ದುಬೈ: ಮುಂಬರುವ ವಿಶ್ವಕಪ್ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಂಡರ್ 19 ಏಷ್ಯಾಕಪ್ ಟೂರ್ನಮೆಂಟ್ನಲ್ಲಿ ಭಾರತ ಕಿರಿಯರ ತಂಡ ಶುಭಾರಂಭ ಮಾಡಿದೆ. ಗುರುವಾರ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ 154 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 282 ರನ್ಗಳಿಸಿತ್ತು. ಆರಂಭಿಕ ಬ್ಯಾಟರ್ ಹರ್ನೂರ್ ಸಿಂಗ್ 130 ಎಸೆತಗಳಲ್ಲಿ 11 ಬೌಂಡರಿ ಸಹಿತ 120, ನಾಯಕ ಯಶ್ ಧುಲ್ 68 ಎಸೆತಗಳಲ್ಲಿ 63, ಶೈಕ್ ರಶೀದ್ 35, ರಾಜವರ್ಧನ್ ಹಂಗರ್ಗೆಕರ್ ಕೇವಲ 23 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಅಜೇಯ 48 ರನ್ ಸಿಡಿಸಿದರು.
-
A solid show with the bat 💪
— BCCI (@BCCI) December 23, 2021 " class="align-text-top noRightClick twitterSection" data="
A fine display with the ball 👍
India U19 commence their #U19AsiaCup campaign with a thumping 154-run win over UAE U19. 👏 👏 #INDvUAE
📷:ACC pic.twitter.com/0LyHpPU0tu
">A solid show with the bat 💪
— BCCI (@BCCI) December 23, 2021
A fine display with the ball 👍
India U19 commence their #U19AsiaCup campaign with a thumping 154-run win over UAE U19. 👏 👏 #INDvUAE
📷:ACC pic.twitter.com/0LyHpPU0tuA solid show with the bat 💪
— BCCI (@BCCI) December 23, 2021
A fine display with the ball 👍
India U19 commence their #U19AsiaCup campaign with a thumping 154-run win over UAE U19. 👏 👏 #INDvUAE
📷:ACC pic.twitter.com/0LyHpPU0tu
283 ರನ್ಗಳ ಗುರಿ ಬೆನ್ನಟ್ಟಿದ ಯುಎಇ ಭಾರತದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ 34.3 ಓವರ್ಗಳಲ್ಲಿ 128 ರನ್ಗಳಿಗೆ ಸರ್ವಪತನ ಕಂಡಿತು. ಕಾಯ್ ಸ್ಮಿತ್ 45 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ ಉಳಿದ ಬ್ಯಾಟರ್ಗಳು 20ರ ಗಡಿ ದಾಟುವಲ್ಲಿ ವಿಫಲರಾದರು. ರಾಜವರ್ಧನ್ ಹಂಗರ್ಗೆಕರ್ 24ಕ್ಕೆ 3, ಗರ್ವ್ ಸಂಗ್ವಾನ್ 39ಕ್ಕೆ2, ವಿಕಿ ಒಸ್ತ್ವಲ್ 7ಕ್ಕೆ2, ಕೌಸಾಲ್ ತಾಂಬೆ 16ಕ್ಕೆ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ:IPL 2022: ಐಪಿಎಲ್ಗೆ ಒಮಿಕ್ರಾನ್ ಕರಿನೆರಳು.. ಮುಂದಿನ ಟೂರ್ನಿಯೂ ಬೇರೆಡೆಗೆ ಶಿಫ್ಟ್?