ETV Bharat / sports

ಇಂಗ್ಲೆಂಡ್​ ವಿರುದ್ಧದ ಟೆಸ್ಟ್,​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಸಜ್ಜಾಗಲು ಉತ್ತಮ ವೇದಿಕೆ: ಸೌಥಿ - ಇಂಗ್ಲೆಂಡ್​ ವಿರುದ್ಧದ ಟೆಸ್ಟ್​

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಪಂದ್ಯಗಳು ಭಾರತದ ವಿರುದ್ಧ ನಡೆಯಲಿರುವ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ತಯಾರುಗೊಳ್ಳಲು ಉತ್ತಮ ವೇದಿಕೆ ಎಂದು ಸೌಥಿ ಹೇಳಿಕೊಂಡಿದ್ದಾರೆ.

Southee
Southee
author img

By

Published : May 21, 2021, 7:37 PM IST

Updated : May 21, 2021, 9:17 PM IST

ಸೌತಾಂಪ್ಟನ್​​: ಮುಂಬರುವ ಇಂಗ್ಲೆಂಡ್​ ವಿರುದ್ಧದ ಎರಡು ಟೆಸ್ಟ್​ ಪಂದ್ಯಗಳ ಸರಣಿ ಭಾರತ ವಿರುದ್ಧದ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​​ಗೆ ಸಜ್ಜುಗೊಳ್ಳಲು ಉತ್ತಮ ವೇದಿಕೆ ಎಂದು ಟಿಮ್​ ಸೌಥಿ ಅಭಿಪ್ರಾಯಪಟ್ಟಿದ್ದಾರೆ.

ಲಾರ್ಡ್ಸ್​​ನಲ್ಲಿ ಜೂನ್​​ 2-6 ಮತ್ತು ಬರ್ಮಿಂಗ್​ಹ್ಯಾಮ್​​ನಲ್ಲಿ ಜೂನ್​ 10-14ರವರೆಗೆ ನ್ಯೂಜಿಲ್ಯಾಂಡ್​ ಕ್ರಿಕೆಟ್ ತಂಡ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದ್ದು, ತದನಂತರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಜೂನ್ 18ರಿಂದ ಪ್ರಾರಂಭಗೊಳ್ಳಲಿದೆ.

ಇದೇ ವಿಚಾರವಾಗಿ ಮಾತನಾಡಿರುವ ನ್ಯೂಜಿಲ್ಯಾಂಡ್​ ತಂಡದ ವೇಗದ ಬೌಲರ್​ ಟಿಮ್ ಸೌಥಿ, ಎರಡು ಟೆಸ್ಟ್​​ ಪಂದ್ಯಗಳು ನಮಗೆ ತಯಾರಿ ನಡೆಸಲು ಉತ್ತಮ ವೇದಿಕೆಯಾಗಿವೆ ಎಂದಿದ್ದಾರೆ.

ಇದನ್ನೂ ಓದಿ: ವಿದೇಶಿ ಆಟಗಾರ್ತಿಯರ ರೀತಿ ನಮ್ಮ ಮಹಿಳಾ ಕ್ರಿಕೆಟರ್ಸ್​ ಹೆಚ್ಚು ಬಲಶಾಲಿಗಳಲ್ಲ: ಅಭಯ್​ ಶರ್ಮಾ

32 ವರ್ಷದ ಸೌಥಿ ಟೆಸ್ಟ್​ನಲ್ಲಿ 302 ವಿಕೆಟ್​ ಪಡೆದುಕೊಂಡಿದ್ದು, ಭಾರತದ ವಿರುದ್ಧ ದೊಡ್ಡ ಯುದ್ಧಕ್ಕೆ ಸಜ್ಜಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಮೂರು ಟೆಸ್ಟ್​ ಪಂದ್ಯಗಳನ್ನ ಆಡುತ್ತಿರುವ ಕಾರಣ ಇದೊಂದು ರೋಮಾಂಚನಕಾರಿ ಅನುಭವವಾಗಲಿದೆ ಎಂದಿರುವ ಸೌಥಿ, ಇದೊಂದು ಭಾವನಾತ್ಮಕ ಪಂದ್ಯವಾಗಿರಲಿದೆ ಎಂದಿದ್ದಾರೆ.

Last Updated : May 21, 2021, 9:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.