ETV Bharat / sports

U19 ವಿಶ್ವಕಪ್​: ಉಗಾಂಡ ವಿರುದ್ಧ ಭಾರತ ಕಿರಿಯರಿಗೆ ದಾಖಲೆಯ 326 ರನ್​ಗಳ ಜಯ - Angkrish Raghuvanshi century

406 ರನ್​ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಉಗಾಂಡವನ್ನು ಭಾರತೀಯ ಬೌಲರ್​ಗಳು ಕೇವಲ 19.4 ಓವರ್​ಗಳಲ್ಲಿ 70 ರನ್​ಗಳಿಗೆ ಆಲೌಟ್ ಮಾಡುವ ಮೂಲಕ 326 ರನ್​ ದಾಖಲೆಯ ಗೆಲುವಿಗೆ ಕಾರಣರಾದರು.

Team India beat Uganda by 326 runs
Team India beat Uganda by 326 runs
author img

By

Published : Jan 23, 2022, 8:43 AM IST

ಟ್ರಿನಿಡಾಡ್​: ಕಿರಿಯರ ವಿಶ್ವಕಪ್​ನಲ್ಲಿ ಭಾರತೀಯ ಯುವಪಡೆಯ ಅಬ್ಬರ ಮುಂದುವರಿದಿದ್ದು, ಶನಿವಾರ ನಡೆದ ಕ್ರಿಕೆಟ್​ನಲ್ಲಿ ಈಗಷ್ಟೇ ಕಣ್ಣುಬಿಡುತ್ತಿರುವ ಉಗಾಂಡ ವಿರುದ್ಧ ಬರೋಬ್ಬರಿ 326 ರನ್​ಗಳಿಂದ ಜಯ ದಾಖಲಿಸಿ ಅಜೇಯವಾಗಿ ಕ್ವಾರ್ಟರ್​ ಫೈನಲ್​ ತಲುಪಿದೆ.

ಬ್ರಿಯಾನ್ ಲಾರಾ ಸ್ಟ್ರೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಬರೋಬ್ಬರಿ 405 ರನ್​ಗಳನ್ನು ಸೂರೆಗೈದಿತು. ಅಂಗ್​ಕೃಷ್​​​ ರಘುವಂಶಿ ಮತ್ತು ರಾಜ್​ ಭಾವಾ ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿಸಿದರು ಆರಂಭಿಕರಾಗಿ ಕಣಕ್ಕಿಳಿದಿದ್ದ ರಘುವಂಶಿ 120 ಎಸೆತಗಳಲ್ಲಿ 22 ಬೌಂಡರಿ , 4 ಸಿಕ್ಸರ್​ಗಳ ಸಹಿತ 144 ರನ್​ಗಳಿಸಿದರೆ, ಆಲ್​ರೌಂಡರ್​ ರಾಜ್​ ಬಾವಾ 108 ಎಸೆತಗಳಲ್ಲಿ 14 ಬೌಂಡರಿ ಮತ್ತು 8 ಸಿಕ್ಸರ್​ಗಳ ಸಹಿತ 162 ರನ್​ಗಳಿಸಿದರು. ಈ ಮೂಲಕ ಕಿರಿಯರ ವಿಶ್ವಕಪ್​ನಲ್ಲಿ ಗರಿಷ್ಠ ವೈಯಕ್ತಿಕ ರನ್​ ಸಿಡಿಸಿದ ಭಾರತೀಯ ಎನಿಸಿಕೊಂಡರು. 2004ರಲ್ಲಿ ಶಿಖರ್ ಧವನ್​ 155 ರನ್​​ಗಳಿಸಿದ್ದ ಈವರೆಗಿನ ದಾಖಲೆಯಾಗಿತ್ತು.

ಉಳಿದಂತೆ ನಾಯಕ ನಿಶಾಂತ್​​ 15, ದಿನೇಶ್ ಬಾನ 22, ಕನ್ನಡಿಗ ಅನೀಶ್ವರ್ 12, ಹರ್ನೂರ್ ಸಿಂಗ್ 15 ರನ್​ಗಳಿಸಿದರು.

406 ರನ್​ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಉಗಾಂಡವನ್ನು ಭಾರತೀಯ ಬೌಲರ್​ಗಳು ಕೇವಲ 19.4 ಓವರ್​ಗಳಲ್ಲಿ 70 ರನ್​ಗಳಿಗೆ ಆಲೌಟ್ ಮಾಡುವ ಮೂಲಕ 326 ರನ್​ ದಾಖಲೆಯ ಗೆಲುವಿಗೆ ಕಾರಣರಾದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಭಾರತದ ಮಾರಕ ದಾಳಿಗೆ ತತ್ತರಿಸಿದ ಉಗಾಂಡ ಪರ ನಾಯಕ ಪಸ್ಕಾಲ್ ಮುರುಂಗಿ 34 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರೆ, ರೊನಾಲ್ಡ್​ ಒಪಿಯೋ 11ರನ್​ಗಳಿಸಿ ತಂಡದ ಪರ ಎರಡಂಕಿ ದಾಟಿ 2ನೇ ಬ್ಯಾಟರ್​ ಎನಿಸಿಕೊಂಡರು. 6 ಬ್ಯಾಟರ್​ಗಳು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮೂವರು ತಲಾ 5 ರನ್​ಗಳಿಸಿ ಔಟಾದರು.

ಕಿರಿಯರ ವಿಶ್ವಕಪ್​ನಲ್ಲೇ 2ನೇ ಗರಿಷ್ಠ ರನ್​ಗಳ ಅಂತರದ ಜಯ

ಈ ಪಂದ್ಯವನ್ನು 326 ರನ್​ಗಳಿಂದ ಗೆದ್ದ ಭಾರತ ಕಿರಿಯರ ತಂಡ ಕಿರಿಯರ ವಿಶ್ವಕಪ್ ಇತಿಹಾಸದಲ್ಲಿ 2ನೇ ಗರಿಷ್ಠ ರನ್​ಗಳ ಅಂತರದ ಜಯ ದಾಖಲಿಸಿತು. ಇದಕ್ಕೂ ಮುನ್ನ 2002ರಲ್ಲಿ ಆಸ್ಟ್ರೇಲಿಯಾ ಅಂಡರ್​ 19 ತಂಡ ಕೀನ್ಯ ಅಂಡರ್​ 19 ವಿರುದ್ದ 430 ರನ್​ಗಳ ಅಂತರದ ಜಯ ಸಾಧಿಸಿ ವಿಶ್ವದಾಖಲೆ ನಿರ್ಮಿಸಿದೆ. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ 480 ರನ್​ಗಳಿಸಿದರೆ, ಇದಕ್ಕುತ್ತರವಾಗಿ ಕೀನ್ಯಾ ಕೇವಲ 50 ರನ್​ಗಳಿಗೆ ಆಲೌಟ್ ಆಗಿತ್ತು.

ಇದನ್ನೂ ಓದಿ:ಭಾರತ-ವೆಸ್ಟ್ ಇಂಡೀಸ್​ ಕ್ರಿಕೆಟ್​​​ ಸರಣಿಗೆ ಸ್ಥಳ ನಿಗದಿ.. ಅಹ್ಮದಾಬಾದ್​, ಕೋಲ್ಕತ್ತಾದಲ್ಲಿ ಟೂರ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.