ETV Bharat / sports

U-19 ವಿಶ್ವಕಪ್​​: ರಾಜ್ ಬಾವಾ ದಾಖಲೆಯ 162* ರನ್​... ಉಗಾಂಡ ಗೆಲುವಿಗೆ 406ರನ್​ ಗುರಿ - ಉಗಾಂಡಾ ಭಾರತ ವಿಶ್ವಕಪ್ ಪಂದ್ಯ

U-19 World cup: ಕ್ರಿಕೆಟ್ ಶಿಶು ಉಗಾಂಡ ವಿರುದ್ಧ ನಡೆದ ಅಂಡರ್​-19 ವಿಶ್ವಕಪ್ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ದಾಖಲೆಯ ರನ್​​ ಸೇರಿಸಿದ್ದು, ಎದುರಾಳಿ ತಂಡಕ್ಕೆ 406ರನ್​ಗಳ ಬೃಹತ್​​ ಗುರಿ ನೀಡಿದೆ. ​

U-19 World cup
U-19 World cup
author img

By

Published : Jan 22, 2022, 11:02 PM IST

ತರೌಬ(ವೆಸ್ಟ್ ಇಂಡೀಸ್​): ಅಂಡರ್​​-19 ವಿಶ್ವಕಪ್​​ನ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಭಾರತದ ಮರಿ ಟೈಗರ್ಸ್​ ಬ್ಯಾಟಿಂಗ್​​ನಲ್ಲಿ ಆರ್ಭಟಿಸಿದ್ದಾರೆ. ಕ್ರಿಕೆಟ್​​​​​​ ಶಿಶು ಉಗಾಂಡ ವಿರುದ್ಧ ನಡೆದ ಪಂದ್ಯದಲ್ಲಿ ನಿಗದಿತ 50 ಓವರ್​​ಗಳಲ್ಲಿ 5 ವಿಕೆಟ್​ನಷ್ಟಕ್ಕೆ ದಾಖಲೆಯ 405ರನ್​ಗಳಿಕೆ ಮಾಡಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ 40ರನ್​​ಗಳಿಕೆ ಮಾಡುವಷ್ಟರಲ್ಲಿ ಹರ್ನೂರ್ ಸಿಂಗ್(15) ವಿಕೆಟ್ ಕಳೆದುಕೊಂಡಿತು. ಈ ವೇಳೆ ಕಣಕ್ಕಿಳಿದ ಕ್ಯಾಪ್ಟನ್​​​ ನಿಶಾಂತ್​ ಸಿಂಧು ಕೂಡ 15ರನ್​​ಗಳಿಕೆ ಮಾಡಿ ವಿಕೆಟ್​​ ಒಪ್ಪಿಸಿದರು. ಹೀಗಾಗಿ ತಂಡ 85ರನ್​ಗಳಿಕೆ ಮಾಡುವಷ್ಟರಲ್ಲಿ 2 ವಿಕೆಟ್​ ಕಳೆದುಕೊಂಡಿತು. ಈ ವೇಳೆ ಒಂದಾದ ಆರಂಭಿಕ ಆಟಗಾರ ರಘುವಂಶಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್​ ರಾಜ್​ ಬಾವಾ ದಾಖಲೆಯ 200ರನ್​ಗಳ ಜೊತೆಯಾಟವಾಡಿದರು.

U-19 World cup
ದಾಖಲೆಯ ಜೊತೆಯಾಟವಾಡಿದ ರಘುವಂಶಿ- ರಾಜಾ ಬಾವಾ

ಮುರಿಯದ ಈ ಜೋಡಿ ಮೂರನೇ ವಿಕೆಟ್ ಕಳೆದುಕೊಳ್ಳುವಷ್ಟರಲ್ಲಿ 37. 5 ಓವರ್​​​ಗಳಲ್ಲಿ 291ರನ್​​ಗಳಿಕೆ ಮಾಡಿತು. 144ರನ್​ಗಳಿಕೆ ಮಾಡಿದ ವೇಳೆ ರಘುವಂಶಿ ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ಮತ್ತಷ್ಟು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಜಾ ಬಾವಾ ಕೇವಲ 108 ಎಸೆತಗಳಲ್ಲಿ 8 ಸಿಕ್ಸರ್​, 14 ಬೌಂಡರಿ ಸೇರಿದಂತೆ ಅಜೇಯ 162ರನ್​ಗಳಿಕೆ ಮಾಡಿದರು. ಇವರಿಗೆ ಸಾಥ್​​ ನೀಡಿದ ತಾಂಬೆ 15ರನ್​, ದಿನೇಶ್​​ 22 ರನ್​ ಹಾಗೂ ಗೌತಮ್​ ಅಜೇಯ 12ರನ್​ಗಳಿಕೆ ಮಾಡಿದರು.

ತಂಡ ನಿಗದಿತ 50 ಓವರ್​​ಗಳಲ್ಲಿ 5 ವಿಕೆಟ್​ನಷ್ಟಕ್ಕೆ ದಾಖಲೆಯ 405ರನ್​ಗಳಿಕೆ ಮಾಡಿದ್ದು, ಎದುರಾಳಿ ತಂಡದ ಗೆಲುವಿಗೆ 406ರನ್​ಗಳ ಟಾರ್ಗೆಟ್ ನೀಡಿದೆ. ಉಗಾಂಡಾ ಪರ ಕ್ಯಾಪ್ಟನ್​​ ಮುರ್ಗಿನಿ ತಲಾ 3 ವಿಕೆಟ್ ಪಡೆದುಕೊಂಡರೆ, ಕಿಡ್ಗಾ ಹಾಗೂ ಯೂನೂಸ್ ತಲಾ 1 ವಿಕೆಟ್ ಕಿತ್ತರು.

ದಾಖಲೆ ಬರೆದ ರಾಜಾ ಬಾವಾ

ಉಗಾಂಡಾ ವಿರುದ್ಧ ನಡೆದ ಅಂಡರ್​-19 ವಿಶ್ವಕಪ್​​ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ರಾಜಾ ಬಾವಾ ವಿಶೇಷ ದಾಖಲೆ ಬರೆದಿದ್ದಾರೆ. ಪ್ರಸ್ತುತ ವಿಶ್ವಕಪ್​ನಲ್ಲಿ ಅಜೇಯ 162ರನ್​ಗಳಿಕೆ ಮಾಡಿರುವ ಬಾವಾ ವಿಶ್ವಕಪ್ ಇತಿಹಾಸದಲ್ಲೇ ವೇಗವಾಗಿ 150ರನ್​ಗಳಿಕೆ ಮಾಡಿರುವ ಪ್ಲೇಯರ್​ ಎಂಬ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಈ ಹಿಂದೆ 2004ರಲ್ಲಿ ಸ್ಕಾಟ್ಲ್ಯಾಂಡ್ ವಿರುದ್ಧ ಶಿಖರ್ ಧವನ್​ ಸಿಡಿಸಿದ್ದ ಅಜೇಯ 155ರನ್​ಗಳ ದಾಖಲೆ ಬ್ರೇಕ್ ಮಾಡಿದರು.

  • Raj Bawa's 162 today is the highest ever score for India in U19 World Cups breaking 155 by Shikhar Dhawan. The 19 yo all-rounder is from Himachal Pradesh and belongs to a sporting family - his father coached Yuvraj Singh and grandfather won an Olympic gold in Hockey in 1948.

    — Mazher Arshad (@MazherArshad) January 22, 2022 " class="align-text-top noRightClick twitterSection" data=" ">

ಐರ್ಲೆಂಡ್ ವಿರುದ್ಧ 174ರನ್​ಗಳ ಜಯ ದಾಖಲು ಮಾಡಿರುವ ಭಾರತ ಈಗಾಗಲೇ 50 ಓವರ್​ಗಳ ವಿಶ್ವಕಪ್​​ನಲ್ಲಿ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ ಹಾಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.