.twitter.com/upFL8ufdUl
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಯುಶ್ ಧುಲ್ ತಾವೆದುರಿಸಿದ 106ನೇ ಎಸೆತದಲ್ಲಿ ಶತಕ ಪೂರ್ಣಗೊಳಿಸಿದರು. ಆದರೆ 46ನೇ ಓವರ್ನ ದುರಾದೃಷ್ಟಕರ ರನ್ಔಟ್ ಆಗಿ ಬೇಸರದಿಂದ ನಿರ್ಗಮಿಸಿದರು. ರಶೀದ್ ಸ್ಟ್ರೈಟ್ ಡ್ರೈವ್ ಮಾಡಿದಾಗ ಬೌಲರ್ ಬೆರಳನ್ನು ತಾಕಿದ ಚೆಂಡು ನೇರವಾಗಿ ಸ್ಟಂಪ್ಗೆ ಅಪ್ಪಳಿಸಿತ್ತು. ಅಷ್ಟರಲ್ಲಾಗಲೇ ಕ್ರೀಸ್ ಬಿಟ್ಟಿದ್ದ ಯಶ್ ರನ್ಔಟ್ ಆಗಬೇಕಾಯಿತು. ಅವರು 110 ಎಸೆತಗಳಲ್ಲಿ 10 ಬೌಂಡರಿ ಒಂದು ಸಿಕ್ಸರ್ ಸಹಿತ 110 ರನ್ಗಳಿಸಿದ್ದರು. ಯಶ್ ಔಟಾದ ನಂತರದ ಎಸೆತದಲ್ಲೇ ರಶೀದ್ ಕೂಡ ಕ್ಯಾಚ್ ಔಟ್ ಆದರು. ಅವರು 108 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 94 ರನ್ಗಳಿಸಿ 6 ರನ್ಗಳಿಂದ ಶತಕವಂಚಿತರಾಗಿ ನಿರಾಶೆಯನುಭವಿಸಿದರು.
ಕೊನೆಯಲ್ಲಿ ಅಬ್ಬರಿಸಿದ ವಿಕೆಟ್ ಕೀಪರ್ ದಿನಾ ಬಾನಾ ಕೇವಲ 4 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 20ರನ್, ನಿಶಾಂತ್ ಸಿಂಧು 10 ಎಸೆತಗಳಲ್ಲಿ 12, ರಾಜವರ್ಧನ್ 10 ಎಸೆತಗಳಲ್ಲಿ 13 ರನ್ಗಳಿಸಿದರು. ಭಾರತ ತಂಡ 50 ಓವರ್ಗಳಲ್ಲಿ 5 ವಿಕೆಟ್ ಕಳೇದುಕೊಂಡು 290 ರನ್ಗಳಿಸಿತು.
ಆಸ್ಟ್ರೇಲಿಯಾ ಪರ ಜ್ಯಾಕ್ ನಿಸ್ಬೆಟ್ 41ಕ್ಕೆ 2, ವಿಲಿಯಮ್ ಸಾಲ್ಜ್ಮನ್ 57ಕ್ಕೆ 2 ವಿಕೆಟ್ ಪಡೆದರು.
ಇದನ್ನೂ ಓದಿ:ಅನುಷ್ಕಾ ಬೆಂಗಳೂರಿನಲ್ಲಿ ನನಗಿಂತ ಹೆಚ್ಚಿನ ಸಮಯ ಕಳೆದಿದ್ದಾರೆ, ಈ ನಗರದ ಜೊತೆ ವಿಶೇಷ ಬಾಂಧವ್ಯವಿದೆ: ವಿರಾಟ್