ಆಂಟಿಗುವಾ: 2ನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್ ತಂಡ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ಮತ್ತು ಬಲಿಷ್ಠ ತಂಡವಾಗಿರುವ ಭಾರತದ ವಿರುದ್ಧ ಫೈನಲ್ನಲ್ಲಿ ಸೆಣಸುತ್ತಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
1998ರಲ್ಲಿ ಅಂಡರ್ 19 ವಿಶ್ವಕಪ್ ಮರಳಿದಾಗ ವಿಶ್ವಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡ ಬರೋಬ್ಬರಿ 24 ವರ್ಷಗಳ ಬಳಿಕ ಫೈನಲ್ ಪ್ರವೇಶ ಮಾಡಿದೆ. ಟೂರ್ನಿಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿ ಫೈನಲ್ಗೆ ಎಂಟ್ರಿಕೊಟ್ಟಿದೆ.
-
📰 Toss news from Sir Vivian Richards Stadium
— ICC (@ICC) February 5, 2022 " class="align-text-top noRightClick twitterSection" data="
🏴 England have opted to bat first against India
Which team are you supporting? Tell us in the comments below 👇#ENGvIND | #U19CWC Final pic.twitter.com/KxSn7HCXxq
">📰 Toss news from Sir Vivian Richards Stadium
— ICC (@ICC) February 5, 2022
🏴 England have opted to bat first against India
Which team are you supporting? Tell us in the comments below 👇#ENGvIND | #U19CWC Final pic.twitter.com/KxSn7HCXxq📰 Toss news from Sir Vivian Richards Stadium
— ICC (@ICC) February 5, 2022
🏴 England have opted to bat first against India
Which team are you supporting? Tell us in the comments below 👇#ENGvIND | #U19CWC Final pic.twitter.com/KxSn7HCXxq
ಇತ್ತ 5ನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ಕಿರಿಯರ ತಂಡ ಕೂಡ ಟೂರ್ನಿಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಆದರೆ ವಿಶ್ವಕಪ್ಗೆ ಸೂಕ್ತ ತರಬೇತಿಯಿಲ್ಲದೆ ಕಾಲಿಟ್ಟಿದ್ದ ಭಾರತ ಕೇವಲ ಒಂದು ಪಂದ್ಯವನ್ನಾಡಿ ನಂತರ ಕೋವಿಡ್ಗೆ ಹೊಡೆತಕ್ಕೂ ಸಿಲುಕಿತು. ಆದರೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಉಳಿದ ತಂಡ
ಎರಡೂ ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು, ಭಾರತ 6 ಮತ್ತು ಇಂಗ್ಲೆಂಡ್ 2ರಲ್ಲಿ ಜಯ ಸಾಧಿಸಿದೆ, ಆದರೆ ಕೊನೆಯ ಮೂರು ವಿಶ್ವಕಪ್ ಮುಖಾಮುಖಿಯಲ್ಲಿ ಇಂಗ್ಲೆಂಡ್ 2ರಲ್ಲಿ ಜಯ ಸಾಧಿಸಿದೆ.
ಭಾರತ U19 ತಂಡ: ಅಂಗ್ಕೃಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಯಶ್ ಧುಲ್(ನಾಯಕ), ರಾಜವರ್ಧನ್ ಹಂಗರ್ಗೇಕರ್, ನಿಶಾಂತ್ ಸಿಂಧು, ದಿನೇಶ್ ಬಾನಾ(ವಿಕೆಟ್ ಕೀಪರ್), ರಾಜ್ ಬಾವಾ, ಕೌಶಲ್ ತಾಂಬೆ, ವಿಕ್ಕಿ ಓಸ್ತ್ವಾಲ್, ರವಿಕುಮಾರ್
ಇಂಗ್ಲೆಂಡ್ U19 ತಂಡ: ಜಾರ್ಜ್ ಥಾಮಸ್, ಜಾಕೋಬ್ ಬೆಥೆಲ್, ಟಾಮ್ ಪ್ರೆಸ್ಟ್(ನಾಯಕ), ಜೇಮ್ಸ್ ರೆವ್, ವಿಲಿಯಂ ಲಕ್ಸ್ಟನ್, ಜಾರ್ಜ್ ಬೆಲ್, ರೆಹಾನ್ ಅಹ್ಮದ್, ಅಲೆಕ್ಸ್ ಹಾರ್ಟನ್(ವಿಕೆಟ್ ಕೀಪರ್), ಜೇಮ್ಸ್ ಸೇಲ್ಸ್, ಥಾಮಸ್ ಆಸ್ಪಿನ್‌ವಾಲ್, ಜೋಶುವಾ ಬೋಡೆನ್