ಹೈದರಾಬಾದ್(ಡೆಸ್ಕ್): ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ತಾರೆ ಫಿಲಿಫ್ ಹ್ಯೂಸ್ ಮೈದಾನದಲ್ಲಿ ಬೌನ್ಸರ್ ಏಟು ತಿಂದು ಮೃತಪಟ್ಟು ಇಂದಿಗೆ 7 ವರ್ಷಗಳು ತುಂಬಿದ್ದು, ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲಾತಾಣದ ಮೂಲಕ ಗೌರವ ಸಲ್ಲಿಸಿದ್ದಾರೆ.
2014, ನವೆಂಬರ್ 25 ರಂದು ಆಸ್ಟ್ರೇಲಿಯಾದ ಶೆಫೀಲ್ಡ್ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ತಂಡದ ಪರ ಹ್ಯೂಸ್ ಬ್ಯಾಟಿಂಗ್ ಮಾಡುತ್ತಿದ್ದರು. ನ್ಯೂ ಸೌತ್ ವೇಲ್ಸ್ನ ಸೀನ್ ಅಬೋಟ್ ಎಸೆದ ಬೌನ್ಸರ್ ತಲೆಯ ಹಿಂಭಾಗಕ್ಕೆ ಅಪ್ಪಳಿಸಿದ್ದರಿಂದ ಹ್ಯೂಸ್ ಸ್ಥಳದಲ್ಲೇ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎರಡೂ ದಿನಗಳ ಕಾಲ ಸಿಡ್ನಿಯ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದ ಹ್ಯೂಸ್ ಎರಡೂ ದಿನಗಳ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದರು. ಈ ಘಟನೆ ಕ್ರಿಕೆಟ್ ಲೋಕವನ್ನೇ ದಂಗಾಗಿಸಿತ್ತು. ಕೇವಲ 25 ವರ್ಷ ವಯಸ್ಸಿಗೆ ದಾರುಣ ಸಾವು ಕಂಡ ಪ್ರತಿಭಾವಂತ ಬ್ಯಾಟ್ಸ್ಮನ್ ಹ್ಯೂಸ್ ಆಸ್ಟ್ರೇಲಿಯಾ ಪರ 25 ಟೆಸ್ಟ್ ಹಾಗೂ 24 ಏಕದಿನ ಪಂದ್ಯಗಳನ್ನಾಡಿದ್ದರು.
ಫಿಲಿಫ್ ಹ್ಯೂಸ್ ದುರಂತ ಸಾವಿನ ನಂತರ ಕ್ರಿಕೆಟ್ ಮೈದಾನದಲ್ಲಿ ಇಂತಹ ಘಟನೆ ಮರುಕಳಿಸಬಾರದೆಂದು ಕ್ರಿಕೆಟ್ ಆಸ್ಟ್ರೇಲಿಯಾ, ಅತ್ಯುತ್ತಮ ಹೆಲ್ಮೆಟ್, ನೆಕ್ ಗಾರ್ಡ್ಗಳನ್ನು ಕಡ್ಡಾಯಗೊಳಿಸಿದೆ. ಐಸಿಸಿ ಕೂಡ ಹೆಲ್ಮೆಟ್ಗೆ ಚೆಂಡು ಬಡಿದರೆ ಆತನ ಬದಲಾಗಿ ಮತ್ತೊಬ್ಬ ಬ್ಯಾಟರ್ concussion substitute ಆಗಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಿ ಹೊಸ ನಿಯಮವನ್ನೇ ಜಾರಿಗೆ ತಂದಿದೆ.
-
Remembering Phillip Hughes 💔
— cricket.com.au (@cricketcomau) November 27, 2021 " class="align-text-top noRightClick twitterSection" data="
His career in pictures: https://t.co/RHkEX1jPwQ #63NotOut pic.twitter.com/jPqXv2CNzg
">Remembering Phillip Hughes 💔
— cricket.com.au (@cricketcomau) November 27, 2021
His career in pictures: https://t.co/RHkEX1jPwQ #63NotOut pic.twitter.com/jPqXv2CNzgRemembering Phillip Hughes 💔
— cricket.com.au (@cricketcomau) November 27, 2021
His career in pictures: https://t.co/RHkEX1jPwQ #63NotOut pic.twitter.com/jPqXv2CNzg
#63NotOut
ಕ್ರಿಕೆಟ್ ಲೋಕದ ಕರಾಳದಿನವಾದ ಈ ದಿನವನ್ನು ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ನೆನೆದಿದ್ದು, ಅಂದು ಹ್ಯೂಸ್ 63 ರನ್ಗಳಿಸಿ ನಾಟೌಟ್ ಆಗಿಯೇ ಕೊನೆಯುಸಿರೆಳೆದಿದ್ದರಿಂದ ಟ್ವಿಟರ್ನಲ್ಲಿ ವಿಶ್ವದ ಹಲವಾರು ಕ್ರಿಕೆಟಿಗರು, ಕ್ರಿಕೆಟ್ ಬೋರ್ಡ್ಗಳು ಮತ್ತು ಅಭಿಮಾನಿಗಳು ಹ್ಯೂಸ್ ಫೋಟೋದ ಜೊತೆಗೆ #63NotOut ಎಂದು ಟ್ಯಾಗ್ ಮಾಡಿ ದಿವಂಗತ ಕ್ರಿಕೆಟಿಗನಿಗೆ ಸಂತಾಪ ಸೂಚಿಸುತ್ತಿದ್ದಾರೆ.
ಇದನ್ನು ಓದಿ:ಮುಂಬೈ ಉಗ್ರರ ದಾಳಿಗೆ 13 ವರ್ಷ: 'ಈ ದಿನವನ್ನೆಂದಿಗೂ ಮರೆಯಲಾರೆವು'- ಕೊಹ್ಲಿ ಸೇರಿದಂತೆ ಕ್ರಿಕೆಟಿಗರಿಂದ ಸ್ಮರಣೆ
-
Forever in our hearts. #63notout pic.twitter.com/6ysuxKIL6K
— Sydney Cricket Ground (@scg) November 27, 2021 " class="align-text-top noRightClick twitterSection" data="
">Forever in our hearts. #63notout pic.twitter.com/6ysuxKIL6K
— Sydney Cricket Ground (@scg) November 27, 2021Forever in our hearts. #63notout pic.twitter.com/6ysuxKIL6K
— Sydney Cricket Ground (@scg) November 27, 2021
-
𝙍𝙚𝙢𝙚𝙢𝙗𝙚𝙧𝙞𝙣𝙜 𝙋𝙝𝙞𝙡 𝙃𝙪𝙜𝙝𝙚𝙨. pic.twitter.com/S8mzORWhwM
— Australian Cricketers' Association (@ACA_Players) November 26, 2021 " class="align-text-top noRightClick twitterSection" data="
">𝙍𝙚𝙢𝙚𝙢𝙗𝙚𝙧𝙞𝙣𝙜 𝙋𝙝𝙞𝙡 𝙃𝙪𝙜𝙝𝙚𝙨. pic.twitter.com/S8mzORWhwM
— Australian Cricketers' Association (@ACA_Players) November 26, 2021𝙍𝙚𝙢𝙚𝙢𝙗𝙚𝙧𝙞𝙣𝙜 𝙋𝙝𝙞𝙡 𝙃𝙪𝙜𝙝𝙚𝙨. pic.twitter.com/S8mzORWhwM
— Australian Cricketers' Association (@ACA_Players) November 26, 2021