ETV Bharat / sports

ರಿಟೈನ್​ನಲ್ಲಿ ಕೋಟ್ಯಧಿಪತಿಗಳಾದ ಟಾಪ್ 5 ಕ್ರಿಕೆಟಿಗರು ಇವರೇ ನೋಡಿ - ಮಯಾಂಕ್ ಅಗರ್​ವಾಲ್​

ಕಳೆದ ಆವೃತ್ತಿಗಳಲ್ಲಿ ಕೇವಲ ಮೂಲಬೆಲೆ ಮಾರಾಟವಾಗಿದ್ದ ವೆಂಕಟೇಶ್ ಅಯ್ಯರ್ ಮತ್ತು 2021ರಲ್ಲಿ ಆರೆಂಜ್ ಕ್ಯಾಪ್​ ಪಡೆದುಕೊಂಡಿದ್ದ ರುತುರಾಜ್ ಗಾಯಕ್ವಾಡ್​ ಜಾಕ್​ಪಾಟ್​ ಪಡೆದಿದ್ದಾರೆ. ಇವರಿಬ್ಬರು ಕೇವಲ 20 ಲಕ್ಷ ಮೂಲ ಬೆಲೆಯಿಂದ ಕ್ರಮವಾಗಿ 8 ಮತ್ತು 6 ಕೋಟಿ ರೂಗಳಿಗೆ ರಿಟೈನ್ ಆಗಿದ್ದಾರೆ.

TOP players who have got highest salary hikes in IPL retention

author img

By

Published : Dec 1, 2021, 6:05 PM IST

ಮುಂಬೈ: 2022ರ ಮೆಗಾ ಹರಾಜಿಗೂ ಐಪಿಎಲ್ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಮಂಗಳವಾರ ರಿಟೈನ್ ಮಾಡಿಕೊಂಡಿವೆ. ಕೆಲವು ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟಿದ್ದು, ಕೆಲವು ದೇಶಿ ಕ್ರಕೆಟಿಗರಿಗೆ ಬಂಪರ್​ ದೊರೆತಿದೆ.

ಕಳೆದ ಆವೃತ್ತಿಗಳಲ್ಲಿ ಕೇವಲ ಮೂಲಬೆಲೆ ಮರಾಟವಾಗಿದ್ದ ವೆಂಕಟೇಶ್ ಅಯ್ಯರ್ ಮತ್ತು 2021ರಲ್ಲಿ ಆರೆಂಜ್ ಕ್ಯಾಪ್​ ಪಡೆದುಕೊಂಡಿದ್ದ ರುತುರಾಜ್ ಗಾಯಕ್ವಾಡ್​ ಜಾಕ್​ಪಾಟ್​ ಪಡೆದಿದ್ದಾರೆ. ಇವರಿಬ್ಬರು ಕೇವಲ 20 ಲಕ್ಷ ಮೂಲ ಬೆಲೆಯಿಂದ ಕ್ರಮವಾಗಿ 8 ಮತ್ತು 6 ಕೋಟಿ ರೂಗಳಿಗೆ ರಿಟೈನ್ ಆಗಿದ್ದಾರೆ.

ರಿಟೈನ್​ನಲ್ಲಿ ಕೋಟ್ಯಧೀಶರಾದ ಕ್ರಿಕೆಟಿಗರು

ಕೇನ್​ ವಿಲಿಯಮ್ಸನ್​:

2015ರಲ್ಲಿ 60 ಲಕ್ಷ ಪಡೆದು ಸನ್​ರೈಸರ್ಸ್​ ಸೇರಿದ್ದ ವಿಲಿಯಮ್ಸನ್​ 2016ರ ವರೆಗೆ ಅಷ್ಟೇ ಮೊತ್ತವನ್ನು ಪಡೆದಿದ್ದರು. ಮತ್ತೆ 2017ರ ಹರಾಜಿನಲ್ಲಿ 3 ಕೋಟಿ ರೂ ಪಡೆದಿದ್ದರು. ಇದೀಗ ಅವರನ್ನ ಎಸ್​ಆರ್​ಹೆಚ್​ ಮೊದಲ ಆಟಗಾರನಾಗಿ ರಿಟೈನ್ ಮಾಡಿಕೊಂಡಿದ್ದು, ಮುಂದಿನ ಆವೃತ್ತಿಯಿಂದ 14 ಕೋಟಿ ರೂ ಪಡೆಯಲಿದ್ದಾರೆ.

ಮಯಾಂಕ್ ಅಗರ್​ವಾಲ್​: 12 ಕೋಟಿ

ಕೇವಲ ಒಂದು ಕೋಟಿ ರೂಗಳಿಗೆ 2018ರಿಂದಲೂ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದ ಕನ್ನಡಿಗ ಮಯಾಂಕ್​ ಅಗರ್​ವಾಲ್ ಕೊನೆಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಣವನ್ನು ಪಡೆದುಕೊಂಡಿದ್ದಾರೆ. ಅವರು ಪಂಜಾಬ್ ಫ್ರಾಂಚೈಸಿ 12 ಕೋಟಿ ರೂ ನೀಡಿ ಅವರನ್ನು ರಿಟೈನ್ ಮಾಡಿಕೊಂಡಿದೆ.

ಅಕ್ಷರ್ ಪಟೇಲ್: 9 ಕೋಟಿ ರೂ

ಭಾರತದ ತಂಡದಲ್ಲಿ ಖಾಯಂ ಸ್ಥಾನಗಿಟ್ಟಿಸಿಕೊಳ್ಳುತ್ತಿರುವ ಅಕ್ಷರ್ ಪಟೇಲ್ 2019ರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 5 ಕೋಟಿ ರೂ ನೀಡಿ ಖರೀದಿಸಿತ್ತು. ಇದೀಗ ಅವರನ್ನು ಡೆಲ್ಲಿ ತಂಡ 9 ಕೋಟಿ ರೂ ನೀಡಿ ರಿಟೈನ್​ ಮಾಡಿಕೊಂಡಿದೆ. ಇವರ ಮೂಲ ಬೆಲೆ 1 ಕೋಟಿ ರೂ ನಿಗದಿಪಡಿಸಿಕೊಂಡಿದ್ದರು.

ವೆಂಕಟೇಶ್ ಅಯ್ಯರ್: 8 ಕೋಟಿ

2020ರಲ್ಲಿ ಕೇವಲ 20 ಲಕ್ಷಕ್ಕೆ ಶಾರುಖ್ ಖಾನ್ ಒಡೆತನದ ಕೆಕೆಆರ್ ಫ್ರಾಂಚೈಸಿ ಖರೀದಿಸಿತ್ತು. ದುಬೈನಲ್ಲಿ ನಡೆದ 2ನೇ ಹಂತದ ಐಪಿಎಲ್​ನಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರಿ ಕೆಕೆಆರ್ ಫೈನಲ್ ಪ್ರವೇಶಿಸಲು ನೆರವಾಗಿದ್ದರು. ನಂತರ ಭಾರತ ಟಿ-20 ತಂಡಕ್ಕೂ ಆಯ್ಕೆಯಾಗುವಲ್ಲಿ ಯಶಸ್ವಿಯಾದರು. ಇದೀಗ ಅವರನ್ನು ಕೆಕೆಆರ್​ ಮೂಲ ಬೆಲೆಗಿಂತ ಶೇಕಡಾ 4000ದಷ್ಟು ಹೆಚ್ಚು ಹಣ ಪಡೆದಿದ್ದಾರೆ.

ಪೃಥ್ವಿ ಶಾ: 7.5 ಕೋಟಿ ರೂ

ಭಾರತಕ್ಕೆ 2018ರ ಅಂಡರ್​ 19 ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದ ಪೃಥ್ವಿ ಶಾರನ್ನು 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಖರೀದಿಸಿತ್ತು. ಈ ನಾಲ್ಕು ವರ್ಷ ತನ್ನಲ್ಲೇ ಉಳಿಸಿಕೊಂಡಿದ್ದ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನ ಪೃಥ್ವಿ ಶಾರನ್ನು ಡೆಲ್ಲಿ ತಂಡ ಬರೋಬ್ಬರಿ 7.5 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ.

ರುತುರಾಜ್ ಗಾಯ್ಕವಾಡ್​: 6 ಕೋಟಿ

2010ರ ಹರಾಜಿನಲ್ಲಿ 40 ಲಕ್ಷ ಪಡೆದಿದ್ದ ರುತುರಾಜ್ ಗಾಯಕ್ವಾಡ್​ 2021ರ ಐಪಿಎಲ್​ನಲ್ಲಿ ಆರೆಂಜ್​ ಕ್ಯಾಪ್​ ಪಡೆದಿದ್ದರು. ಇವರನ್ನು ಫ್ರಾಂಚೈಸಿ 6 ಕೋಟಿ ರೂಗೆ ರಿಟೈನ್ ಮಾಡಿಕೊಂಡಿದೆ.

ಉಮ್ರಾನ್ ಮಲಿಕ್ ಮತ್ತು ಅಬ್ದುಲ್ ಸಮದ್​: 4 ಕೋಟಿ

ವೇಗ್ ಬೌಲಿಂಗ್ ಮೂಲಕ ಕ್ರಿಕೆಟ್​ ಪ್ರೇಮಿಗಳ ಮನಸ್ಸು ಗೆದ್ದಿದ್ದ ಜಮ್ಮು ಕಾಶ್ಮೀರದ ಬೌಲರ್ ಉಮ್ರಾನ್​ ಮಲಿಕ್ 10 ಲಕ್ಷ ಮತ್ತು ಸ್ಫೋಟಕ ಆಲ್​ರೌಂಡರ್​ ಅಬ್ದುಲ್ ಸಮದ್ ಹಿಂದಿನ ಆವೃತ್ತಿಯಲ್ಲಿ​ ಕೇವಲ 20 ಲಕ್ಷ ಪಡೆದಿದ್ದರು. ಆದರೆ, ಹೈದರಾಬಾದ್​ ತಲಾ 4 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ.

ಇವರಲ್ಲದೇ ಹಿಂದಿನ ಆವೃತ್ತಿಯಲ್ಲಿ 20 ಲಕ್ಷ ಪಡೆದಿದ್ದ ಅರ್ಶದೀಪ್ ಸಿಂಗ್ 4 ಕೋಟಿ, 2.6 ಕೋಟಿ ಪಡೆದಿದ್ದ ಮೊಹಮ್ಮದ್ ಸಿರಾಜ್​ 7 ಕೋಟಿ, 8.5 ಕೋಟಿ ಪಡೆದಿದ್ದ ಸಂಜು ಸಾಮ್ಸನ್​ 14 ಕೋಟಿ, 8.5 ಕೋಟಿ ಪಡೆದಿದ್ದ ರಸೆಲ್ 12 ಕೋಟಿ, 5 ಕೋಟಿ ಪಡೆದಿದ್ದ ಬುಮ್ರಾ 12 ಕೋಟಿ, 4.4 ಕೋಟಿ ರೂ ಪಡೆದಿದ್ದ ಜೋಶ್ ಬಟ್ಲರ್​ 10 ಕೋಟಿ, 4 ಕೋಟಿ ಪಡೆದಿದ್ದ ವರುಣ್ ಚಕ್ರವರ್ತಿ 8 ಕೋಟಿ, 2.4 ಕೋಟಿ ಪಡೆದಿದ್ದ ಯಶಸ್ವಿ ಜೈಸ್ವಾಲ್​ 4 ಕೋಟಿ ರೂ ಪಡೆದಿದ್ದಾರೆ.

ಇದನ್ನೂ ಓದಿ:ಹೊಸ ಫ್ರಾಂಚೈಸಿ ಕೆಎಲ್​ ರಾಹುಲ್​ ಸಂಪರ್ಕಿಸಿದ್ದರೆ ಅದು ಅನೈತಿಕ : ಪಂಜಾಬ್ ಕಿಂಗ್ಸ್ ಸಿಡಿಮಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.