ETV Bharat / sports

ಏಕದಿನ ವಿಶ್ವಕಪ್​ ಸರಣಿಯಲ್ಲಿ ಅತೀ ಹೆಚ್ಚು ರನ್​ಗಳಿಸಿರುವ ಅಗ್ರ ಐವರು ಆಟಗಾರರು ಇವರೇ ನೋಡಿ.. - world cup high scored players

ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ರನ್​ಗಳಿಸಿದ ಅಗ್ರ ಐವರು ಬ್ಯಾಟರ್​ಗಳ ಪಟ್ಟಿ ಈ ಕೆಳಗಿನಂತೆ ಇದೆ.

ಏಕದಿನ ವಿಶ್ವಕಪ್
ಏಕದಿನ ವಿಶ್ವಕಪ್
author img

By ETV Bharat Karnataka Team

Published : Oct 2, 2023, 11:45 AM IST

ಹೈದರಾಬಾದ್: ಏಕದಿನ ವಿಶ್ವಕಪ್​ 2023ಕ್ಕೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ವಿಶ್ವಕಪ್​ನಲ್ಲಿ ಭಾಗಿಯಾಗಲಿರುವ ಎಲ್ಲ 10 ತಂಡಗಳ ಆಟಗಾರರು ಭಾರತಕ್ಕೆ ಬಂದಿಳಿದಿದ್ದು, ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಭಾರತ ಈ ಬಾರಿಯ ವಿಶ್ವಕಪ್​​ ಜಯಿಸುವ ಫೆವರೀಟ್​ ತಂಡ ಎನಿಸಿಕೊಂಡಿದೆ. ಈ ವರೆಗೂ ಭಾರತ ಎರಡು ಬಾರಿ ಏಕದಿನ ವಿಶ್ವಕಪ್​ ಅನ್ನು ಜಯಿಸಿದೆ. ​ 1983ರಲ್ಲಿ ಕಪಿಲ್​​​ ದೇವ್​ ಅವರ ನಾಯಕತ್ವದಲ್ಲಿ ಮೊದಲ ಏಕದಿನ ವಿಶ್ವಕಪ್​​ ಮತ್ತು 2011ರಲ್ಲಿ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಎರಡನೇ ಕಪ್​ ಅನ್ನು ಗೆದ್ದುಕೊಂಡಿದೆ. ಇನ್ನು ವಿಶ್ವಕಪ್​ನಲ್ಲಿ ದೇಶ, ವಿದೇಶದ ಆಟಗಾರರು ಹಲವಾರು ದಾಖಲೆಗಳನ್ನು ಕೂಡ ಬರೆದಿದ್ದಾರೆ. ಅದರಲ್ಲಿ ವಿಶ್ವಕಪ್​ನಲ್ಲಿ ಹೆಚ್ಚಿನ ರನ್​ಗಳಿಸಿರುವ ಐದು ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಏಕದಿನ ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್​ಗಳು

1. ಸಚಿನ್​ ತೆಂಡೂಲ್ಕರ್​: ಏಕದಿನ ವಿಶ್ವಕಪ್​ನ ಅಗ್ರ ಐದು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರು ಅಗ್ರಸ್ಥಾನದಲ್ಲಿದೆ. ಸಚಿನ್ ತೆಂಡೂಲ್ಕರ್ 1992 ರಿಂದ 2011 ರವರೆಗಿನ ಏಕದಿನ ವಿಶ್ವಕಪ್​ ಸರಣಿಯಲ್ಲಿ ಭಾಗಿಯಾಗಿದ್ದಾರೆ. ಈ ಅವಧಿಯಲ್ಲಿ ಅವರು ಒಟ್ಟು 45 ಪಂದ್ಯಗಳನ್ನು ಆಡಿದ್ದು, ಈ ಪೈಕಿ 44 ಇನ್ನಿಂಗ್ಸ್​ಗಳಲ್ಲಿ​ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದಾರೆ. ಇದರಲ್ಲಿ ಅವರು​ ಆರು ಶತಕಗಳು ಮತ್ತು 15 ಅರ್ಧ ಶತಕಗಳೊಂದಿಗೆ 2,278 ರನ್ ಗಳಿಸಿದ್ದಾರೆ. 56.95 ಸರಾಸರಿ ಹೊಂದಿದ್ದು ಅವರ ಸ್ಟ್ರೈಕ್ ರೇಟ್‌ 88 ಆಗಿದೆ. ಸರಣಿಯಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ತೆಂಡೂಲ್ಕರ್ ಅವರ ಗರಿಷ್ಠ ಸ್ಕೋರ್ 154 ಆಗಿದೆ.

2. ರಿಕಿ ಪಾಂಟಿಂಗ್​: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಪಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 46 ವಿಶ್ವಕಪ್​ ಪಂದ್ಯಗಳ ಪೈಕಿ 42 ಇನ್ನಿಂಗ್ಸ್​ಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಐದು ಶತಕ ಮತ್ತು ಆರು ಅರ್ಧಶತಕಗಳೊಂದಿಗೆ 45.86 ಸರಾಸರಿಯಲ್ಲಿ 1,743 ರನ್ ಗಳಿಸಿದ್ದಾರೆ. ರಿಕಿ ಪಾಂಟಿಂಗ್ ಒಂದು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅವರ ವಿಶ್ವಕಪ್​ನ ಗರಿಷ್ಠ ಸ್ಕೋರ್ 140 ಆಗಿದೆ.

3. ಕುಮಾರ್​ ಸಂಗಕ್ಕಾರ: ಶ್ರೀಲಂಕಾದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್​ ಕುಮಾರ ಸಂಗಕ್ಕಾರ ಅವರ ಹೆಸರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅವರು 2003 ರಿಂದ 2015 ರವರೆಗೆ ವಿಶ್ವಕಪ್​ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 37 ಪಂದ್ಯಗಳ ಪೈಕಿ 35 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. 56.74 ಸರಾಸರಿಯಲ್ಲಿ 1,532 ರನ್ ಗಳಿಸಿರುವ ಸಂಗಕ್ಕಾರ ಐದು ಶತಕಗಳು ಮತ್ತು ಏಳು ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಒಮ್ಮೆ ಶೂನ್ಯಕ್ಕೆ ಔಟಾಗಿದ್ದಾರೆ. ಅವರ ಗರಿಷ್ಠ ಸ್ಕೋರ್ 124 ಆಗಿದೆ.

4. ಬ್ರಿಯಾನ್ ಲಾರಾ: ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್​ನ ಮಾಜಿ ಬ್ಯಾಟರ್ ಬ್ರಿಯಾನ್ ಲಾರಾ ಅವರ ಹೆಸರು ಇದೆ. ಅವರು 1992 ರಿಂದ 2007 ರವರೆಗೆ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದಾರೆ. ಒಟ್ಟು 34 ಪಂದ್ಯಗಳ ಪೈಕಿ 33 ಇನ್ನಿಂಗ್ಸ್‌ಗಳನ್ನು ಆಡಿರುವ ಅವರು 42.34 ಸರಾಸರಿಯಲ್ಲಿ 1,225 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ನಾಲ್ಕು ಅರ್ಧ ಶತಕಗಳನ್ನು ಸೇರಿವೆ. ಒಮ್ಮೆ ಡಕೌಟ್​ ಆಗಿದ್ದಾರೆ. ಅವರ ಗರಿಷ್ಠ ಸ್ಕೋರ್ 116 ಆಗಿದೆ.

5. ಎ ಬಿ ಡಿವಿಲಿಯರ್ಸ್: ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್ ಈ ಪಟ್ಟಿಯ ಐದನೇ ಸ್ಥಾನದಲ್ಲಿದ್ದಾರೆ. Mr.360 ಎಂದೇ ಖ್ಯಾತಿ ಪಡೆದಿರುವ ಡಿವಿಲಿಯರ್ಸ್​ 2007 ರಿಂದ 2015 ರವರೆಗಿನ ವಿಶ್ವಕಪ್‌ ಪಂದ್ಯಗಳನ್ನು ಆಡಿದ್ದಾರೆ. ನಾಲ್ಕು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 1,207 ರನ್ ಗಳಿಸಿರುವ ಅವರು ವಿಶ್ವಕಪ್​ ಟೂರ್ನಿಯಲ್ಲಿ ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಏಕದಿನ ವಿಶ್ವಕಪ್​ನ ಅವರ ಗರಿಷ್ಠ ಸ್ಕೋರ್ 162 ಆಗಿದೆ.

ಇದನ್ನೂ ಓದಿ: ವಿಶ್ವಕಪ್​ 2023: ತಿರುವನಂತಪುರಂ ಹೆಸರನ್ನು ದಕ್ಷಿಣ ಆಫ್ರಿಕಾ ಆಟಗಾರರು ಹೇಗೆಲ್ಲ ಉಚ್ಚರಿಸಿದ್ದಾರೆ ನೋಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.